ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ತನ್ನದೇ ಬೇಡಿಕೆ ಹೊಂದಿರುವ ಅಂದರೆ ಅದು ನಟ ಅನಿರುದ್ಧ್.
ಕೆಲ ದಿನಗಳ ಹಿಂದೆ, ನಟ ಅನಿರುದ್ಧ್ ಕೊರೊನಾ ಜಾಗೃತಿ ಬಗ್ಗೆ ಸಂದೇಶವನ್ನ ನೀಡಿದ್ದರು. ಇದೀಗ ನಟ ಅನಿರುದ್ಧ್ಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಹಾಗಾದರೆ ನಿಜಕ್ಕೂ ಅನಿರುದ್ಧ್ ಕೊರೊನಾ ಸೋಂಕು ತಗಲಿದಿಯ್ಯಾ? ಎಂಬ ಪ್ರಶ್ನೆಗೆ ಸ್ವತಃ ಅನಿರುದ್ಧ್ ಉತ್ತರಿಸಿದ್ದಾರೆ.
ನನಗೆ ಕೊರೊನಾ ಪಾಸಿಟಿವ್ ಆಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ, ನಟ ಅನಿರುದ್ಧ್ಗೆ ಕೊರೊನಾ ಪಾಸಿಟಿವ್ ಆಗಿದೆ ಸುದ್ದಿಗಳು ಹರಿದಾಡುತ್ತಿದೆ. ಇದು ಸುಳ್ಳು ಅಂತ ನಟ ಅನಿರುದ್ಧ್ ಸ್ಪಷ್ಟಪಡಿಸಿದ್ದಾರೆ.
ನಾನು ರೆಮ್ಡೆಸಿವಿರ್ಗೆ, ಸಂಬಂಧಿಸಿದಂತೆ ನನ್ನ, ಸ್ನೇಹಿತರಿಗೆ ಫೋನ್ ಮಾಡಿ ಕೇಳುತ್ತಿದ್ದೆ. ಇದನ್ನೇ ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು, ಅನಿರುದ್ಧ್ಗೆ ಕೊರೊನಾ ಪಾಸಿಟಿವ್ ಆಗಿರಬಹುದು, ಅದಕ್ಕೆ ಅವರು ರೆಮಿಡಿಸಿವಿರ್ ಕೇಳ್ತಾವ್ರೆ ಅಂದುಕೊಳ್ಳಲಾಗಿದೆ ಎಂದು ಅನಿರುದ್ಧ್ ಹೇಳಿದ್ದಾರೆ.
ಇನ್ನು ನನಗೆ ಯಾವುದೇ ಕೊರೊನಾ ಸೋಂಕು ತಗಲಿಲ್ಲ. ನಮ್ಮೆಲ್ಲರ ಆರ್ಶೀವಾದ ನನ್ನ ಮೇಲೆ ಇರಲಿ ಅಂತಾ ನಟ ಅನಿರುದ್ಧ್ ಈ ಕೊರೊನಾ ಸೋಂಕಿನ ಬಗ್ಗೆ ಸ್ಪಷ್ಟಪಡಿಸಿದ್ದಾರೆ.