ಇಂದು ಬೆಳ್ಳಂಬೆಳಗ್ಗೆಮಾಜಿ ಸಂಸದ ವರಪ್ರಸಾದ್ ಕುಡಿದ ಮತ್ತಿನಲ್ಲಿ ಜನರ ಬಳಿ ಮತ ಹಾಕುವಂತೆ ಕೇಳಿಕೊಂಡರು. ಎಣ್ಣೆ ಏಟಲ್ಲಿ ವೈಎಸ್ಆರ್ ಅಭ್ಯರ್ಥಿವೋಟ್ ಕೇಳಲುಜನರ ಬಳಿ ಹೋದಾಗ ಕೆಲವರು ನಿಮ್ಮಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಎಂದುಹೇಳಿದ್ದಾರೆ. ಆಗ ವರಪ್ರಸಾದ್ ಫುಲ್ ಗರಂ ಆಗಿ ಜನಗಳ ಮೇಲೆರೇಗಿದರು.
ಅಭಿವೃದ್ಧಿಗಾಗಿ ನಾನು ಕೋಟಿ-ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡಿದ್ದೇನೆ. ಈ ಬಾರಿಯೂ ನನಗೆ ವೋಟು ಹಾಕಿ ಎಂದು ಜನರ ಕೈ ಹಿಡಿದು ಬೇಡಿಕೊಂಡರು. ಈ ಎಲ್ಲಾ ರಂಪಾಟ ರಸ್ತೆಯಲ್ಲೇ ನಡೆದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.