ETV Bharat / briefs

ಶ್ರೀಲಂಕಾ-ಅಫ್ಘಾನಿಸ್ತಾನ ಹಣಾಹಣಿ: ಮೊದಲ ಗೆಲುವಿಗಾಗಿ ಇತ್ತಂಡಗಳ ಕಾದಾಟ

ವಿಶ್ವಕಪ್​ನ ತಮ್ಮ ಮೊದಲ ಪಂದ್ಯಗಳಲ್ಲಿ ಸೋಲನುಭಿಸಿರುವ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಇಂದು ತಮ್ಮ ಮೊದಲ ಗೆಲುವಿಗಾಗಿ ಕಾದಾಟ ನಡೆಸಲಿವೆ.

SLvs afg
author img

By

Published : Jun 4, 2019, 1:46 PM IST

ಕಾರ್ಡಿಫ್​​: ವಿಶ್ವಕಪ್​ ಕ್ರಿಕೆಟ್‌ ಅಭಿಯಾನದಲ್ಲಿ ತಮ್ಮ ಮೊದಲ ಪಂದ್ಯಗಳಲ್ಲಿ ಸೋಲನುಭವಿಸಿರುವ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಇಂದು ಚೊಚ್ಚಲ ಗೆಲುವಿಗಾಗಿ ಫೈಟ್‌ ಮಾಡಲಿವೆ.

ಎರಡನೇ ವಿಶ್ವಕಪ್​ನಲ್ಲಿ ಆಡುತ್ತಿರುವ ಅಫ್ಘಾನಿಸ್ತಾನ ತಂಡ 1996ರ ವಿಶ್ವ ಚಾಂಪಿಯನ್​ ವಿರುದ್ಧ ಕಣಕ್ಕಿಳಿಯುತ್ತಿದೆ. ವಿಶ್ವಕಪ್​ಗೆ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿ ವಿಂಡೀಸ್​ನಂತಹ ದೊಡ್ಡ ತಂಡವನ್ನು ಮಣಿಸಿ ಟೂರ್ನಿಯಲ್ಲಿ 9ನೇ ತಂಡವಾಗಿ ಭಾಗವಹಿಸಿರುವ ಅಫ್ಘನ್ ಆಟಗಾರರು,​ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರೂ ಕೆಚ್ಚೆದೆಯ ಹೋರಾಟ ನಡೆಸಿದ್ದರು.

ಕೇವಲ 75 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿದ್ದ ಅಫ್ಘನ್​ಗೆ, ರಹ್ಮತ್​ ಶಾ ನಜೀಬುಲ್ಲಾ ಜಾಡ್ರನ್​, ನೈಬ್​ ಹಾಗೂ ರಶೀದ್​ ಖಾನ್​ ಆಸೀಸ್​ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ತಂಡದ ಮೊತ್ತವನ್ನು 200 ರನ್​ಗಳ ಗಟಿ ದಾಟಿಸಿದ್ದರು. ಇದೀಗ ರಶೀದ್​,ನಬಿ, ಮುಜೀಬ್​ರ ಸ್ಪಿನ್​ ಬಲ, ಶಹ್ಜಾದ್ ಉತ್ತಮ ಬ್ಯಾಟಿಂಗ್​ ಲಯ, ರಹ್ಮತ್​ ಶಾ, ಜಾಡ್ರನ್​ನಂತಹ ಸ್ಫೋಟಕ ಆಟಗಾರರಿಂದ ಕೂಡಿರುವ ಬ್ಯಾಟಿಂಗ್​​ ಲೈನ್​ಅಪ್​ನೊಂದಿಗೆ ಲಂಕಾ ವಿರುದ್ಧ ಗೆಲುವು ಸಾಧಿಸಲು ಸಿದ್ಧವಾಗಿದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೇವಲ 29.2 ಓವರ್​ಗಳಲ್ಲಿ 136 ರನ್​ಗಳಿಗೆ ಆಲೌಟ್​ ಆಗಿದ್ದ ಶ್ರೀಲಂಕಾ, 10 ವಿಕೆಟ್​ಗಳ ಹೀನಾಯ ಸೋಲನುಭವಿಸಿತ್ತು.

ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿರುವ ಲಂಕಾಗೆ ಹಿರಿಯ ಆಟಗಾರರಾದ ತಿರುಮನ್ನೆ, ಮ್ಯಾಥ್ಯೂಸ್, ಸ್ಪೋಟಕ ಆಟಗಾರರಾದ ಕುಶಾಲ್​ ಪೆರೆರಾ,ಕುಶಾಲ್​ ಮೆಂಡಿಸ್​ ಸಿಡಿದು ನಿಲ್ಲಬೇಕಿದೆ. ಬೌಲಿಂಗ್​ ವಿಭಾಗದಲ್ಲಿ ಮಲಿಂಗಾ ಜೊತೆಗೆ ಲಕ್ಮಲ್​,ತಿಸ್ಸಾರ ಪೆರೆರಾರಂತಹ ಅನುಭವಿಗಳಿದ್ದು, ಈ ಪಂದ್ಯದಲ್ಲಿ ಲಂಕಾ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಮುಖಾಮುಖಿ:

ಎರಡು ತಂಡಗಳು ಏಕದಿನ ಕ್ರಿಕೆಟ್​ನಲ್ಲಿ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಶ್ರೀಲಂಕಾ 2 ಪಂದ್ಯಗಳಲ್ಲಿ ಹಾಗೂ ಒಂದು ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಜಯ ಕಂಡಿದೆ.

ಕೊನೆಯಬಾರಿ ಏಷ್ಯಾಕಪ್​ ಮುಖಾಮುಖಿಯಲ್ಲಿ ಅಫ್ಘಾನಿಸ್ತಾನ ಶ್ರೀಲಂಕಾ ತಂಡವನ್ನು 95 ರನ್​ಗಳಿಂದ ಮಣಿಸಿತ್ತು. 250 ರನ್​ಗಳ ಟಾರ್ಗೆಟ್​ ಪಡೆದಿದ್ದ ಲಂಕಾ ತಂಡ ಕೇವಲ158 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲುಕಂಡಿತ್ತು.

ಸಂಭಾವ್ಯ ತಂಡಗಳು

ಅಫ್ಘಾನಿಸ್ತಾನ:

ಗುಲ್ಬದಿನ್​ ನೈಬ್(ನಾಯಕ),ಮೊಹಮ್ಮದ್​ ಶಹ್ಜಾದ್​(ವಿ.ಕೀ), ರಶೀದ್​ ಖಾನ್​, ಹಜರತುಲ್ಹಾ ಝಾಝೈ, ರೆಹ್ಮತ್​ ಶಾ, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಜಾಡ್ರನ್​, ​ಮೊಹಮ್ಮದ್​ ನಬಿ, ದವ್ಲಾತ್​ ಝಾರ್ಡನ್​, ಹಮೀದ್​ ಹಸ್ಸನ್​, ಮೂಜೀಬ್​ ಉರ್ ರೆಹ್ಮಾನ್.

ಶ್ರೀಲಂಕಾ:

ದಿಮುತ ಕರುಣಾರತ್ನೆ (ನಾಯಕ), ಧನಂಜಯ್​ ಡಿ ಸಿಲ್ವಾ, ಸುರಂಗ ಲಕ್ಮಲ್​, ಲಸಿತ್​ ಮಲಿಂಗ, ಏಂಜೆಲೊ ಮ್ಯಾಥ್ಯೂಸ್​, ಕುಶಾಲ್ ಮೆಂಡಿಸ್​, ಜೀವನ್​ ಮೆಂಡಿಸ್​, ಕುಶಾಲ್​ ಪರೇರ, ತಿಸಾರ ಪೆರೆರ, ಲಾಹಿರು ತಿರುಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.