ಚಾಮರಾಜನಗರ: ಸಮರ್ಪಕ ಪಡಿತರ ಸಿಗದಿರುವುದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹನೂರು ತಾಲೂಕಿನ ಗುಳ್ಯದ ಬಯಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದು, ಗ್ರಾಮದ 50 ಕ್ಕೂ ಹೆಚ್ಚು ಮಂದಿಗೆ ಬೆರಳಿನ ಮುದ್ರೆ ಸಮಸ್ಯೆಯಿಂದ ಅನ್ನಭಾಗ್ಯ, ವೃದ್ಧಾಪ್ಯ ವೇತನ ಪಡೆಯಲು ಸಾಧ್ಯವಾಗದೇ ಕಳೆದ 4 ತಿಂಗಳಿಂದ ಯೋಜನೆಯಿಂದ ವಂಚಿತರಾಗಿದ್ದಾರೆ.
ತಮಗೆ ಯೋಜನೆ ತಲುಪುವರೆಗೂ ಮತದಾನದಿಂದ ದೂರವಿರುತ್ತೇವೆ. ನೆಟ್ ವರ್ಕ್ ಸಮಸ್ಯೆ, ಬೆರಳಿನ ಮುದ್ರೆ ಸಮಸ್ಯೆಯಿಂದಾಗಿ ಸರ್ಕಾರ ಯಾವುದೇ ಯೋಜನೆ ಪಡೆಯಲಾಗದ ಮೇಲೆ ಮತದಾನ ಮಾಡಿ ಏನು ಪ್ರಯೋಜನ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಗ್ರಾಮದ ಹಲವು ಸಮಸ್ಯೆ ಈಡೇರುವವರೆಗೇ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಗ್ರಾಮಸ್ಥರ ಮನವೊಲಿಸಿ ಜನತಂತ್ರದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕಿದೆ.