ETV Bharat / briefs

ರಾಹುಲ್​ ಹಿಂದೆ ಬೀಟೌನ್​ ಬೆಡಗಿ... ವಿಶ್ವಕಪ್​ನಲ್ಲಿ ಕನ್ನಡಿಗನನ್ನು ಚಿಯರ್​ ಮಾಡ್ತಾಳಾ ಆಲಿಯಾ ಭಟ್​ ಗೆಳತಿ? - ಆಲಿಯಆ ಭಟ್​

ಕಳೆದ ಒಂದು ದಶತಕಗಳಿಂದ ಕ್ರಿಕೆಟ್​ ಹಾಗೂ ಬಾಲಿವುಡ್​ ನಟಿಯರ ನಡುವಿನ ಸ್ನೇಹ-ಪ್ರೀತಿ ಸಂಬಂಧ ಅನ್ನೋದು ಕಾಮನ್​ ಎನ್ನುವಂತಾಗಿದೆ. ಅದು ಐಪಿಎಲ್​ ಬಂದ ಮೇಲಂತೂ ಬಾಲಿವುಡ್​ ನಟಿಯರು ಹಾಗೂ ಕ್ರಿಕೆಟಿಗರ ನಡುವೆ ಸ್ನೇಹ ಹೆಚ್ಚಾಗುತ್ತಿದೆ.

kl
author img

By

Published : May 28, 2019, 9:09 PM IST

ಮುಂಬೈ: ಭಾರತ ತಂಡಕ್ಕೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ ಕ್ರಿಕೆಟರ್ ಕೆ.ಎಲ್.​ ರಾಹುಲ್​ರನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಚಿಯರ್​ ಮಾಡಲು ಬೀಟೌನ್​ ಬೆಡಗಿಯೊಬ್ಬರು ಸಿದ್ದರಾಗಿದ್ದಾರೆಂಬ ಗುಸುಗುಸು ಕೇಳಿ ಬರುತ್ತಿದೆ.

ಕಳೆದ ಒಂದು ದಶಕಗಳಿಂದ ಕ್ರಿಕೆಟ್​ ಹಾಗೂ ಬಾಲಿವುಡ್​ ನಟಿಯರ ನಡುವಿನ ಸ್ನೇಹ-ಪ್ರೀತಿ ಸಂಬಂಧ ಕಾಮನ್​ ಎನ್ನುಂತಾಗಿದೆ. ಅದು ಐಪಿಎಲ್​ ಬಂದ ಮೇಲಂತೂ ಬಾಲಿವುಡ್​ ನಟಿಯರು ಹಾಗೂ ಕ್ರಿಕೆಟಿಗರ ನಡುವೆ ಸ್ನೇಹ ಹೆಚ್ಚಾಗುತ್ತಿದೆ.

Alia Bhatt's best friend Akansha Ranjan
ಅಲಿಯಾ ಭಟ್​ ಮತ್ತು ಅಕಾನ್ಷಾ ರಂಜನ್​

ಈಗಾಗಲೆ ಭಾರತ ತಂಡದ ನಾಯಕ ಕೊಹ್ಲಿ ಬಾಲಿವುಡ್​ ಸ್ಟಾರ್​ ಅನುಷ್ಕಾ ಶರ್ಮಾರನ್ನು, ಮಾಜಿ ವೇಗಿ ಜಹೀರ್​ ಖಾನ್ ಚೆಕ್​ ದೇ ಇಂಡಿಯಾ ಖ್ಯಾತಿಯ ಸಾಗರಿಕಾ ಘಟ್ಗೆಯನ್ನು, ಹರ್ಭಜನ್​ಸಿಂಗ್​ ಗೀತಾ ಬಸ್ರಾರನ್ನು, ಯುವರಾಜ್​ ಸಿಂಗ್​ ಬ್ರಿಟನ್​ ಮೂಲದ ಹೇಜಲ್​ ಕೀಚ್​ರನ್ನು ಮದುವೆಯಾಗಿದ್ದಾರೆ.

ಇದೀಗ ಕೆಎಲ್​ ರಾಹುಲ್​ ಕೂಡ ಅದೇ ಸಾಲಿಗೆ ಸೇರಲಿದ್ದಾರಾ ಎಂಬ ಕುತೂಹಲವಿದೆ. ಏಕೆಂದರೆ ರಾಹುಲ್​ರನ್ನು ಐಪಿಎಲ್​ ಪಂದ್ಯದ ವೇಳೆ ಆಲಿಯಾ ಬಟ್​ ಗೆಳತಿಯಾದ ಆಕಾನ್ಷಾ ರಂಜನ್​ ಕಪೂರ್​ ಚಿಯರ್​ ಮಾಡುತ್ತಿದ್ದು ಕಂಡುಬಂದಿದೆ. ಇದರ ಜೊತೆಗೆ ರಾಹುಲ್​ ಹಾಗೂ ಆಕಾನ್ಷಾ ಇಬ್ಬರೂ ಸಿನಿಮಾ, ಡಿನ್ನರ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ರಾಹುಲ್​ ಜೊತೆ ಇರುವ ಸೆಲ್ಫಿಯನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವುದರಿಂದ ಇವರಿಬ್ಬರ ನಡುವೆ ಏನೋ ಇರಬಹುದು ಎಂಬ ಸುದ್ದಿ ನಿಜವಾಗುತ್ತಿದೆ.

ಈ ಹಿಂದೆಯೂ ರಾಹುಲ್​ ಬಾಲಿವುಡ್​ ನಟಿ ನಿಧಿ ಅಗರ್​ವಾಲ್​ ಜೊತೆಗೆ ಕಾಣಿಸಿಕೊಂಡು ಇವರಿಬ್ಬರು ಲವ್ವನಲ್ಲಿದ್ದಾರೆ ಎಂಬ ಗುಸುಗುಸು ಇತ್ತು.. ಆದರೆ ಸ್ವತಃ ರಾಹುಲ್​ ನಾವಿಬ್ಬರು ಸ್ನೇಹಿತರು ಎಂದು ಸ್ಪಷ್ಟನೇ ನೀಡಿ ಗಾಸಿಪ್​ಗೆ ಪೂರ್ಣ ವಿರಾಮ ಹಾಕಿದ್ದರು.

ಇದೀಗ ಅಕಾನ್ಷಾ ವಿಚಾರದಲ್ಲೂ ಸ್ವತಃ ರಾಹುಲ್​ ಸ್ಪಷ್ಟನೆ ನೀಡಲಿದ್ದಾರಾ ಎಂದು ಕಾದು ನೋಡಬೇಕಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.