ಅಮರಾವತಿ/ಹೈದರಾಬಾದ್: ತೆಲುಗು ರಾಜ್ಯಗಳಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಈಗಲೇ ಸೂರ್ಯನ ಕಾಟಕ್ಕೆ ಬೇಸತ್ತ ಜನಕ್ಕೆ ಮತ್ತೊಂದು ‘ಬಿಸಿ’ ಸುದ್ದಿ ಹೊರ ಬಿದ್ದಿದೆ.
ಹೌದು, ಮುಂಬರುವ ದಿನಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಸೂರ್ಯನ ರುದ್ರ ಪ್ರತಾಪಕ್ಕೆ ಜನ ತಲ್ಲಣಗೊಳ್ಳುವುದಂತೂ ಸತ್ಯ. ಕಲ್ಲು ಬಂಡೆಗಳು ಹೊಡೆಯುವಷ್ಟು ಬಿಸಿಲು ಈ ರಾಜ್ಯಗಳ ಮೇಲೆ ಬೀಳಲಿದೆ. ಸೂರ್ಯ ನರ್ತನಕ್ಕೆ ತೆಲುಗು ರಾಜ್ಯಗಳು ಅಗ್ನಿಕುಂಡದಂತಾಗುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮಂಗಳವಾರ, ಬುಧವಾರದಂದು ಆಂಧ್ರಪ್ರದೇಶದ 21 ಪ್ರಾಂತ್ಯದಲ್ಲಿ ಗರಿಷ್ಠ 47ರಿಂದ 48ರವರೆಗೆ ಉಷ್ಣಾಂಶ ದಾಖಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಎರಡು ದಿನಗಳು ಮನೆಯಿಂದ ಹೊರಬರುವಾಗ ಜನರು ಜಾಗೃತಿಯಿಂದ ಇರಬೇಕೆಂದು ತಿಳಿಸಿದೆ.
ಇನ್ನು ಉರಿ ಬಿಸಿಲು ಮತ್ತು ಉಷ್ಣಾಂಶ ಗಾಳಿಗೆ ಗುಂಟೂರು, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೂನ್ 1ರವರೆಗೆ ಕೊಸ್ಟಲ್ ಮತ್ತು ರಾಯಲಸೀಮಾದಲ್ಲಿ ಬಿಸಿಲಿನ ಪ್ರಭಾವ ಹೆಚ್ಚಾಗಿರುತ್ತೆ. ನೈಋತ್ಯ ಮಾನ್ಸೂನ್ಗಳು ಪ್ರವೇಶಿಸಿದ ಬಳಿಕವೂ ಕಷ್ಟ ತಪ್ಪಿದಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.