ಬೆಂಗಳೂರು: ಜಿಂದಾಲ್ಗೆ ಭೂಮಿ ಮಾರಾಟದ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಏನು ಗೊತ್ತಿಲ್ಲ. ಅದು ಹಿಂದಿನ ಸರ್ಕಾರ ಇದ್ದಾಗ ಮಾಡಿದ್ದು, ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದರು.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಚ್.ಕೆ.ಪಾಟೀಲ್ ಏನು ಪತ್ರ ಬರೆದಿದ್ದಾರೆ ಅನ್ನೋದು ತಮಗೆ ಗೊತ್ತಿಲ್ಲ. ಇದೆಲ್ಲ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ವಿಚಾರ. ಈ ಬಗ್ಗೆ ಕೈಗಾರಿಕೆ ಸಚಿವರನ್ನೆ ಕೇಳಿ ಎಂದು ಹೇಳಿದರು.