ETV Bharat / briefs

ಖಾಕಿ ಬದುಕಿಗೆ ವಿದಾಯ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಅಣ್ಣಾಮಲೈ! - ಭಾವನಾತ್ಮಕ ಪತ್ರ

ದಕ್ಷ, ಪ್ರಾಮಾಣಿಕ ಐಪಿಎಸ್​ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮ್ಮ ಖಾಕಿ ಜೀವನಕ್ಕೆ ಗುಡ್​ಬೈ ಹೇಳಿದ್ದು, ಇದರ ಮಧ್ಯೆ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಅಣ್ಣಾಮಲೈ
author img

By

Published : May 29, 2019, 9:44 AM IST

ಬೆಂಗಳೂರು: 'ಕರ್ನಾಟಕದ ಸಿಂಗಂ' ಖ್ಯಾತಿಯ ಅಣ್ಣಾಮಲೈ ಐಪಿಎಸ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಯಕ್ತಿಕ ಜೀವನಕ್ಕೆ ಸಮಯ ಕೊಡುವ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಈಗಾಗಲೇ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದು, ಈ ಮಧ್ಯೆ ಅಣ್ಣಾಮಲೈ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಅಣ್ಣಾಮಲೈ ಪತ್ರ ಸಾರಾಂಶ:
ನಿಮ್ಮೆಲ್ಲರಿಗೂ ಶುಭಾಶಯಗಳು. ನಾನು ರಾಜೀನಾಮೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪ್ರಕಟಗೊಳ್ಳುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ನಾನು ಈ ಪತ್ರ ಬರೆಯುತ್ತಿರುವೆ. ಮೇ 28ರ 2019ರಂದು ನಾನು ಪೊಲೀಸ್​ ಸೇವೆಗೆ ರಾಜೀನಾಮೆ ಸಲ್ಲಿಕೆ ಮಾಡಿರುವೆ. ಈ ಪ್ರಕ್ರಿಯೆ ಮುಕ್ತಾಯಗೊಳ್ಳಲು ಇನ್ನು ಕೆಲದಿನಗಳ ಕಾಲಾವಕಾಶ ಬೇಕು. ಇದರ ಮಧ್ಯೆ ಹರಡಿರುವ ಕೆಲವು ಊಹಾಪೋಹಗಳಿಗೆ ನಾನು ನೇರವಾಗಿ ಉತ್ತರ ನೀಡಿರುವೆ.

ನಾನು ಸೇವೆ ಸಲ್ಲಿಸುತ್ತಿದ್ದ ಪೊಲೀಸ್​ ಇಲಾಖೆಗೆ ದಿಢೀರ್​ ಆಗಿ ರಾಜೀನಾಮೆ ನೀಡಿಲ್ಲ.ಕಳೆದ ಆರು ತಿಂಗಳಿಂದ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿರುವೆ. ಕಳೆದ 9 ವರ್ಷಗಳಿಂದ ಖಾಕಿ ಬಟ್ಟೆ ಹಾಕಿಕೊಂಡು ಸೇವೆ ಸಲ್ಲಿಸಿರುವೆ. ಖಾಕಿ ಸೇವೆಯ ಪ್ರತಿಕ್ಷಣವನ್ನೂ ಆನಂದಿಸಿರುವೆ. ಖಾಕಿ ಜತೆ ಬದುಕಿರುವೆ. ಈ ಅವಧಿಯಲ್ಲಿ ನಾನು ಅನೇಕ ವಯಕ್ತಿಕ ಸಭೆ, ಸಮಾರಂಭ, ಕೆಲವೊಮ್ಮೆ ಕುಟುಂಬದ ಸಮಾರಂಭಗಳಲ್ಲೂ ಭಾಗಿಯಾಗಲು ಆಗಿಲ್ಲ. ತುಂಬಾ ಹತ್ತಿರದವರು ನಿಧನವಾದಾಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ಆಗಲಿಲ್ಲ. ಅದಕ್ಕೆ ನನಗೆ ಈಗಲೂ ಬೇಸರವಿದೆ. ಪೊಲೀಸ್​ ಕೆಲಸ ದೇವರಿಗೆ ಸಮವಾದದ್ದು. ಕೆಲವೊಮ್ಮೆ ತೀವ್ರ ಒತ್ತಡಕ್ಕೂ ಒಳಗಾಗಿದ್ದು,ಅವುಗಳನ್ನ ಸರಿಯಾಗಿ ನಿಭಾಯಿಸಿರುವೆ. ಕಷ್ಟದಲ್ಲಿದ್ದಾಗ ಅನೇಕರು ಸಹಾಯ ಮಾಡಿದ್ದಾರೆ.

