ಮುಂಬೈ: ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಆಲ್ರೌಂಡರ್ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರ್ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದರು. ಇದರ ಮಧ್ಯೆ ಅವರಿಗೊಂದು ಭರ್ಜರಿ ಆಫರ್ ಹುಡುಕಿಕೊಂಡು ಬಂದಿದೆ.
ಕೆರಿಬಿಯನ್ ಪ್ರೀಮಿಯರ್ ಟಿ20ಲೀಗ್ನ ಪ್ಲೇಯರ್ ಡ್ರಾಫ್ಟ್‌ನಲ್ಲಿ ಇರ್ಫಾನ್ ಪಠಾಣ್ ಹೆಸರು ಕಾಣಿಸಿಕೊಂಡಿದ್ದು, 20 ದೇಶಗಳ 536 ಪ್ಲೇಯರ್ಸ್ಗಳಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಆಟಗಾರನೆಂಬ ರೆಕಾರ್ಡ್ ಕೂಡ ಇವರ ಪಾಲಾಗಿದೆ. ಡ್ರಾಫ್ಟ್ ಲಿಸ್ಟ್ ಪಟ್ಟಿಯನ್ನ ಈಗಾಗಲೇ ಆಯಾ ಪ್ರಾಂಚೈಸಿಗಳಿಗೆ ಕಳುಹಿಸಿಕೊಡಲಾಗಿದ್ದು, ಮೇ 22ರಂದು ಪ್ಲೇಯರ್ಸ್ಗಳ ಆಯ್ಕೆ ನಡೆಯಲಿದೆ. ಒಂದು ವೇಳೆ ಇದರಲ್ಲಿ ಇರ್ಫಾನ್ ಆಯ್ಕೆಯಾದರೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕೊನೆಯದಾಗಿ 2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಡಿರುವ ಇರ್ಫಾನ್ ಗುಜರಾತ್ ಲಯನ್ಸ್ ಪರ ಕೇವಲ 1 ಪಂದ್ಯವನ್ನಾಡಿದ್ದರು. ಅದಕ್ಕೂ ಮೊದಲು 2016ರಲ್ಲಿ ರೈಸಿಂಗ್ ಪುಣೆ ಪರ ಆರು ಪಂದ್ಯಗಳಲ್ಲಿ ಇರ್ಫಾನ್ ಕಣಕ್ಕಿಳಿದಿದ್ದರು. ಕೆರಿಬಿಯನ್ ಲೀಗ್ ಸೆಪ್ಟೆಂಬರ್ 4ರಿಂದ ಅಕ್ಟೋಬರ್ 12ರವರೆಗೆ ನಡೆಯಲಿದೆ.