ಮುಂಬೈ: ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಒಂಭತ್ತು ವಿಕೆಟ್ಗಳಿಂದ ಮಣಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಕೆಕೆಆರ್ ನಿಗದಿತ 20 ಓವರ್ನಲ್ಲಿ ಏಳು ವಿಕೆಟ್ ನಷ್ಟಕೆ 133 ರನ್ಗಳ ಸಾಧಾರಣ ಮೊತ್ತವನ್ನು ದಾಖಲಿಸಿತು. ಕ್ರಿಸ್ ಲಿನ್(41) ಹಾಗೂ ರಾಬಿನ್ ಉತ್ತಪ್ಪ(40) ರನ್ಗಳ ಹೊರತಾಗಿ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.
ಮುಂಬೈ ಪರ ಲಸಿತ್ ಮಲಿಂಗಾ ಮೂರು ವಿಕೆಟ್ ಕಿತ್ತರೆ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಹಂಚಿಕೊಂಡರು.
-
That's that from the league stage of the #VIVOIPL.
— IndianPremierLeague (@IPL) May 5, 2019 " class="align-text-top noRightClick twitterSection" data="
Mumbai Indians win by 9 wickets and are now the table toppers. pic.twitter.com/F3V0Ga7OsY
">That's that from the league stage of the #VIVOIPL.
— IndianPremierLeague (@IPL) May 5, 2019
Mumbai Indians win by 9 wickets and are now the table toppers. pic.twitter.com/F3V0Ga7OsYThat's that from the league stage of the #VIVOIPL.
— IndianPremierLeague (@IPL) May 5, 2019
Mumbai Indians win by 9 wickets and are now the table toppers. pic.twitter.com/F3V0Ga7OsY
134 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮ ಹಾಗೂ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ನೀಡಿದರು.
ಡಿಕಾಕ್ 30 ರನ್ ಗಳಿಸಿ ಔಟಾದರೆ ನಂತರ ಬಂದ ಸೂರ್ಯಕುಮಾರ್ ಯಾದವ್ ವೇಗದ 46 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್ ಶರ್ಮ ಜವಾಬ್ದಾರಿಯುತ 55 ರನ್ ಸಿಡಿಸಿ ಔಟಾಗದೆ ಉಳಿದರು.
ಈ ಸೋಲಿನೊಂದಿಗೆ ಕೆಕೆಆರ್ ಈ ಅವೃತ್ತಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದೆ. ಕೇವಲ ಹನ್ನೆರಡು ಅಂಕದೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ. ಇಂದಿನ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
-
Here it is the #VIVOIPL Points Table after the league stage.
— IndianPremierLeague (@IPL) May 5, 2019 " class="align-text-top noRightClick twitterSection" data="
Onto the Playoffs now 😎😎 pic.twitter.com/FULlVTcOFJ
">Here it is the #VIVOIPL Points Table after the league stage.
— IndianPremierLeague (@IPL) May 5, 2019
Onto the Playoffs now 😎😎 pic.twitter.com/FULlVTcOFJHere it is the #VIVOIPL Points Table after the league stage.
— IndianPremierLeague (@IPL) May 5, 2019
Onto the Playoffs now 😎😎 pic.twitter.com/FULlVTcOFJ
ಪ್ಲೇ ಆಫ್ ವೇಳಾಪಟ್ಟಿ ಹೀಗಿದೆ:
ಚೆನ್ನೈನಲ್ಲಿ ಮೇ 7ರಂದು ಮೊದಲ ಕ್ವಾಲಿಫೈಯರ್ ನಡೆಯಲಿದ್ದು, ಮುಂಬೈ ಹಾಗೂ ಚೆನ್ನೈ ಮುಖಾಮುಖಿಯಾಗಲಿವೆ. ಮೇ 8ರಂದು ನಡೆಯಲಿರುವ ಎಲಿಮಿನೇಟರ್ನಲ್ಲಿ ಡೆಲ್ಲಿ ಹಾಗೂ ಹೈದರಾಬಾದ್ ಸೆಣಸಾಡಲಿವೆ.
ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ನಲ್ಲಿ ಗೆದ್ದ ತಂಡಗಳು ಮೇ 10ರಂದು ನಡೆಯಲಿರುವ ಎರಡನೇ ಕ್ವಾಲಿಪೈಯರ್ನಲ್ಲಿ ಎದುರಾಗಲಿವೆ.
ಮೇ 12ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ಐಪಿಎಲ್ನ 12ನೇ ಆವೃತ್ತಿಯ ಉಪಾಂತ್ಯ ಪಂದ್ಯ ನಡೆಯಲಿದೆ.