Annamalai write a latter
ಅಣ್ಣಾಮಲೈ ಬರೆದ ಪತ್ರ

9 ವರ್ಷಗಳ ಪೊಲೀಸ್​ ಸೇವೆಗೆ ಫುಲ್​ ಸ್ಟಾಪ್​, ರಾಜೀನಾಮೆಗೆ ಕಾರಣ ತಿಳಿಸಿದ್ರು ಅಣ್ಣಾಮಲೈ

ಕಳೆದ ವರ್ಷ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಭೇಟಿ ನನ್ನ ಜೀವನದ ಆದ್ಯತೆ ಉತ್ತಮಗೊಳಿಸಲು ಸಹಾಯ ಮಾಡಿತ್ತು. ಮಧುಕರ್ ಶೆಟ್ಟಿ ಸರ್ ಸಾವು ನನಗೆ ನನ್ನ ಜೀವನದ ಬಗ್ಗೆ ಯೋಚಿಸಲು ಸಹಾಯ ಮಾಡಿತ್ತು. ಎಲ್ಲಾ ಒಳ್ಳೆಯ ಕ್ಷಣಗಳು ಕೊನೆಗೊಳ್ಳಲೇಬೇಕು. ಹೀಗಾಗಿ ಖಾಕಿಯಲ್ಲಿನ ನನ್ನ ದಿನಕ್ಕೆ ವಿದಾಯ ಹೇಳಲು ನಿರ್ಧರಿಸಿರುವೆ ಎಂದು ಬರೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಈ ವೇಳೆ ಸರ್ಕಾರಕ್ಕೆ ಅನಾನುಕೂಲ ಆಗುವ ಕಾರಣದಿಂದಾಗಿ ಸ್ವಲ್ಪ ಕಾಲ ಮುಂದೂಡಿಕೆ ಮಾಡಿರುವೆ. ನನ್ನ ರಾಜೀನಾಮೆ ಕೆಲವೊಬ್ಬರಿಗೆ ನೋವುಂಟು ಮಾಡಿದ್ದರೆ ಅದಕ್ಕೆ ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ.

ಮುಂದಿನ ನಡೆ ಏನು?
ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗಾಗಲೇ ಜೀವನದಲ್ಲಿ ಕಳೆದುಕೊಂಡಿರುವ ಸಂತೋಷದ ಕ್ಷಣ ಅನುಭವಿಸಲು ಇಷ್ಟಪಡುವೆ. ಸದ್ಯ ಸ್ವಲ್ಪ ವಿರಾಮ ಪಡೆದುಕೊಳ್ಳುವೆ. ನನ್ನ ಮಗನಿಗೆ ಒಳ್ಳೆಯ ತಂದೆಯಾಗಲು ಬಯಸಿದ್ದೇನೆ. ಆತನ ಪ್ರತಿಯೊಂದು ಬೆಳವಣಿಗೆಗಳನ್ನು ನೋಡಬೇಕು ಎಂದುಕೊಂಡಿದ್ದೇನೆ. ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಜನರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Intro:Body:

 ಖಾಕಿ ಬದುಕು ಇಲ್ಲಿಗೆ ಮುಕ್ತಾಯ... ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಅಣ್ಣಾಮಲೈ! 

ದಕ್ಷ, ಪ್ರಾಮಾಣಿಕ ಐಪಿಎಸ್​ ಅಧಿಕಾರಿ ಅಣ್ಣಾಮಲೈ ತಮ್ಮ ಖಾಕಿ ಜೀವನಕ್ಕೆ ಗುಡ್​ಬೈ ಹೇಳಿದ್ದು, ಇದರ ಮಧ್ಯೆ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. 

ಬೆಂಗಳೂರು: ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಐಪಿಎಸ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಜೀವನಕ್ಕೆ ಸಮಯ ಕೊಡುವ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಎಂದು ಈಗಾಗಲೇ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದು, ಇದರ ಮಧ್ಯೆ ದಕ್ಷ, ಪ್ರಾಮಾಣಿಕ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. 

ಅಣ್ಣಾಮಲೈ ಪತ್ರ

ನಿಮ್ಮೆಲ್ಲರಿಗೂ ಶುಭಾಶಯಗಳು. ನಾನು ರಾಜೀನಾಮೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪ್ರಕಟಗೊಳ್ಳುತ್ತಿರುವ ಸುದ್ದಿಗಳ ಹಿನ್ನಲೆಯಲ್ಲಿ ನಾನು ಪತ್ರ ಬರೆಯುತ್ತಿರುವೆ. ಮೇ 28ರ 2019ರಂದು ನಾನು ಪೊಲೀಸ್​ ಸೇವೆಗೆ ರಾಜೀನಾಮೆ ಸಲ್ಲಿಕೆ ಮಾಡಿರುವೆ. ಈ ಪ್ರಕ್ರಿಯೆ ಮುಕ್ತಾಯಗೊಳ್ಳಲು ಇನ್ನು ಕೆಲದಿನಗಳ ಕಾಲಾವಕಾಶ ಬೇಕು. ಇದರ ಮಧ್ಯೆ ಹರಡಿರುವ ಕೆಲವೊಂದು ಊಹಾಪೋಹಗಳಿಗೆ ನಾನು ನೇರವಾಗಿ ಉತ್ತರ ನೀಡಿರುವೆ.

