ಹೈದರಾಬಾದ್: ಕೊರೊನಾ ಲಸಿಕೆ ಸ್ಪುಟ್ನಿಕ್-ವಿ ಯ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಮೇ ಅಂತ್ಯದ ವೇಳೆಗೆ ರಷ್ಯಾದ ಲಸಿಕೆಯು ಭಾರತದಲ್ಲಿ ಬಳಕೆಗಾಗಿ ಲಭ್ಯವಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.
ಸೆಪ್ಟೆಂಬರ್ 2020 ರಲ್ಲಿ, ಡಾ. ರೆಡ್ಡೀಸ್ ಮತ್ತು ಆರ್‌ಡಿಐಎಫ್ ಭಾರತದಲ್ಲಿ ಸ್ಪುಟ್ನಿಕ್-ವಿ ಯ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸಲು ಹಾಗೂ ಲಸಿಕೆಯ ಪ್ರಥಮ 100 ಮಿಲಿಯನ್ ಡೋಸ್ಗಳನ್ನು ವಿತರಿಸಲು ಒಪ್ಪಂದ ಮಾಡಿಕೊಂಡಿದ್ದವು. ನಂತರ ಲಸಿಕೆ ವಿತರಣೆಯ ಪ್ರಮಾಣವನ್ನು 125 ಮಿಲಿಯನ್ ಡೋಸ್ಗಳಿಗೆ ಹೆಚ್ಚಿಸಲಾಗಿದೆ. ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೊಬಯಾಲಜಿ ಸಂಸ್ಥೆಯು ಸ್ಪುಟ್ನಿಕ್-ವಿ ಲಸಿಕೆಯನ್ನು ತಯಾರಿಸಿದೆ.
ಈ ವರ್ಷದ ಮೊದಲ ತ್ರೈಮಾಸಿಕದಿಂದ ಮೊದಲ ಬ್ಯಾಚ್‌ಗಳನ್ನು ಆಮದು ಮಾಡಿಕೊಳ್ಳಲು ನಾವು ಗುರಿ ಹೊಂದಿದ್ದೇವೆ. ಮೇ ಅಂತ್ಯದ ವೇಳೆಗೆ ಅವುಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತೇವೆ, ಎಂದು ಡಾ. ರೆಡ್ಡೀಸ್ ವಕ್ತಾರರು ತಿಳಿಸಿದ್ದಾರೆ.
ಆರ್ಡಿಐಎಫ್ನ ಸಿಇಒ ಕಿರಿಲ್ ಡಿಮಿಟ್ರಿವ್ ಇತ್ತೀಚೆಗೆ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಬೇಸಿಗೆಯ ವೇಳೆಗೆ ಭಾರತದಲ್ಲಿ 50 ಮಿಲಿಯನ್ ಡೋಸ್ ಸ್ಪುಟ್ನಿಕ್ ಲಸಿಕೆ ತಯಾರಿಸಲಾಗುವುದು ಎಂದು ನಿರೀಕ್ಷಿಸಿದ್ದಾರೆ. ಲಸಿಕೆಗಾಗಿ ಆರ್‌ಡಿಐಎಫ್ ಐದು ಔಷಧಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಸಂಭವನೀಯ ಉತ್ಪಾದನಾ ಒಪ್ಪಂದಗಳಿಗಾಗಿ ಇನ್ನೂ ಕೆಲವು ಸಂಸ್ಥೆಗಳನ್ನು ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.
ಜನವರಿಯಲ್ಲಿ, ಡಿಸಿಜಿಐ ಎರಡು ಕೋವಿಡ್ ಲಸಿಕೆಗಳಿಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿತ್ತು. ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಗಳಿಗೆ ಅನುಮೋದನೆ ನೀಡಲಾಗಿತ್ತು.
ಆರ್ಡಿಐಎಫ್ನಿಂದ ಮೈನಸ್ 18 ರಿಂದ ಮೈನಸ್ 22 ಡಿಗ್ರಿ ಸೆಲ್ಸಿಯಸ್ ಅನ್ನು ನಿರ್ವಹಿಸುವ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಡಾ. ರೆಡ್ಡೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.