ಶಿವಮೊಗ್ಗ: ಜಿಲ್ಲೆಯಲ್ಲಿ ಚಿಕ್ಕ ಪ್ರಸಂಗವೊಂದು ದುರಂತಕ್ಕೆ ಕಾರಣವಾಗಿದೆ. ಮೈಮೇಲೆ ಇಲಿ ಬಿದ್ದಿದ್ದರಿಂದ ಆತಂಕಗೊಂಡ ಮಹಿಳೆಗೆ ಹೃದಯಘಾತ ಸಂಭವಿಸಿತ್ತು. ಬಳಿಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆ ಮಹಿಳೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕುರುವಳ್ಳಿಯಲ್ಲಿ ಘಟನೆ ನಡೆದಿದೆ.
ಕುರುವಳ್ಳಿಯ ಬೊಮ್ಮಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯ ನಿವಾಸಿ ಶಕುಂತಲಾ(52) ಮೃತ ಮಹಿಳೆ.
ಶಂಕುತಲಾರವರು ಮನೆಯಲ್ಲಿದ್ದಾಗ ಅವರ ಮೇಲೆ ದಿಢೀರ್ ಆಗಿ ಇಲಿ ಬಿದ್ದಿದೆ. ಇದರಿಂದ ಭಯಗೊಂಡ ಶಕುಂತಲಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.