ETV Bharat / briefs

ಹಾಕಿ: ವೆಸ್ಟರ್ನ್​ ಆಸ್ಟ್ರೇಲಿಯಾ ವಿರುದ್ಧ 2-0ಯಲ್ಲಿ ಜಯ ಸಾಧಿಸಿದ ಭಾರತ ತಂಡ - ಕ್ಕ್ರೀಡಾ

ವೆಸ್ಟರ್ನ್​ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಬಿರೇಂದರ್​ ಲಕ್ರ, ಹರ್ಮನ್​ಪ್ರೀತ್​ ಸಿಂಗ್​ ಗೋಲುಗಳಿಸಿ ಭಾರತಕ್ಕೆ ಶುಭಾರಂಭ ಒದಗಿಸಿದ್ದಾರೆ.

ಹಾಕಿ
author img

By

Published : May 9, 2019, 1:16 PM IST

ಪರ್ತ್: ಭಾರತ ಹಾಕಿ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತನ್ನ ಬುಧವಾರ ಮೊದಲ ಪಂದ್ಯದಲ್ಲಿ ವೆಸ್ಟರ್ನ್​ ಆಸ್ಟ್ರೇಲಿಯಾ ಥಂಡರ್‌ಸ್ಟಿಕ್ಸ್‌ ವಿರುದ್ಧ 2-0ಯಲ್ಲಿ ಗೆಲವು ಸಾಧಿಸಿ ಶುಭಾರಂಭ ಮಾಡಿದೆ.

ಬಿರೇಂದರ್​ ಲಕ್ರ ಆಟ ಆರಂಭವಾದ 23 ನೇ ನಿಮಿಷದಲ್ಲಿ ಹಾಗೂ ಹರ್ಮನ್​ಪ್ರೀತ್​ ಸಿಂಗ್​ 50 ನೇ ನಿಮಿಷದಲ್ಲಿ ಗೋಲುಗಳಿಸಿ ತನ್ನ ಪ್ರವಾಸದ ಆರಂಭದ ಪಂದ್ಯದಲ್ಲಿ ಗೆಲುವು ಪಡೆದರು.

ಭಾರತ ತಂಡದ ಅಕ್ಷದೀಪ್​ ನಾತ್​, ಜಾಸ್ಕರಣ್​ ಸಿಂಗ್​ ಸೇರದಂತೆ 4 ಆಟಗಾರರು ತಮಗೆ ಸಿಕ್ಕಿದ್ದ ಅವಕಾಶಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಎದುರಾಳಿ ಗೋಲ್​ ಕೀಪರ್​ ಉತ್ತಮವಾಗಿ ಗೋಲುಗಳನ್ನು ತಡೆಯುವ ಮೂಲಕ ತಮ್ಮ ತಂಡ ಹೀನಾಯ ಸೋಲುಕಾಣುವುದನ್ನು ತಪ್ಪಿಸಿದರು. ವೆಸ್ಟರ್ನ್​ ಆಸ್ಟ್ರೇಲಿಯಾ ತಂಡದ ಆಟಗಾರರರು​ ಎಷ್ಟೇ ಪ್ರಯತ್ನ ಪಟ್ಟರು ಭಾರತ ರಕ್ಷಣಾ ಕೋಟೆಯನ್ನು ಬೇಧಿಸಿ ಗೋಲು ಗಳಿಸಲು ವಿಫಲರಾದರು.

ಭಾರತ ತಂಡ ಮೇ 15 ಹಾಗೂ ಮೇ17 ರಂದು ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ತಂಡವನ್ನು ಎದುರಿಸಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.