ಚೆನ್ನೈ: ಕೆಕೆಆರ್ ನೀಡಿದ 109 ರನ್ಗಳ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು ಚೆನ್ನೈ ಸೂಪರ್ಕಿಂಗ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಚೆನ್ನೈ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್ಗಳಲ್ಲಿ ಕೇವಲ 108 ರನ್ಗಳಿಸಿತು. ಕೆಕೆಆರ್ ಪರ ರಸೆಲ್ 50 ರನ್ಗಳಿಸಿ 100 ಗಡಿದಾಡುವಂತೆ ಮಾಡಿದರು.
-
As comprehensive as it can get for @ChennaiIPL at the Chepauk.
— IndianPremierLeague (@IPL) April 9, 2019 " class="align-text-top noRightClick twitterSection" data="
CSK beat KKR by 7 wickets and 16 balls to spare 💛 #CSKvKKR #VIVOIPL pic.twitter.com/xDVTYMw6Xj
">As comprehensive as it can get for @ChennaiIPL at the Chepauk.
— IndianPremierLeague (@IPL) April 9, 2019
CSK beat KKR by 7 wickets and 16 balls to spare 💛 #CSKvKKR #VIVOIPL pic.twitter.com/xDVTYMw6XjAs comprehensive as it can get for @ChennaiIPL at the Chepauk.
— IndianPremierLeague (@IPL) April 9, 2019
CSK beat KKR by 7 wickets and 16 balls to spare 💛 #CSKvKKR #VIVOIPL pic.twitter.com/xDVTYMw6Xj
ಮೊದಲ ಓವರ್ ಎಸೆದ ಚಹಾರ್ ಕೊನೆಯ ಎಸೆತದಲ್ಲಿ ಕ್ರಿಸ್ ಲಿನ್ಗೆ ಗೇಟ್ಪಾಸ್ ನೀಡಿದರು. 2ನೇ ಓವರ್ನಲ್ಲಿ ಭಜ್ಜಿ ನರೈನ್ (6 )ವಿಕೆಟ್ ಪಡೆದರು. ಮತ್ತೆ ಮೂರನೆ ಓವರ್ನಲ್ಲಿ ನಿತೀಸ್ ರಾಣಾ, 5 ನೇ ಓವರ್ನಲ್ಲಿ ರಾಬಿನ್ ಉತ್ತಪ್ಪ ಚಹಾರ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಕಾರ್ತಿಕ್(19) ಹಾಗೂ ಶುಬ್ಮನ್ ಗಿಲ್(9) ತಾಹಿರ್ ಸ್ಪಿನ್ ಮೋಡಿಗೆ ಬಲಿಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಜಾಣತನದಿಂದ ಇನಿಂಗ್ಸ್ ಕಟ್ಟಿದ ರಸೆಲ್ 44 ಎಸೆತಗಳಲ್ಲಿ 50 ರನ್ಗಳಿಸಿ ತಂಡ 100ರೊಳಗೆ ಕುಸಿಯದಂತೆ ನೋಡಿಕೊಂಡರು.
-
.@ChennaiIPL overtake #KKR to go top of the table with 10 points 🙌💛#CSKvKKR pic.twitter.com/xWUFRroDcw
— IndianPremierLeague (@IPL) April 9, 2019 " class="align-text-top noRightClick twitterSection" data="
">.@ChennaiIPL overtake #KKR to go top of the table with 10 points 🙌💛#CSKvKKR pic.twitter.com/xWUFRroDcw
— IndianPremierLeague (@IPL) April 9, 2019.@ChennaiIPL overtake #KKR to go top of the table with 10 points 🙌💛#CSKvKKR pic.twitter.com/xWUFRroDcw
— IndianPremierLeague (@IPL) April 9, 2019
ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ತಾಹಿರ್ 2, ದೀಪಕ್ ಚಹಾರ್ 3, ಹರಭಜನ್ ಸಿಂಗ್ 2, ಜಡೇಜಾ 1 ವಿಕೆಟ್ ಪಡೆದರು.
ಚೆನ್ನೈ 109 ರನ್ಗಳ ಗುರಿಯನ್ನು 17.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ವಾಟ್ಸನ್ 17,ರೈನಾ14, ರಾಯುಡು 21 ರನ್ಗಳಿಸಿ ಔಟಾದರೆ, ಪ್ಲೆಸಿಸ್ಸಿಸ್ ಔಟಾಗದೆ43, ಜಾಧವ್ ಔಟಾಗದೆ 8 ರನ್ಗಳಿಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.
ಕೆಕೆಆರ್ ಪರ ಸುನಿಲ್ ನರೈನ್ 2, ಪೀಯುಷ್ ಚಾವ್ಲಾ 1 ವಿಕೆಟ್ ಪಡೆದರು.