ಕೇಪ್ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ವಿಶ್ವಕಪ್ಗಾಗಿ ಹಿರಿಯ ಆಟಗಾರರಾದ ಹಾಸಿಂ ಆಮ್ಲ, ಡೇಲ್ ಸ್ಟೈನ್, ಇಮ್ರಾನ್ ತಾಹಿರ್ ಸೇರಿದಂತೆ 15 ಸದಸ್ಯರ ತಂಡವನ್ನು ಇಂದು ಪ್ರಕಟಿಸಿದೆ.
ಫಾರ್ಮ್ ಕಳೆದುಕೊಂಡಿದ್ದ ಹಾಸಿಂ ಆಮ್ಲರನ್ನು ಅನುಭವದ ಆಧಾರದ ಮೇಲೆ ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಅವರ ಜೊತೆಗೆ 35 ವರ್ಷದ ಡೇಲ್ ಸ್ಟೈನ್, 40 ವರ್ಷದ ಇಮ್ರಾನ್ ತಾಹಿರ್ಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.
-
Here’s your team South Africa! #ProteaFire #CWC19 pic.twitter.com/sAcso5pu1f
— Cricket South Africa (@OfficialCSA) April 18, 2019 " class="align-text-top noRightClick twitterSection" data="
">Here’s your team South Africa! #ProteaFire #CWC19 pic.twitter.com/sAcso5pu1f
— Cricket South Africa (@OfficialCSA) April 18, 2019Here’s your team South Africa! #ProteaFire #CWC19 pic.twitter.com/sAcso5pu1f
— Cricket South Africa (@OfficialCSA) April 18, 2019
ಫಾಫ್ಡು ಪ್ಲೆಸಿಸ್ ತಂಡದ ನಾಯಕನಾಗಿ ಮುಂದುವರಿದ್ದಾರೆ. ವಿಕೆಟ್ ಕೀಪರ್ ಸ್ಥಾನಕ್ಕೆ ಕ್ವಿಂಟನ್ ಡಿಕಾಕ್ ಸ್ಥಾನ ಅಭಾದಿತವಾಗಿದೆ. ಆದರೆ ಆಲ್ರೌಂಡರ್ ಕ್ರಿಸ್ ಮೋರಿಸ್ರನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸಿಲ್ಲ. ಇವರ ಬದಲಾಗಿ ಡ್ವೇನ್ ಪ್ರೆಟೋರಿಯಸ್ ಅವಕಾಶ ಪಡೆದಿದ್ದಾರೆ.
ಕಳೆದ ವರ್ಷವಷ್ಟೇ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ತೋರಿದ್ದ ರೀಝಾ ಹೆಂಡ್ರಿಕ್ಸ್ ರನ್ನು ಆಯ್ಕೆ ಸಮಿತಿ ಪರಿಗಣಿಸಿಲ್ಲ. ಇನ್ನು ಹೆಚ್ಚುವರಿ ವಿಕೆಟ್ ಕೀಪರ್ಅನ್ನು ಆಯ್ಕೆ ಮಾಡದ ಸಮಿತಿ ಒಂದು ವೇಳೆ ಡಿ ಕಾಕ್ ಗಾಯಕ್ಕೆ ತುತ್ತಾದರೆ ಮಿಲ್ಲರ್ ಕೀಪರ್ ಸ್ಥಾನ ತುಂಬಲಿದ್ದಾರೆ ಎಂದಿದೆ.
ವಿಶ್ವಕಪ್ಗೆ ದ.ಆಫ್ರಿಕಾ ಮಂಡಳಿ ಬಿಡುಗಡೆ ಮಾಡಿರುವ 15 ಸದಸ್ಯರ ತಂಡ ಹೀಗಿದೆ...
ಫಾಫ್ ಡು ಫ್ಲೆಸಿಸ್(ನಾಯಕ), ಕ್ವಿಂಟನ್ ಡಿ ಕಾಕ್, ಹಾಸಿಂ ಆಮ್ಲ, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆ್ಯನ್ರಿಚ್ ನಾರ್ಟ್ಜ್, ಆ್ಯಂಡಿಲೆ ಪೆಹ್ಲುಕ್ವಾಯೋ, ಡ್ವೇನ್ ಪ್ರೆಟೊರಿಯಸ್, ಐಡೆನ್ ಮ್ಯಾಕ್ರಮ್, ಕಗಿಸೊ ರಬಡಾ, ತಬ್ರೈಜ್ ಶಂಸಿ, ಡೇಲ್ ಸ್ಟೈನ್, ಇಮ್ರಾನ್ ತಾಹಿರ್, ರಾಸ್ಸಿ ವ್ಯಾನ್ಡರ್ ಡಾಸ್ಸೆನ್.