ಕೋಲ್ಕತ್ತಾ: ಭಾನುವಾರ ನಡೆದ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಹಾರ್ದಿಕ್ ಪಾಂಡ್ಯ 34 ಎಸೆತಗಳಲ್ಲಿ91 ರನ್ಗಳಿಸುವ ಮೂಲಕ ಈವರೆಗಿದ್ದ ಧೋನಿ,ರಸೆಲ್ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.
233 ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಬರೋಬ್ಬರಿ 9 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 91 ರನ್ಗಳಿಸಿ ಔಟಾದರು. ಬರೀ 9 ರನ್ಗಳಿಂದ ಶತಕ ವಂಚಿತರಾದರು.
-
FIFTY comes up for @hardikpandya7. This is his fastest half-century in #VIVOIPL pic.twitter.com/usrYW2CMwq
— IndianPremierLeague (@IPL) April 28, 2019 " class="align-text-top noRightClick twitterSection" data="
">FIFTY comes up for @hardikpandya7. This is his fastest half-century in #VIVOIPL pic.twitter.com/usrYW2CMwq
— IndianPremierLeague (@IPL) April 28, 2019FIFTY comes up for @hardikpandya7. This is his fastest half-century in #VIVOIPL pic.twitter.com/usrYW2CMwq
— IndianPremierLeague (@IPL) April 28, 2019
ಹಾರ್ದಿಕ್ ಪಾಂಡ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ಐಪಿಎಲ್ ಇತಿಹಾಸದಲ್ಲೇ 6ನೇ ಕ್ರಮಾಂಕದ ಬ್ಯಾಟ್ಸ್ಮನ್ನೊಬ್ಬ ಅತೀ ಹೆಚ್ಚು ರನ್ಗಳಿಸಿದ ದಾಖಲೆಗೆ ಪಾತ್ರರಾದರು. ಪಾಂಡ್ಯ 91ರನ್ಗಳಿಸುವ ಮೂಲಕ 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ವೈಯಕ್ತಿಕ ಹೆಚ್ಚುರನ್ ದಾಖಲಿಸಿದ ಆಟಗಾರ ಎಂದೆನಿಸಿದರು. ಈ ಮೂಲಕ ಧೋನಿ, ರಸೆಲ್ ಹಾಗೂ ಕ್ರಿಸ್ ಮೋರಿಸ್ ದಾಖಲೆ ಮುರಿದರು.
ಪಾಂಡ್ಯಗಿಂತ ಮೊದಲು ಕೆಕೆಆರ್ನ ರಸೆಲ್ 2018ರಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 88 ರನ್ಗಳಿಸಿದ್ದರು. ಧೋನಿ ಇದೇ ವರ್ಷ ಆರ್ಸಿಬಿ ವಿರುದ್ಧ 84ರನ್ಗಳಿಸಿದ್ದರು. 2016ರಲ್ಲಿ ಕ್ರಿಸ್ ಮೋರಿಸ್ ಗುಜರಾತ್ ವಿರುದ್ಧ 82 ರನ್ಗಳಿಸಿ ಕೆಳ ಕ್ರಮಾಂಕದಲ್ಲಿ ಗರಿಷ್ಠ ರನ್ ದಾಖಲೆ ಹೊಂದಿದ್ದರು.