ತಿರುವನಂತಪುರಂ(ಕೇರಳ) : ದೇವರನಾಡಿನಲ್ಲೂ ಕೊರೊನಾ ಅಬ್ಬರ ನಿಂತಿಲ್ಲ. ಇಂದು ಸೋಂಕಿತರ ಸಂಖ್ಯೆ 42 ಸಾವಿರಕ್ಕೇರಿದೆ. 4 ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರತಿ ಪಂಚಾಯತ್‌ನ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲು ನಿರ್ಧರಿಸಿತು.
ಪ್ರಸ್ತುತ ಕೊರೊನಾದ ಎರಡನೇ ಅಲೆಯಲ್ಲಿ ರಾಜ್ಯವು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ಈ ರೂಪಾಂತರಗೊಂಡ ವೈರಸ್ ಹೆಚ್ಚು ತೀವ್ರತರವಾಗಿದ್ದು, ವೇಗವಾಗಿ ಹರಡುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೋವಿಡ್ನ ಮೊದಲ ಅಲೆ ನಿಯಂತ್ರಿಸುವಲ್ಲಿ ಸ್ಥಳೀಯ ಸರ್ಕಾರಗಳು ವಹಿಸಿರುವ ಪಾತ್ರಕ್ಕೆ ಸಾಟಿಯಿಲ್ಲ. ಈ ಎರಡನೇ ಹಂತದಲ್ಲೂ, ಕೋವಿಡ್ ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿರುವ ಅವರು ಪ್ರಮುಖವಾದ ಪಾತ್ರವಹಿಸಿರುತ್ತಾರೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಜನರನ್ನು ಸಜ್ಜುಗೊಳಿಸಲು ಹಾಗೂ ಅವರ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರದೊಂದಿಗೆ ಕೈ ಜೋಡಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಬಲವಾದ ರಕ್ಷಣೆಯನ್ನು ರೂಪಿಸುವಂತೆ ನಿರ್ದೇಶನ ನೀಡಿದರು.