ಬಾಗೇಪಲ್ಲಿ(ಚಿಕ್ಕಬಳ್ಳಾಪುರ) : ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷ್ಣಾಪುರ ಗ್ರಾಮಕ್ಕೆ ಇಂದು ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಭೇಟಿ ನೀಡಿದ್ದರು.
ಶಾಸಕರು ಗ್ರಾಮದ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಕ್ಕೆ ಸರಿಯಾದ ಚರಂಡಿಗಳ ನಿರ್ಮಾಣವಿಲ್ಲದೆ ಕೊಳಚೆ ನೀರೆಲ್ಲ ರಸ್ತೆಯ ಮೇಲೆ ಹರಿಯುತ್ತಿದ್ದು, ಗ್ರಾಮ ಪಂಚಾಯತ್ ಅಧಿಕಾರಿಗಳು, ರಾಜಕಾರಣಿಗಳು ಸಮಸ್ಯೆ ಕಂಡರೂ ಕಾಣದವರಂತೆ ವರ್ತಿಸುತ್ತಿದ್ದಾರೆ. ನಿಮ್ಮ ಕಾಲದಲ್ಲಿ ಆದಂತಹ ಕಾಮಗಾರಿಗಳು ಈಗ ನಡೆಯುತ್ತಿಲ್ಲ ಎಂದು ಗ್ರಾಮದ ಜನರು ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ತಾವು ಶಾಸಕರಾಗಿದ್ದಾಗ ನಡೆದ ಅಭಿವೃದ್ಧಿ ಕಾರ್ಯಗಳು ಬಿಟ್ಟರೆ ನಂತರ ಬಂದವರು ಗ್ರಾಮಗಳ ಕಡೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಬರ್ತಾರೆ. ಜನರಿಂದ ಆಯ್ಕೆಯಾದವರು ಗ್ರಾಮಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ನೀರು, ಚರಂಡಿ, ರಸ್ತೆ, ವಸತಿಯಂತಹ ಅನುಕೂಲಗಳಿಗೆ ಆದ್ಯತೆ ಕೊಡ್ಬೇಕು ಎಂದರು.