ಮುದ್ದೇಬಿಹಾಳ: ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ್ ಅವರು ನೆಡುತೋಪು ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ 2017ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಬೆಳಗಾವಿ ಪ್ರಾದೇಶಿಕ ವೃತ್ತದಲ್ಲಿ ಅರಣ್ಯ ಸಂರಕ್ಷಣೆಯ ನೆಡುತೋಪು ವಿಭಾಗದಲ್ಲಿ ಅಧಿಕಾರಿ ಅಜೂರ್ ಅವರನ್ನು ಸಿಎಂ ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ. ವಿ. ಶ್ರೀನಿವಾಸನ್ ತಿಳಿಸಿದ್ದಾರೆ.
ಅಲ್ಲದೆ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತೆ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು ಸೇರಿದಂತೆ ಹಲವು ವಿಭಾಗಗಳಲ್ಲಿ ರಾಜ್ಯದ ಇಪ್ಪತೈದು ಜನರನ್ನು ಸಿಎಂ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಈ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ಅಧಿಕಾರಿಗಳು, ನೌಕರರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಜೂರ್ ಅವರು, ಪ್ರಶಸ್ತಿ ಬಂದಿದ್ದು ಸಂತಸವಾಗಿದೆ. ಇದು ಇಡೀ ಇಲಾಖೆಯ ಎಲ್ಲ ಸಿಬ್ಬಂದಿ, ಸಹೋದ್ಯೋಗಿಗಳಿಗೆ ಸಲ್ಲಬೇಕು. ಟೀಂ ವರ್ಕ ಮಾಡಿದ್ದರಿಂದಲೇ ಇಂದು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು, ಮೇಲಾಧಿಕಾರಿಗಳ ಮಾರ್ಗದರ್ಶನ, ಪ್ರೋತ್ಸಾಹದಿಂದ ಈ ಪ್ರಶಸ್ತಿ ಬಂದಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದರು
ಕಾರ್ಯ ನಿರ್ವಹಣೆ ಮಾಹಿತಿ
2007 ರಲ್ಲಿ ಗೋಕಾಕ್ ಉಪ ವಲಯ ಅರಣ್ಯಾಧಿಕಾರಿಗಳಾಗಿ ಸೇವೆಗೆ ಸೇರಿದ ಅಜೂರ್ ಅವರು, 2010 ರಲ್ಲಿ ಇಂಡಿಯ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ 2017 ರಲ್ಲಿ ಮುದ್ದೇಬಿಹಾಳ ವಲಯ ಅರಣ್ಯಾಧಿಕಾರಿಗಳಾಗಿ ಬಡ್ತಿ ಹೊಂದಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ 90 ಸಾವಿರ ಸಸಿಗಳನ್ನು ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದಲೇ ನೆಡಲಾಗಿದೆ.
ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆಯಾದ ಅರಣ್ಯಾಧಿಕಾರಿ ಅಜೂರ್ - Cm gold medal
ನೆಡುತೋಪು ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆ ಅರಣ್ಯಾಧಿಕಾರಿ ಅಜೂರ್ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
![ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆಯಾದ ಅರಣ್ಯಾಧಿಕಾರಿ ಅಜೂರ್ Forest officer ajur selected for cm gold medal](https://etvbharatimages.akamaized.net/etvbharat/prod-images/768-512-07:20:32:1592488232-kn-mbl-cmawardtoforestofficer-18-06-kac10030-18062020191827-1806f-1592488107-40.jpg?imwidth=3840)