ETV Bharat / briefs

2019ರ ವಿಶ್ವಕಪ್​ ಆಡಲು ಬಯಸಿದ್ದ ವಿಲಿಯರ್ಸ್​ ದಿಢೀರ್​ ನಿವೃತ್ತಿ ಘೋಷಿಸಲು ಕಾರಣ ಏನು ಗೊತ್ತಾ?

author img

By

Published : May 21, 2019, 8:25 AM IST

ಕೇವಲ 34 ವರ್ಷಕ್ಕೆ ಎಬಿ ಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿತ್ತು. ಬ್ಯಾಟಿಂಗ್​, ಫೀಲ್ಡಿಂಗ್​ನಲ್ಲಿ ಯುವ ಕ್ರಿಕೆಟಿಗರನ್ನೆ ನಾಚಿಸುವಂತೆ ಕ್ರೀಡಾಂಗಣದಲ್ಲಿ ಚುರುಕಾಗಿ ಓಡಾಡುವ, ಬ್ಯಾಟಿಂಗ್​​ನಲ್ಲಿ ಯಾವುದೇ ಕ್ರಮಾಂಕದಲ್ಲಿ ಬಂದರೂ ಬೌಂಡರಿ-ಸಿಕ್ಸರ್​ ಸಿಡಿಸುವ ಮಿ.360 ಖ್ಯಾತಿಯ ಎಬಿಡಿ ನಿವೃತ್ತಿ ಅಚನಕ್ಕಾಗಿ ಕ್ರಿಕೆಟ್​ನಿಂದ ಮರೆಯಾಗಲು ಬಯಸಿದ್ದರ ಹಿಂದಿನ ಸತ್ಯವನ್ನು ಅವರೇ ಹೊರಹಾಕಿದ್ದಾರೆ.

ab

ನವದೆಹಲಿ:ವಿಶ್ವದಾದ್ಯಂತ ಕೋಟ್ಯಾಂತರ ಕ್ರಿಕೆಟ್​ ಆಭಿಮಾನಿಗಳನ್ನು ಕಂಡಿರುವ ದ.ಆಫ್ರಿಕಾದ ವಿಲಿಯರ್ಸ್​ ತಮ್ಮ ತೋಳಲ್ಲಿ ಬಲ, ಮನದಲ್ಲಿ ಆತ್ಮ ವಿಶ್ವಾಸವಿದ್ದರೂ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದಿಢೀರ್​ ನಿವೃತ್ತಿ ಘೋಷಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಹೌದು, ಕೇವಲ 34 ವರ್ಷಕ್ಕೆ ಎಬಿ ಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿತ್ತು. ಬ್ಯಾಟಿಂಗ್​, ಫೀಲ್ಡಿಂಗ್​ನಲ್ಲಿ ಯುವ ಕ್ರಿಕೆಟಿಗರನ್ನೆ ನಾಚಿಸುವಂತೆ ಕ್ರೀಡಾಂಗಣದಲ್ಲಿ ಚುರುಕಾಗಿ ಓಡಾಡುವ, ಬ್ಯಾಟಿಂಗ್​​ನಲ್ಲಿ ಯಾವುದೇ ಕ್ರಮಾಂಕದಲ್ಲಿ ಬಂದರೂ ಬೌಂಡರಿ-ಸಿಕ್ಸರ್​ ಸಿಡಿಸುವ ಮಿ.360 ಖ್ಯಾತಿಯ ಎಬಿಡಿ ನಿವೃತ್ತಿ ಅಚಾನಕ್ಕಾಗಿ ಕ್ರಿಕೆಟ್​ನಿಂದ ಮರೆಯಾಗಲು ಬಯಸಿದ್ದರ ಹಿಂದಿನ ಸತ್ಯವನ್ನು ಅವರೇ ಹೊರಹಾಕಿದ್ದಾರೆ.

ತಂಡದಲ್ಲಿ ಮೂಲೆಗುಂಪಾಗಿದ್ರ ಎಬಿಡಿ!

ಬ್ರೇಕ್​ಫಾಸ್ಟ್​​ ವಿತ್​ ಚಾಂಪಿಯನ್ಸ್​ ಎಂಬ ಕಾರ್ಯಕ್ರಮದಲ್ಲಿ ತಮ್ಮ ನಿವೃತ್ತಿ ಕುರಿರು ಹೇಳಿಕೆ ನೀಡಿರುವ ಎಬಿಡಿ, 'ನಾನು ನಿವೃತ್ತಿಯಾಗುವ ಹಿಂದಿನ 3 ವರ್ಷಗಳಲ್ಲಿ ಕೆಲವು ಆಯ್ದ ಪಂದ್ಯಗಳಲ್ಲಿ ಮಾತ್ರ ಆಡುವ ನಿರ್ಧಾರ ಮಾಡಿದ್ದೆ. ಅದೇ ಪ್ರಕಾರ ಆಡಲು ಶುರು ಮಾಡಿದೆ. ಆದರೆ ಇದಕ್ಕೆ ನಮ್ಮವರಿಂದಲೇ ಭಾರೀ ಟೀಕೆ ಕೇಳಿಬಂತು. ಇದು ನನ್ನ ನಿವೃತ್ತಿಯ ನಿರ್ಧಾರದಲ್ಲಿ ಪ್ರಮುಖ ಕಾರಣವಾಯಿತು.

'2019ರ ವಿಶ್ವಕಪ್‌ ಆಡಲು ಬಯಸಿದ್ದೆ. ಆದರೆ ತಂಡದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ನನ್ನಲ್ಲಿ ಬಂತು. ಇದಲ್ಲದೆ ನಾನು ನನ್ನ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಬೇಕೆಂದುಕೊಂಡಿದ್ದು ಕೂಡ ನಿವೃತ್ತಿಗೆ ಮತ್ತೊಂದು ಪ್ರಮುಖ ಕಾರಣ. ನಾನು 15 ವರ್ಷ ಕ್ರಿಕೆಟ್​ನಿಂದ ಬಳಲಿದ್ದೆ, ಸದಾ ಕ್ರಿಕೆಟ್​ನಲ್ಲಿ ಕಾರ್ಯನಿರತನಾಗಿದ್ದರಿಂದ ಒತ್ತಡದಲ್ಲಿದ್ದರಿಂದ ಮಾನಸಿಕವಾಗಿ ವಿಶ್ರಾಂತಿ ಅಗತ್ಯವೆನಿಸಿ ನಿವೃತ್ತಿ ಬಯಸಿದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು ಐಪಿಎಲ್,ಪಿಎಸ್​ಎಲ್​, ಬಿಪಿಎಲ್​, ಝಾನ್ಸಿ ಸೂಪರ್​ ಲೀಗ್​ ಸೇರಿದಂತೆ ಹಲವಾರು ಟಿ20 ಲೀಗ್​ಗಳಲ್ಲಿ ಎಬಿಡಿ ತಮ್ಮ ಆಟವನ್ನು ಮುಂದುವರಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಎಬಿಡಿ ದ.ಆಫ್ರಿಕಾ ಪರ 114 ಟೆಸ್ಟ್​ ಪಂದ್ಯಗಳನ್ನಾಡಿದ್ದು 8765 ರನ್​ಹಾಗೂ 228 ಏಕದಿನ ಪಂದ್ಯಗಳಿಂದ 9577 ರನ್​ಗಳಿಸಿದ್ದಾರೆ. ಟೆಸ್ಟ್​ನಲ್ಲಿ 22 , ಏಕದಿನ ಪಂದ್ಯಗಳಲ್ಲಿ 25 ಶತಕ ಸಿಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.