ETV Bharat / briefs

ಇಂಡೋ-ಪಾಕ್​ ಹಣಾಹಣಿ... ಈ ಐತಿಹಾಸಿಕ ಪಂದ್ಯವನ್ನು ಎಷ್ಟು ಕೋಟಿ ಜನರು ನೋಡಲಿದ್ದಾರೆ ಗೊತ್ತಾ? - ಮ್ಯಾಂಚೆಸ್ಟರ್

ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಇಲ್ಲಿ 21 ಸಾವಿರ ಆಸನದ ವ್ಯವಸ್ಥೆಯಿದೆ. ಆದರೆ ಟಿಕೆಟ್​ಗಾಗಿ ಆನ್​ಲೈನ್​ನಲ್ಲಿ 8 ಲಕ್ಷ ಜನರು ಅಪ್ಲಿಕೇಶನ್​ ಹಾಕಿದ್ದರಂತೆ. ಆದರೆ ಈ ಹೈವೋಲ್ಟೇಜ್​ ಪಂದ್ಯದ ಟಿಕೆಟ್​ ಕೇವಲ 48 ಗಂಟೆಗಳಲ್ಲಿ ಮಾರಾಟವಾಗುವ ಮೂಲಕ ದಾಖಲೆಯಾಗಿತ್ತು.

pak
author img

By

Published : Jun 16, 2019, 11:32 AM IST

ಮ್ಯಾಂಚೆಸ್ಟರ್​: ಭಾರತ-ಪಾಕಿಸ್ತಾನ ಇಂದು 12ನೇ ಆವೃತ್ತಿಯ ವಿಶ್ವಕಪ್​ ಲೀಗ್​ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಕ್ರಿಕೆಟ್​ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಯಾಗುವ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಲಿದೆ ಎನ್ನಲಾಗುತ್ತಿದೆ.

ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಇಲ್ಲಿ 21 ಸಾವಿರ ಆಸನದ ವ್ಯವಸ್ಥೆಯಿದೆ. ಆದರೆ ಟಿಕೆಟ್​ಗಾಗಿ ಆನ್​ಲೈನ್​ನಲ್ಲಿ 8 ಲಕ್ಷ ಜನರು ಅಪ್ಲಿಕೇಶನ್​ ಹಾಕಿದ್ದರಂತೆ. ಆದರೆ ಈ ಹೈವೋಲ್ಟೇಜ್​ ಪಂದ್ಯದ ಟಿಕೆಟ್​ ಕೇವಲ 48 ಗಂಟೆಗಳಲ್ಲಿ ಮಾರಾಟವಾಗಿ ಇತಿಹಾಸ ಸೃಷ್ಠಿಸಿತ್ತು.

ಟಿವಿ ವೀಕ್ಷಣೆಯಲ್ಲಿ ವಿಶ್ವದಾಖಲೆ?

3ನೇ ವಿಶ್ವಕಪ್​ನ ಮೇಲೆ ಕಣ್ಣಿಟ್ಟಿರುವ ಭಾರತ ಹಾಗೂ 2ನೇ ವಿಶ್ವಕಪ್​ನ ಆಸೆಯಲ್ಲಿರುವ ಪಾಕಿಸ್ತಾನ ತಂಡಗಳ ಈ ಪಂದ್ಯವನ್ನು ಕೇವಲ ಎರಡು ದೇಶಗಳ ಅಭಿಮಾನಿಗಳು ಮಾತ್ರವಲ್ಲದೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಈ ಪಂದ್ಯ ಟೆಲಿವಿಷನ್​ ಇತಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆಯಾಗುವ ಪಂದ್ಯವಾಗಲಿದೆ ಎಂಬ ಲೆಕ್ಕಾಚಾರ ಮಾಡಲಾಗುತ್ತಿದೆ. ಈ ಪಂದ್ಯವನ್ನು ಸುಮಾರು ಒಂದು ಬಿಲಿಯನ್​ (100 ಕೋಟಿ) ಜನರುವೀಕ್ಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಹಿಂದಿನ ದಾಖಲೆ ಎಷ್ಟು ಗೊತ್ತಾ?

ಈ ಹಿಂದಿನ ದಾಖಲೆ ಕೂಡ ಭಾರತ ಆಡಿರುವ ಪಂದ್ಯದಲ್ಲಿಯೇ ಇದೆ. 2011ರ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ 558 ಮಿಲಿಯನ್​(55.8 ಕೋಟಿ), ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಹಣಾಹಣಿ ಎರಡನೇ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ಈ ಪಂದ್ಯವನ್ನು 495(49.5 ಕೋಟಿ) ಮಿಲಿಯನ್​ ಜನರು ವೀಕ್ಷಣೆ ಮಾಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.