ETV Bharat / briefs

ಎಡಿಜಿಪಿ ಹೆಸರಿನಲ್ಲೇ ನಕಲಿ ಎಫ್‌ಬಿ ಖಾತೆ.. ಕೇರಳದಲ್ಲಿ ವಂಚಕರಿಂದ ಹಣ ಸುಲಿಗೆ ಪ್ರಯತ್ನ - ತಿರುವನಂತಪುರಂ ಸುದ್ದಿ

ಈ ನಕಲಿ ಖಾತೆಯ ಮೂಲಕ ಎಡಿಜಿಪಿಯ ಸ್ನೇಹಿತರಿಗೆ 10,000 ರೂ ಕೇಳುವ ಸಂದೇಶ ಕಳುಹಿಸಿದ ಬಳಿಕ ಈ ಹಗರಣ ಬೆಳಕಿಗೆ ಬಂದಿದೆ. ಅಪರಿಚಿತ ಅಪರಾಧಿಗಳು ಎಡಿಜಿಪಿ ವಿಜಯ್ ಸಖಾರೆ ಹೆಸರಿನಲ್ಲಿ ನಕಲಿ ಖಾತೆಯಲ್ಲಿ ಗೂಗಲ್ ಪೇ ಮೂಲಕ ಹಣ ಪಡೆಯಲು ಬಳಸಿದ್ದಾರೆ.

ADGP Vijay Sakhare
ADGP Vijay Sakhare
author img

By

Published : May 12, 2021, 9:35 PM IST

ತಿರುವನಂತಪುರಂ(ಕೇರಳ): ಆನ್​ಲೈನ್​ ವಂಚಕರು ಇಷ್ಟು ದಿನ ಜನಸಾಮಾನ್ಯರನ್ನು ಗುರಿಯಾಗಿಸಿ ವಂಚಿಸುತ್ತಿದ್ದರು. ಆದರೆ ಇದೀಗ ಪೊಲೀಸರಿಗೇ ನಕಲಿ ಫೇಸ್​ಬುಕ್​ ಮೂಲಕ ಸುಲಿಗೆಗೆ ಇಳಿದಿರುವ ಘಟನೆ ನಡೆದಿದೆ.

ತಿರುವನಂತಪುರಂನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಸಖಾರೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ರಚಿಸುವ ಮೂಲಕ ಹಣ ಸುಲಿಗೆ ಮಾಡುವ ಪ್ರಯತ್ನ ನಡೆಸಿದ್ದಾರೆ ವಂಚಕರು.

ನಕಲಿ ಖಾತೆಯಲ್ಲಿ ಎಡಿಜಿಪಿಯ ನಿಜವಾದ ಫೇಸ್‌ಬುಕ್ ಖಾತೆಯ ಪ್ರೊಫೈಲ್ ಚಿತ್ರವನ್ನು ಸಹ ಬಳಸಿಕೊಂಡಿದ್ದಾರೆ.

ಈ ನಕಲಿ ಖಾತೆಯ ಮೂಲಕ ಎಡಿಜಿಪಿಯ ಸ್ನೇಹಿತರಿಗೆ 10,000 ರೂ ಕೇಳುವ ಸಂದೇಶ ಕಳುಹಿಸಿದ ಬಳಿಕ ಈ ಹಗರಣ ಬೆಳಕಿಗೆ ಬಂದಿದೆ. ಅಪರಿಚಿತ ಅಪರಾಧಿಗಳು ಎಡಿಜಿಪಿ ವಿಜಯ್ ಸಖಾರೆ ಹೆಸರಿನಲ್ಲಿ ನಕಲಿ ಖಾತೆಯಲ್ಲಿ ಗೂಗಲ್ ಪೇ ಮೂಲಕ ಹಣ ಪಡೆಯಲು ಬಳಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಘಟನೆಯ ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.