ETV Bharat / briefs

ಯಾರು ಎಷ್ಟು ಮತಗಳಿಂದ ಗೆಲುವು.. ಅನಂತ್‌ಕುಮಾರ್‌ ಹೆಗ್ಡೆ ಗರಿಷ್ಠ- ವಿ.ಶ್ರೀನಿವಾಸ್‌ಪ್ರಸಾದ್‌ ಕನಿಷ್ಠ.. - ಅನಂತಕುಮಾರ ಹೆಗಡೆ

ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರ ಪಡೆದು ಗೆಲುವಿನ ನಗೆ ಬೀರಿದವರು. ರಾಜ್ಯದಲ್ಲಿ ಅತೀ ಹೆಚ್ಚ ಮತಗಳ ಅಂತರದಲ್ಲಿ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಗೆದ್ದಿದ್ದಾರೆ. ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅತೀ ಕಡಿಮೆ ಮತಗಳ ಅಂತರದ ಗೆಲುವು ಕಂಡಿದ್ದಾರೆ.

ಅತೀ ಹೆಚ್ಚು ಮತಗಳ ಅಂತರ ಸಾಧಿಸಿದವರು
author img

By

Published : May 26, 2019, 7:57 AM IST

ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ವಿಜೇತ ಅಭ್ಯರ್ಥಿಗಳು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿರುವುದು ಇನ್ನೊಂದು ವಿಶೇಷ.

ರಾಜ್ಯದ 28 ಕ್ಷೇತ್ರಗಳಲ್ಲಿ ಅತ್ಯಧಿಕ ಬಹುಮತ ಪಡೆದು ವಿಜೇತವಾಗಿರುವ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರು ಬರೋಬ್ಬರಿ 4,86,042 ಮತಗಳ ಅಂತರದಿಂದ ಜಯ ಪಡೆದಿದ್ದಾರೆ. ಇದರ ಬೆನ್ನಲ್ಲೆ ಮೂವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರ ಪಡೆದು ಜಯದ ನಗೆ ಬೀರಿದ್ದಾರೆ. ಬೆಳಗಾವಿ ಕ್ಷೇತ್ರದ ಸುರೇಶ ಅಂಗಡಿ 3.87 ಲಕ್ಷ ಮತಗಳು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿಸೂರ್ಯ 3.31 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ದಕ್ಷಿಣಕನ್ನಡ ಕ್ಷೇತ್ರದ ನಳೀನ್​ ಕಟೀಲ್​ ಅವರು 2.74 ಲಕ್ಷ ಮತಗಳ ಅಂತರ, ವಿಜಯಪುರದ ರಮೇಶ ಜಿಗಜಿಣಗಿ 2.58 ಲಕ್ಷ ಮತಗಳ ಅಂತರ, ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರು 2.23 ಲಕ್ಷ ಮತಗಳ ಅಂತರ, ಕೋಲಾರದ ಎಸ್​.ಮುನಿಸ್ವಾಮಿ 2.10 ಲಕ್ಷ ಮತಗಳ ಅಂತರ, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ 2.06 ಲಕ್ಷ ಮತಗಳ ಅಂತರ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ಪ್ರಹ್ಲಾದ್​ ಜೋಶಿ ಅವರು 2.05 ಲಕ್ಷ ಮತಗಳ ಅಂತರದಲ್ಲಿ ಜಯಿಸಿ ನಗೆ ಬೀರಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿ.ಎನ್.ಬಚ್ಚೇಗೌಡ, ದಾವಣಗೆರೆಯಿಂದ ಜಿ.ಎಂ.ಸಿದ್ದೇಶ್ವರ, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ್, ಬೆಂಗಳೂರು ಉತ್ತರ ಡಿ.ವಿ.ಸದಾನಂದಗೌಡ, ಹಾಸನದಿಂದ ಪ್ರಜ್ವಲ್​ ರೇವಣ್ಣ, ಹಾವೇರಿಯಿಂದ ಶಿವಕುಮಾರ ಉದಾಸಿ, ಮೈಸೂರು-ಕೊಡಗು ಪ್ರತಾಪ್ ಸಿಂಹ, ಮಂಡ್ಯ ಕ್ಷೇತ್ರದಿಂದ ಸುಮಲತಾ ಎ., ಚಿಕ್ಕೋಡಿಯ ಅಣ್ಣಾಸಾಹೇಬ ಜೊಲ್ಲೆ, ರಾಯಚೂರಿನ ರಾಜಾ ಅಮರೇಶ್ವರ ನಾಯಕ, ಬೀದರ್​ನ ಭಗವಂತ ಖೂಬಾ ಸೇರಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅತಿ ಕಡಿಮೆ ಮತಗಳ ಅಂತರದ ಗೆಲುವು ಕಂಡಿದ್ದಾರೆ.

