ಗಂಗಾವತಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಅನೇಕರು ನೆರವಿನ ಹಸ್ತ ಚಾಚುತ್ತಿದ್ದು, ಈಗ ದೂರದ ಅಮೇರಿಕಾದಲ್ಲಿರುವ ವಾಸವಿ ಸೇವಾ ಫೌಂಡೇಶನ್ ಸಹ ಆಕ್ಸಿಜನ್ ಕಾನ್ಸಂಟ್ರೇರುಗಳನ್ನು ನೀಡಿದೆ.
ಗಂಗಾವತಿ ನಗರದ ಉಪವಿಭಾಗ ಆಸ್ಪತ್ರೆಗೆ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಐದು ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಅಮೇರಿಕಾದಲ್ಲಿರುವ ವಾಸವಿ ಸೇವಾ ಫೌಂಡೇಶನ್ ಸದಸ್ಯರು ಕೊಡುಗೆಯಾಗಿ ನೀಡಿದ್ದಾರೆ.
ಅಮೆರಿಕಾದಲ್ಲಿರುವ ವಾಸವಿ ಸೇವಾ ಫೌಂಡೇಶನ್ನ ಮಣಿಕಂಠ ಮತ್ತು ಉಮಾಶಂಕರ ಅವರ ನೇತೃತ್ವದಲ್ಲಿ ಐದು ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಸಹಾಯ ಮಾಡಿದ್ದಾರೆ. ದೂರದ ದೇಶದಲ್ಲಿದ್ದರೂ ಸಹ ತಾಯ್ನಾಡಿನ ಜನರ ಸಂಕಷ್ಟಕ್ಕೆ ಮಿಡಿದು ಸಹಾಯ ಹಸ್ತ ಚಾಚುತ್ತಿರೋದು ಮೆಚ್ಚುಗೆಗೆ ಕಾರಣವಾಗುತ್ತಿದೆ.