ನಾನು ಸೇವೆ ಸಲ್ಲಿಸುತ್ತಿದ್ದ ಪೊಲೀಸ್​ ಇಲಾಖೆಗೆ ದಿಢೀರ್​ ಆಗಿ ರಾಜೀನಾಮೆ ನೀಡಿಲ್ಲ.ಕಳೆದ ಆರು ತಿಂಗಳಿಂದ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿರುವೆ. ಕಳೆದ 9 ವರ್ಷಗಳಿಂದ ಖಾಕಿ ಬಟ್ಟೆ ಹಾಕಿಕೊಂಡು  ಸೇವೆ ಸಲ್ಲಿಸಿರುವೆ. ಇದರ ಪ್ರತಿಕ್ಷಣ ಆನಂದಿಸಿರುವೆ. ಖಾಕಿ ಜತೆ ಬದುಕಿರುವೆ. ಈ ಅವಧಿಯಲ್ಲಿ ನಾನು ಅನೇಕ ವೈಯಕ್ತಿಕ ಸಭೆ, ಸಮಾರಂಭ, ಕೆಲವೊಮ್ಮೆ ಕುಟುಂಬದ ಸಮಾರಂಭಗಳಲ್ಲೂ ಭಾಗಿಯಾಗಲು ಆಗಿಲ್ಲ. ತುಂಬಾ ಹತ್ತಿರದವರು ನಿಧನವಾದಾಗ ಹೋಗಲು ಆಗಿಲ್ಲ. ಅದಕ್ಕೆ ಈಗಲೂ ಬೇಸರವಿದೆ. ಪೊಲೀಸ್​ ಕೆಲಸ ದೇವರಿಗೆ ಸಮವಾದದ್ದು, ಕೆಲವೊಮ್ಮೆ ಒತ್ತಡಕ್ಕೂ ಒಳಗಾಗಿದ್ದು, ಅವುಗಳನ್ನ ಸರಿಯಾಗಿ ನಿಭಾಯಿಸಿರುವೆ.  ಕಷ್ಟದಲ್ಲಿದ್ದಾಗ ಅನೇಕರು ಸಹಾಯ ಮಾಡಿದ್ದಾರೆ. 

ಕಳೆದ ವರ್ಷ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಿದ್ದಾಗ ನನ್ನ ಜೀವನದ ಆದ್ಯತೆ ಉತ್ತಮಗೊಳಿಸಲು ಸಹಾಯ ಮಾಡಿತ್ತು. ಮಧುಕರ್ ಶೆಟ್ಟಿ ಸರ್ ಸಾವು ನನಗೆ ನನ್ನ ಜೀವನದ ಬಗ್ಗೆ ಯೋಚಿಸಲು ಸಹಾಯ ಮಾಡಿತ್ತು. ಎಲ್ಲ ಒಳ್ಳೆಯ ಕ್ಷಣಗಳು ಕೊನೆಗೊಳ್ಳಲೇಬೇಕು. ಹೀಗಾಗಿ ಖಾಕಿಯಲ್ಲಿನ ನನ್ನ ದಿನಕ್ಕೆ ವಿದಾಯ ಹೇಳಲು ನಿರ್ಧರಿಸಿರುವೆ ಎಂದು ಬರೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ರಾಜೀನಾಮೆ ನೀಡಲು ಮುಂದಾಗಿದೆ. ಆದರೆ ಈ ವೇಳೆ ಸರ್ಕಾರಕ್ಕೆ ಅನಾನುಕೂಲ ಆಗುವ ಕಾರಣದಿಂದಾಗಿ ಸ್ವಲ್ಪ ಮುಂದೂಡಿಕೆ ಮಾಡಿರುವೆ. ನನ್ನ ರಾಜೀನಾಮೆ ಕೆಲವೊಬ್ಬರಿಗೆ ನೋವುಂಟು ಮಾಡಿದ್ದರೆ ಅದಕ್ಕೆ ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. 

ಮುಂದಿನ ನಡೆ ಏನು!?

ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗಾಗಲೇ ಜೀವನದಲ್ಲಿ ಕಳೆದುಕೊಂಡಿರುವ ಸಂತೋಷದ ಕ್ಷಣ ಅನುಭವಿಸಲು ಇಷ್ಟಪಡುವೆ. ಸದ್ಯ ಸ್ವಲ್ಪ ವಿರಾಮ ಪಡೆದುಕೊಳ್ಳುವೆ. ನನ್ನ ಮಗನಿಗೆ ಒಳ್ಳೆಯ ತಂದೆಯಾಗಲು ಬಯಸಿರುವೆ. ಆತನ ಪ್ರತಿಯೊಂದು ಬೆಳವಣಿಗೆ ಕ್ಷಣ ನೋಡಬೇಕು ಎಂದುಕೊಂಡಿರುವೆ. ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಜನರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.