ETV Bharat / briefs

ಪದಗ್ರಹಣ ಕಾರ್ಯಕ್ರಮ ಯಾವ ಕಾರಣಕ್ಕೂ ರದ್ದಾಗಲ್ಲ, ಅನುಮತಿಗಾಗಿ ಸರ್ಕಾರವನ್ನು ಮತ್ತೊಮ್ಮೆ ಸಂಪರ್ಕಿಸುತ್ತೇನೆ: ಡಿಕೆಶಿ

author img

By

Published : Jun 10, 2020, 3:11 PM IST

ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಕೊಡದ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shivkumar
Shivkumar

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಪದಗ್ರಹಣ ಸಮಾರಂಭ ಯಾವುದೇ ಕಾರಣಕ್ಕೂ ನಿಲ್ಲಿಸಲು ಸಾಧ್ಯವಿಲ್ಲ. ಇನ್ನೊಮ್ಮೆ ಸರ್ಕಾರವನ್ನು ಸಂಪರ್ಕಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರವನ್ನು ಸಂಪರ್ಕಿಸದೆ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಂತ ವಿವೇಚನೆಯಿಂದ ಪರವಾನಗಿ ನೀಡಬಹುದಿತ್ತು. ಆದರೆ ಅವರು ಈ ಕಾರ್ಯವನ್ನು ಮಾಡದೆ ಕೇಂದ್ರವನ್ನು ಸಂಪರ್ಕಿಸಿ ನಮ್ಮ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನಿರಾಕರಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ. ವಿಪರ್ಯಾಸ ಎಂದರೆ ಇದೇ ಸಂದರ್ಭದಲ್ಲಿ ಬಿಜೆಪಿ ಹೆಚ್ಚು ಜನರನ್ನು ಸೇರಿಸಿ ತಾನು ಕಾರ್ಯಕ್ರಮ ಆಯೋಜಿಸಿದೆ. ಇದು ನಮಗೆ ಉದ್ದೇಶಪೂರ್ವಕವಾಗಿ ಮಾಡಿರುವ ಅನ್ಯಾಯ ಎಂದು ಕಿಡಿಕಾರಿದ್ದಾರೆ.

Shivkumar
ಡಿ.ಕೆ.ಶಿವಕುಮಾರ್​

ಮಾರ್ಚ್ 11ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸಂಪ್ರದಾಯದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. ಆದರೆ ಕಾರ್ಯಕ್ರಮಕ್ಕೆ ಅನೇಕ ಅಡ್ಡಿಗಳು ಬರುತ್ತಿವೆ. ಕೋವಿಡ್ ವೇಳೆ ಮಾಡಬಾರದು ಎಂದು ಸುಮ್ಮನಾಗಿದ್ದೆವು. ಮೂರು ಬಾರಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಸಿಎಂ, ಪೊಲೀಸ್ ಆಯುಕ್ತರ ಬಳಿಯೂ ಚರ್ಚಿಸಿದ್ದೆವು. 5ರಂದು ಸಿಎಂ, ಸಿಎಸ್, ಪೊಲೀಸ್ ಆಯುಕ್ತರಿಗೆ ಪದಗ್ರಹಣಕ್ಕೆ ಅವಕಾಶ ಕೋರಿ ಪತ್ರ ಬರೆದಿದ್ದೆವು. 7800 ಕಡೆ ಜೂಮ್ ಆ್ಯಪ್ ಮೂಲಕ ಕಾರ್ಯಕ್ರಮ ನಡೆಯಬೇಕಿತ್ತು. ಇರುವಲ್ಲೇ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿದ್ದೆವು. ಎಲ್ಲಾ ಸಿದ್ಧತೆಗಳನ್ನೂ ನಾವು ಮಾಡಿಕೊಂಡಿದ್ದೆವು. ಆದರೆ ನಿನ್ನೆ ಅವಕಾಶ ನಿರಾಕರಿಸಲಾಗಿದೆ. ಪತ್ರದ ಮೂಲಕವೇ ಈ ಬಗ್ಗೆ ಸರ್ಕಾರ ತಿಳಿಸಿದೆ. ಅನುಮತಿ ಕೋರಿ ಅಗತ್ಯ ದಾಖಲೆಗಳನ್ನೂ ನೀಡಿದ್ದೆವು. ಆದರೆ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಿಕೆಶಿ

ನಾವು ಕದ್ದು ಮುಚ್ಚಿ ಯಾವುದೇ ವ್ಯವಹಾರ ಮಾಡಿಲ್ಲ. ಕೆಪಿಸಿಸಿ ಮುಂದೆ 150 ಜನ ಸೇರುತ್ತಿದ್ದೆವು. ಪ್ಯಾಲೇಸ್ ಗ್ರೌಂಡ್​​ನಲ್ಲಿ ಮಾಡೋಕೆ ಹೊರಟಿರಲಿಲ್ಲ. ಇದರ ಬಗ್ಗೆ ರಾಜ್ಯ ಸರ್ಕಾರವೇ ಅವಕಾಶ ನೀಡಬಹುದಿತ್ತು. ಸರ್ಕಾರದ ನಮ್ಮ ಅಣ್ಣಂದಿರೇ ಕಾರ್ಯಕ್ರಮ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಹೋದ್ರು? ಏನ್ ಮಾಡಿದ್ರು ಅನ್ನೋದನ್ನ ಮಾಧ್ಯಮಗಳೇ ತೋರಿಸಿವೆ. ಅವರು ದೊಡ್ಡವರು. ಅದರ ಬಗ್ಗೆ ಮಾತನಾಡಲ್ಲ ಎಂದು ಪರೋಕ್ಷವಾಗಿ ಶ್ರೀರಾಮುಲು ಕಾರ್ಯಕ್ರಮ ಪ್ರಸ್ತಾಪ ಮಾಡಿದರು.

ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರದಲ್ಲಿ ಏನ್ ಮಾಡುತ್ತಿದ್ದಾರೆ. ಬಿಹಾರದಲ್ಲಿ 70 ಸಾವಿರ ಜನರ ಕಾರ್ಯಕ್ರಮ ಮಾಡಿದ್ದಾರೆ. ಅಲ್ಲಿನ ಬಿಜೆಪಿ ನಾಯಕರು ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ದೊಡ್ಡ ಸಮಾವೇಶ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾರ್ಗಸೂಚಿ‌ ಅನ್ವಯವಾಗಲ್ವೇ?. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಕಾಪಿ ಮಾಡಿದ್ದಾರೆ. ನಮ್ಮದು ಕಾರ್ಯಕರ್ತರ ಪಾರ್ಟಿ ಅಂತ ಹೇಳಿದ್ದೇನೆ. ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಕಾರ್ಯಕ್ರಮ ಸ್ಪೆಷಲ್ಲಾ? ಸಿಎಂಗೆ ನಾನು ಪತ್ರ ಬರೆದಿದ್ದೇ ನಾಚಿಕೆಯಾಗುತ್ತಿದೆ ಎಂದರು.

ಸರ್ಕಾರ ಈ ವಿಚಾರದಲ್ಲೂ ರಾಜಕಾರಣ ಮಾಡಿದ್ರೆ ಹೇಗೆ? ನಾನು ಬಿಜೆಪಿ ನಾಯಕರಿಗೆ ಹೇಳೋದು ಇಷ್ಟೇ. ನಮ್ಮ‌ ಸಂವಿಧಾನದ ಪೀಠಿಕೆ ಓದಲು ಹೊರಟಿದ್ದೆವು. ನಮ್ಮ ಪ್ರತಿಜ್ಞಾವಿಧಿ ಜನರಿಗೆ ನೀಡಲು ಮುಂದಾಗಿದ್ದೆವು. ಈ ಕಾರ್ಯಕ್ರಮವನ್ನು ಯಾವ ಕಾರಣಕ್ಕೂ ನಿಲ್ಲಿಸಲ್ಲ. ನೀವು ಹೇಗೆ ನಿಲ್ಲಿಸೋಕೆ ಪ್ರಯತ್ನಿಸಿದ್ರೂ ಸುಮ್ಮನಿರಲ್ಲ. ಆಷಾಡವೇ ಆದ್ರೂ ಸರಿ ಕಾರ್ಯಕ್ರಮ ಮಾಡಿಯೇ ತೀರುತ್ತೇನೆ. ನಾವು ಕಾನೂನಿಗೆ ಗೌರವ ಕೊಡುವವರು. ಕಾರ್ಯಕ್ರಮದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನೀವು ಅವಕಾಶ ಕೊಟ್ಟಾಗಲೇ ನಾವು ಕಾರ್ಯಕ್ರಮ ಮಾಡುತ್ತೇವೆ ಎಂದರು.

ರಾಜ್ಯ ಪ್ರವಾಸ:
ಸಿಎಂ, ಸಿಎಸ್​​ಗೂ ಮತ್ತೆ ಪತ್ರ ಬರೆಯುತ್ತೇನೆ. ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಹೆದರಿಕೊಳ್ಳುತ್ತಾರೆ. ಎಂಎಲ್​ಸಿ ಎಲೆಕ್ಷನ್ ಬಳಿಕ ನಾನ್ ಪೊಲಿಟಿಕಲ್ ಟೂರ್ ಕೈಗೊಳ್ಳುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.