ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ಇಂದು ರಚನೆಯಾಗಿದೆ.
24 ದಿನಗಳ ಕಾಲ ಒಬ್ಬರೂ ಸಚಿವರಿಲ್ಲದೆ ಆಡಳಿತ ನಡೆಸಿದ ಮುಖ್ಯಮಂತ್ರಿ ಬಿಎಸ್ವೈ ಅವರ ಸಂಪುಟಕ್ಕೆ ಮೊದಲ ಹಂತದಲ್ಲಿ 17ಮಂದಿ ಸೇರಿದ್ದಾರೆ. ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 17 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಅವರ ಶೈಕ್ಷಣಿಕ, ಆರ್ಥಿಕ ಹಾಗೂ ಕ್ರಿಮಿನಲ್ ಹಿನ್ನೆಲೆಯ ಮಾಹಿತಿ ಈ ಕೆಳಗನಂತಿದೆ...
ಅಭ್ಯರ್ಥಿಗಳ ಹೆಸರು | ವಿಧಾನಸಭಾ ಕ್ಷೇತ್ರ | ಇವರು ಎದುರಿಸುತ್ತಿರುವ ಅಪರಾಧ ಪ್ರಕರಣಗಳು | ವಿದ್ಯಾಭ್ಯಾಸ | ಜಾತಿ | ಆಸ್ತಿ ವಿವರ |
ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ | ನಿಪ್ಪಾಣಿ | 01 | ಎಸ್ಎಸ್ಎಲ್ಸಿ | ಲಿಂಗಾಯತ | ₹34,48,76,993 |
ಗೋವಿಂದ ಕಾರಜೋಳ | ಮುಧೋಳ | -- | ಎಸ್ಎಸ್ಎಲ್ಸಿ | ದಲಿತ | ₹2,08,35,222 |
ಪ್ರಭು ಔಹ್ಹಾಣ್ | ಔರಾದ್ | -- | ದ್ವಿತೀಯ ಪಿಯುಸಿ | ಲಂಬಾಣಿ | ₹10,08, 00,396 |
ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ | ನರಗುಂದ | -- | ಎಸ್ಎಸ್ಎಲ್ಸಿ | ಲಿಂಗಾಯತ | ₹7,38,05,833 |
ಜಗದೀಶ್ ಶೆಟ್ಟರ್ | ಹುಬ್ಬಳ್ಳಿ-ಧಾರವಾಡ ಕೇಂದ್ರ | -- | ಪದವಿ | ಲಿಂಗಾಯತ | ₹12,26,35,305 |
ಬಸವರಾಜ ಬೊಮ್ಮಾಯಿ | ಶಿಗ್ಗಾಂವ್ | -- | ಪದವಿ | ಲಿಂಗಾಯತ | ₹8,92,22,462 |
ಬಿ.ಶ್ರೀರಾಮುಲು | ಮೊಳಕಾಲ್ಮೂರು | 04 | ಪದವಿ | ದಲಿತ | ₹18,52,11,180 |
ಕೆ.ಎಸ್.ಈಶ್ವರಪ್ಪ | ಶಿವಮೊಗ್ಗ | 05 | ಪದವಿ | ಕುರುಬ | ₹10,31,48,136 |
ಜೆ.ಸಿ.ಮಾಧುಸ್ವಾಮಿ | ಚಿಕ್ಕನಾಯಕಹಳ್ಳಿ | 01 | ಪದವಿ | ಲಿಂಗಾಯತ | ₹4,13,99,473 |
ಸಿ.ಟಿ.ರವಿ | ಚಿಕ್ಕಮಗಳೂರು | 03 | ಸ್ನಾತಕೋತ್ತರ ಪದವಿ | ಒಕ್ಕಲಿಗ | ₹5,01,35,079 |
ಹೆಚ್.ನಾಗೇಶ್ (ಪಕ್ಷೇತರ ಅಭ್ಯರ್ಥಿ) | ಮುಳಬಾಗಿಲು | -- | ಪದವಿ | ದಲಿತ | ₹11,09,72,198 |
ಡಾ.ಸಿ.ಎನ್.ಅಶ್ವತ್ಥನಾರಾಯಣ | ಮಲ್ಲೇಶ್ವರಂ | 01 | ಪದವಿ | ಒಕ್ಕಲಿಗ | ₹21,50,17,344 |
ಎಸ್.ಸುರೇಶ್ಕುಮಾರ್ | ರಾಜಾಜಿನಗರ | -- | ಪದವಿ | ಬ್ರಾಹ್ಮಣ | ₹3,58,41,660 |
ವಿ.ಸೋಮಣ್ಣ | ಗೋವಿಂದರಾಜನಗರ | 01 | ಪದವಿ | ಲಿಂಗಾಯತ | ₹52,92,29,341 |
ಆರ್.ಅಶೋಕ | ಪದ್ಮನಾಭನಗರ | -- | ಪದವಿ | ಒಕ್ಕಲಿಗ | ₹40,62,55,521 |
ಕೋಟ ಶ್ರೀನಿವಾಸ್ ಪೂಜಾರಿ | ವಿಧಾನ ಪರಿಷತ್ ಸದಸ್ಯ | - | 7ನೇ ತರಗತಿ | ಈಡಿಗ | -- |
ಲಕ್ಷ್ಮಣ ಎಸ್.ಸವದಿ | ಅಥಣಿ ಮಾಜಿ ಶಾಸಕ | 01 | ದ್ವಿತೀಯ ಪಿಯುಸಿ | ಲಿಂಗಾಯತ | ₹15,14,41,598 |