ಮುಂಬೈ: ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಎಂಎಸ್ ಧೋನಿ ನಾಯಕತ್ವದಲ್ಲಿ ಹತ್ತು ವರ್ಷಗಳ ಕಾಲ ಕ್ರಿಕೆಟ್ ಆಡಿರುವ ಸುರೇಶ್ ರೈನಾ ಈ ಬಾರಿ ವಿಶ್ವಕಪ್ನಲ್ಲಿ ಧೋನಿ ಪಾತ್ರ ಕೊಹ್ಲಿ ಪಡೆಗೆ ನಿರ್ಣಾಯಕವಾಗಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ ಖಚಿತವಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಸುರೇಶ್ ರೈನಾ ಉಲ್ಲೇಖಿಸಿದ್ದಾರೆ.
ಭಾರತ ತಂಡದ ಪವರ್ ಹಿಟ್ಟರ್ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ 2019ರ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಕೊಹ್ಲಿ ನಾಯಕನಾಗಿರಬಹುದು. ಆದರೆ, ಇವರಿಗೆ ಹಾಗೂ ಯುವ ಬೌಲರ್ಗಳಿಗೆ ಧೋನಿ ನೆರವು ಅಗತ್ಯವಾಗಿ ಬೇಕಾಗಿದೆ. ಫೀಲ್ಡ್ ಸೆಟ್ ಮಾಡಲು , ಸ್ಪಿನ್ ಬೌಲರ್ಗಳಿಗೆ ಸಲಹೆ ನೀಡಲು ಧೋನಿ ನರೆವಾಗಲಿದ್ದಾರೆ ಎಂದು ರೈನಾ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಸರಣಿ ಶ್ರೇಷ್ಠ ಪ್ರಶಸ್ತಿ;
ಐಪಿಎಲ್ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಭಾರತ ತಂಡಕ್ಕೆ ನೆರವಾಗಲಿದ್ದಾರೆ. 5-6 ಓವರ್ ಬೌಲಿಂಗ್ ಮಾಡಬಲ್ಲ ಪಾಂಡ್ಯಾ 5 ಅಥವಾ 6ನೇ ಕ್ರಮಾಂಕದಲ್ಲಿ ಗೇಮ್ ಫಿನಿಷರ್ ಆಗಿ ಕೂಡಾ ಆಗಲಿದ್ದಾರೆ. ಹಾಗಾಗಿ ಈ ಬಾರಿ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಾಂಡ್ಯ ಪಡೆಯಲಿದ್ದಾರೆ ಎಂದು ರೈನಾ ಭವಿಷ್ಯ ನುಡಿದಿದ್ದಾರೆ.
ಕೊಹ್ಲಿ ಮಿಂಚು:
ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ರನ್ಗಳ ಶಿಖರ ಕಟ್ಟುವ ಕೊಹ್ಲಿ ವಿಶ್ವಕಪ್ನಲ್ಲೂ ತಮ್ಮ ರನ್ಮಷಿನ್ ಪಾತ್ರವನ್ನು ಮುಂದುವರಿಸಲಿದ್ದಾರೆ ಎಂದು ಸ್ನೇಹಿತನ ಪರ ಕೂಡಾ ರೈನಾ ಬ್ಯಾಟ್ ಬೀಸಿದ್ದಾರೆ.