Intro:ಬೆಂಗಳೂರು:ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಮೂರೂ ಪಕ್ಷಗಳ ಲೆಕ್ಕಾಚಾರವನ್ನು ತಪ್ಪುವಂತೆ ಮಾಡಿದೆ ನೇರ ಹಣಾಹಣೆಯ ಕಣದಲ್ಲಿ ಯಾರೇ ಗೆದ್ದರೂ ಹತ್ತಿಪ್ಪತ್ತು ಸಾವಿರ ಮತಗಳ ಅಂತರ ಎನ್ನುವ ನಿರೀಕ್ಷೆ ಹುಸಿಯಾಗಿದ್ದು ಬಹುತೇಕ ಅಭ್ಯರ್ಥಿಗಳ ಗೆಲುವಿನ ಅಂತರ ಲಕ್ಷದ ಲೆಕ್ಕ ದಾಟಿದೆ.
Body:
ಈ ಬಾರಿ 28 ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರೆ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ 3, 2 ಲಕ್ಷಕ್ಕೂ ಅಧಿಕ ಮತದ ಅಂತರದಲ್ಲಿ 6, 1ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ 11 ಹಾಗು ಒಂದು ಲಕ್ಷ ಮತಗಳಿಗೂ ಕಡಿಮೆ ಅಂತರದೊಳಗೆ 7 ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

4 ಲಕ್ಷ ದಾಟಿದವರು:

ಅನಂತಕುಮಾರ್ ಹೆಗಡೆ-4,86,042(ಉತ್ತರ ಕನ್ನಡ)

3 ಲಕ್ಷ ಅಂತರ ದಾಟಿದವರು:

ಸುರೇಶ್ ಅಂಗಡಿ-3,87,042(ಬೆಳಗಾವಿ)
ಶೋಭಾ ಕರಂದ್ಲಾಜೆ-3,49,599( ಉಡುಪಿ-ಚಿಕ್ಕಮಗಳೂರು)
ತೇಜಸ್ವಿ ಸೂರ್ಯ-3,31,192( ಬೆಂಗಳೂರು ದಕ್ಷಿಣ)

2 ಲಕ್ಷ ಅಂತರ ದಾಟಿದವರು:

ನಳೀನ್ ಕುಮಾರ್ ಕಟೀಲ್- 2,74,621(ದಕ್ಷಿಣ ಕನ್ನಡ)
ರಮೇಶ್ ಜಿಗಜಣಗಿ-2,58,038( ವಿಜಯಪುರ)
ಬಿವೈ ರಾಘವೇಂದ್ರ-2,23,360( ಶಿವಮೊಗ್ಗ)
ಎಸ್ ಮುನಿಸ್ವಾಮಿ-2,10,021( ಕೋಲಾರ)
ಡಿಕೆ ಸುರೇಶ್- 2,06,870 ( ಬೆಂಗಳೂರು ಗ್ರಾಮಾಂತರ)
ಪ್ರಹ್ಲಾದ್ ಜೋಶಿ-2,05,072( ಧಾರವಾಡ)

1 ಲಕ್ಷ ಅಂತರ ದಾಟಿದವರು:

ಬಿಎನ್ ಬಚ್ಚೇಗೌಡ-1,82,110(ಚಿಕ್ಕಬಳ್ಳಾಪುರ)
ಜಿಎಂ ಸಿದ್ದೇಶ್ವರ-1,69,702( ದಾವಣಗೆರೆ)
ಪಿಸಿ ಗದ್ದಿಗೌಡರ್- 1,68,187( ಬಾಗಲಕೋಟೆ)
ಡಿವಿ ಸದಾನಂದಗೌಡ-1,47,518( ಬೆಂಗಳೂರು ಉತ್ತರ)
ಪ್ರಜ್ವಲ್ ರೇವಣ್ಣ-1,41,324( ಹಾಸನ)
ಶಿವಕುಮಾರ ಉದಾಸಿ1,40,882 (ಹಾವೇರಿ)
ಪ್ರತಾಪ್ ಸಿಂಹ- 1,38,647(ಮೈಸೂರು-ಕೊಡಗು)
ಸುಮಲತಾ-1,25,876( ಮಂಡ್ಯ)
ಅಣ್ಣಾಸಾಹೇಬ ಜೊಲ್ಲೆ-1,18,877( ಚಿಕ್ಕೋಡಿ)
ರಾಜಾ ಅಮರೇಶ್ವರ ನಾಯಕ-1,17716( ರಾಯಚೂರು)
ಭಗವಂತ ಖೂಬಾ-1,16,834 (ಬೀದರ್)

1 ಲಕ್ಷದ ಒಳಗೆ ಗೆದ್ದವರು:

ಡಾ.ಉಮೇಶ್ ಜಾಧವ್,ಕರಡಿ ಸಂಗಣ್ಣ,ವೈ,ದೇವೇಂದ್ರಪ್ಪ,ಎ.ನಾರಾಯಣಸ್ವಾಮಿ, ಜಿ.ಎಸ್.ಬಸವರಾಜ್, ಶ್ರೀನಿವಾಸ್ ಪ್ರಸಾದ್,ಪಿ.ಸಿ ಮೋಹನ್

ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅತಿ ಹೆಚ್ಚು ಅಂತರದ ಗೆಲುವು ಕಂಡಿದ್ದರೆ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅತಿ ಕಡಿಮೆ ಮತಗಳ ಅಂತರದ ಗೆಲುವು ಕಂಡಿದ್ದಾರೆ ಇಬ್ಬರೂ ಕೂಡ ಬಿಜೆಪಿಯವರೇ ಆಗಿದ್ದಾರೆ.Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.