ಮ್ಯಾಂಚೆಸ್ಟರ್: ಏಕದಿನ ಕ್ರಿಕೆಟ್ನಲ್ಲಿ ಸಾಲು ಸಾಲು ಸೋಲುಕಂಡು ವಿಶ್ವಕಪ್ಗೆ ಅರ್ಹತಾ ಪಂದ್ಯವಾಡಿ ಬರಬೇಕಾದ ಸ್ಥಿತಿ ತಲುಪಿದ್ದ ಪಾಕಿಸ್ತಾನ ತಂಡವನ್ನು ಮತ್ತೆ ಮೇಲಿತ್ತಿದವರಲ್ಲಿ ಒಬ್ಬರಾದ ಪಾಕಿಸ್ತಾನದ ರನ್ಮಷಿನ್ ಎಂದೇ ಖ್ಯಾತರಾದ ಬಾಬರ್ ಅಜಂಗೆ ಕೊಹ್ಲಿ ಪರೋಕ್ಷವಾಗಿ ಗುರುವಾಗಿದ್ದಾರಂತೆ.
ಹೌದು, ಕಳೆದೆರಡು ವರ್ಷಗಳಿಂದ ಭಾರತದ ನಾಯಕ ವಿರಾಟ್ ಕೊಹ್ಲಿಗೂ, ಬಾಬರ್ ಆಜಂಗೂ ಪಾಕಿಸ್ತಾನ ಕೆಲವು ಹಿರಿಯ ಕ್ರಿಕೆಟಿಗರು ಹೋಲಿಕೆ ಮಾಡುತ್ತಿದ್ದಾರೆ. ಆದರೆ, ಸ್ವತಃ ಬಾಬರ್ ಮಾತ್ರ ನನ್ನನ್ನು ವಿರಾಟ್ರೊಂದಿಗೆ ದಯವಿಟ್ಟು ಹೋಲಿಸಬೇಡಿ, ಅವರೊಬ್ಬ ಸುಪ್ರೀಂ ಪ್ಲೇಯರ್ ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಇದೀಗ ನಾಳೆ ಭಾರತ-ಪಾಕಿಸ್ತಾನದ ನಡುವೆ ವಿಶ್ವಕಪ್ ಸಮರ ಏರ್ಪಡುತ್ತಿದ್ದು, ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಬಾಬರ್, " ವಿರಾಟ್ ಕೊಹ್ಲಿ ಸುಪ್ರೀಂ ಪ್ಲೇಯರ್, ತಂಡದ ಅಗತ್ಯಕ್ಕೆ ತಕ್ಕಂತೆ ವಿರಾಟ್ ಬ್ಯಾಟ್ ಬೀಸುತ್ತಾರೆ. ನಾನು ಅವರು ಬ್ಯಾಟಿಂಗ್ ನಡೆಸಿರುವ ಹಲವಾರು ವಿಡಿಯೋಗಳನ್ನು ನೋಡಿ ತುಂಬಾ ಕಲಿತುದ್ದೇನೆ. ವಿರಾಟ್ ಕೊಹ್ಲಿಯಂತೆ ನಾನು ಕೂಡ ನಮ್ಮ ತಂಡಕ್ಕೆ ಗೆಲುವು ತಂದುಕೊಡಲು ಶೇ100 ರಷ್ಟು ಪ್ರಯತ್ನಿಸುತ್ತೇನೆ" ಎಂದಿದ್ದಾರೆ.
ಚಾಂಪಿಯನ್ ಟ್ರೋಫಿ ಗೆಲುವು ನಮಗೆ ವಿಶ್ವಾಸ:
2017 ರಲ್ಲಿ ಲೀಗ್ನಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕ್ ಫೈನಲ್ನಲ್ಲಿ ತಿರುಗಿಬಿದ್ದು180 ರನ್ಗಳಿಂದ ಜಯ ಸಾಧಿಸಿತ್ತು. ಈ ಗೆಲುವನ್ನು ನೆನೆದ ಬಾಬರ್ ಚಾಂಪಿಯನ್ ಟ್ರೋಫಿ ಗೆಲುವು ನಮಗೆ ಸ್ಪೂರ್ತಿಯಾಗಿದ್ದು, ಭಾರತದೆದುರು ಮತ್ತೊಂದು ಆಶ್ಚರ್ಯಕರ ಫಲಿತಾಂಶ ನೀಡಲು ಕಾತುರದಿಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದೆ. ಆದರೆ ಭಾರತದಷ್ಟೇ ಬೌಲಿಂಗ್ ಶಕ್ತಿಯುಳ್ಳ ಇಂಗ್ಲೆಂಡ್ ತಂಡವನ್ನು ಮಣಿಸಿರುವುದರಿಂದ ನಮ್ಮಲ್ಲಿ ವಿಶ್ವಾಸ ಹೆಚ್ಚಿಸಿದೆ ಎಂದರು.