ಲಂಡನ್: ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ 2011ರ ಐಸಿಸಿ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡವನ್ನ ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿತ್ತು. ಈ ವೇಳೆ ಇಡೀ ಭಾರತವೇ ಸಂಭ್ರಮಾಚರಣೆ ಮಾಡಿತ್ತು. ಅದನ್ನ ಗೆಳೆಯರೊಂದಿಗೆ ಸೇರಿ ಹಾರ್ದಿಕ್ ಪಾಂಡ್ಯ ಕೂಡ ಸಂಭ್ರಮಿಸಿದ್ದರು.
-
From cheering and celebrating India’s World Cup triumph in 2011 to representing #TeamIndia in World Cup 2019, it has been a dream come true 🏆🇮🇳 #cwc19 pic.twitter.com/6fDyB29y5r
— hardik pandya (@hardikpandya7) May 24, 2019 " class="align-text-top noRightClick twitterSection" data="
">From cheering and celebrating India’s World Cup triumph in 2011 to representing #TeamIndia in World Cup 2019, it has been a dream come true 🏆🇮🇳 #cwc19 pic.twitter.com/6fDyB29y5r
— hardik pandya (@hardikpandya7) May 24, 2019From cheering and celebrating India’s World Cup triumph in 2011 to representing #TeamIndia in World Cup 2019, it has been a dream come true 🏆🇮🇳 #cwc19 pic.twitter.com/6fDyB29y5r
— hardik pandya (@hardikpandya7) May 24, 2019
ಇದೀಗ ಟೀಂ ಇಂಡಿಯಾ ಆಡುವ 15ರ ಬಳಗದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದುಕೊಂಡಿದ್ದು, ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕೂ ಮುಂಚಿತವಾಗಿ ಪಾಂಡ್ಯ ತಮ್ಮ ಹಳೇ ಫೋಟೋ ಹಾಗೂ ಇದೀಗ ಟೀಂ ಇಂಡಿಯಾದ ಆಟಗಾರರಾದ ಧೋನಿ, ಶಿಖರ್ ಧವನ್ ಹಾಗೂ ಬೂಮ್ರಾ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ.
2011ರಲ್ಲಿ ಭಾರತ ಗೆದ್ದಾಗ ಗೆಳೆಯರೊಂದಿಗೆ ನಾನು ಸಂಭ್ರಮಿಸಿದ್ದೆ, ಇದೀಗ ಟೀಂ ಇಂಡಿಯಾದ ಭಾಗವಾಗಿರುವೆ ಎಂದು ಪಾಂಡ್ಯ ಬರೆದುಕೊಂಡಿದ್ದಾರೆ. ಇದೇ ಚಿತ್ರವನ್ನ ಬಿಸಿಸಿಐ ಕೂಡ ತನ್ನ ಟ್ವಿಟರ್ನಲ್ಲಿ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಈಗಾಗಲೇ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪಾಂಡ್ಯ, ವಿಶ್ವಕಪ್ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.