ನವದೆಹಲಿ: ಗ್ರಾಮೀಣ ಭಾಗದ ಮಹಿಳೆಯರಿಗೆ ಸಿಲಿಂಡರ್ ದೊರೆಯುಂತೆ ಮಾಡಿದ ಉಜ್ವಲ ಯೋಜನೆಯ ಮೊದಲ ಫಲಾನುಭವಿ ಗುಡ್ಡಿ ದೇವಿ ಈಗಲೂ ಬೆರಣೆಯನ್ನೇ ನೆಚ್ಚಿಕೊಂಡಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ.
2016ರಲ್ಲಿ ಮೋದಿ ಸರ್ಕಾರ ಕಾರ್ಯಗತಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆಯ ಪೋಸ್ಟರ್ಗಳಲ್ಲಿ ಗುಡ್ಡಿ ದೇವಿಯ ಫೋಟೋವನ್ನು ಬಳಸಿಕೊಂಡಿತ್ತು. ಆದರೆ ಫೋಟೋದಲ್ಲಿ ಮಾತ್ರ ಆಕೆಯ ಸಿಲಿಂಡರ್ ಜೊತೆಗಿದ್ದು, ನಿಜ ಜೀವನದಲ್ಲಿ ಆಕೆ ಕಳೆದ ಮೂರು ವರ್ಷದಲ್ಲಿ 11 ಸಿಲಿಂಡರ್ ಮಾತ್ರ ಕೊಳ್ಳಲು ಶಕ್ತವಾಗಿದೆ ಎನ್ನುವುದು ಬಿಬಿಸಿಯ ಡಾಕ್ಯುಮೆಂಟರಿಯಲ್ಲಿ ಬಹಿರಂಗವಾಗಿದೆ.
- " class="align-text-top noRightClick twitterSection" data="">
ಗ್ಯಾಸ್ ಸಂಪರ್ಕ ಪಡೆದಾಗ ಒಂದು ಸಿಲಿಂಡರ್ ಬೆಲೆ 520 ರೂ. ಇತ್ತು. ಈಗ ಅದು 770 ರೂ. ಆಗಿದೆ. ಆದರೆ ಇಷ್ಟೊಂದು ಹಣವನ್ನು ನನಗೆ ಹೊಂದಿಸುವುದ ಕಷ್ಟವಾಗುತ್ತಿದೆ. ಹಾಗಾಗಿ ಬೆರಣಿಯನ್ನೇ ಬಳಸುತ್ತಿದ್ದೇನೆ. ಬೆರಣಿಯಿಂದ ಹೊರ ಸೂಸುವ ಹೊಗೆ ವಿಷಕಾರಿ ಎನ್ನುವುದು ತಿಳಿದಿದೆ ಆದರೆ ಅನಿವಾರ್ಯ ಎಂದು ಗುಡ್ಡಿ ದೇವಿ ಹೇಳಿದ್ದಾಳೆ.