ನವದೆಹಲಿ: ಭಾರತದಲ್ಲಿ ಕೊರೊನಾ ಬಿಕ್ಕಟ್ಟಿನ ಮಧ್ಯೆ ಇಂದು ಯುರೋಪಿಯನ್ ಸದಸ್ಯ ರಾಷ್ಟ್ರಗಳಿಂದ ವೆಂಟಿಲೇಟರ್‌ಗಳು, ರೆಮ್ಡೆಸಿವಿರ್ ಮತ್ತು ವೈದ್ಯಕೀಯ ಉಪಕರಣಗಳನ್ನು ಹೊತ್ತು ವಿಮಾನ ನವದೆಹಲಿಗೆ ಆಗಮಿಸಿತು.
ಜರ್ಮನಿ, ನೆದರ್‌ಲ್ಯಾಂಡ್ಸ್, ಮತ್ತು ಪೋರ್ಚುಗಲ್ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳು ತೋರಿಸುತ್ತಿರುವ ಒಗ್ಗಟ್ಟಿಗೆ ವಿದೇಶಾಂಗ ಸಚಿವಾಲಯ (ಇಎಎಂ) ವಕ್ತಾರ ಅರಿಂದಮ್ ಬಾಗ್ಚಿ ಧನ್ಯವಾದ ಸಲ್ಲಿಸಿದ್ದಾರೆ.
ಯುರೋಪಿಯನ್ ರಾಷ್ಟ್ರಗಳ ಸಹಕಾರ ಮುಂದುವರೆದಿದ್ದು, ಇಂದು ಜರ್ಮನಿಯಿಂದ 223 ವೆಂಟಿಲೇಟರ್‌ಗಳು, 25000 ರೆಮ್ಡೆಸಿವಿರ್ ಬಾಟಲುಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು. ಹಾಗೆ ನೆದರ್‌ಲ್ಯಾಂಡ್‌ನಿಂದ 30000 ರೆಮ್ಡೆಸಿವಿರ್ ಬಾಟಲುಗಳು ಮತ್ತು ಪೋರ್ಚುಗಲ್‌ನಿಂದ 5500 ರೆಮ್ಡೆಸಿವಿರ್ ಬಾಟಲುಗಳು ಭಾರತಕ್ಕೆ ಬಂದಿವೆ ಇದು ನಮ್ಮ ಯುರೋಪಿಯನ್ ಯೂನಿಯನ್ ಪಾಲುದಾರರ ಮೌಲ್ಯಯುತ ಬೆಂಬಲ ಎಂದು ಇಎಎಂ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಇದರ ನಡುವೆಯೇ ಖಜಕಿಸ್ತಾನ್‌ನಿಂದ 5.6 ಮಿಲಿಯನ್ ಮಾಸ್ಕ್ನ್ನು ಕಳುಹಿಸಿಕೊಡಲಾಗಿದೆ. ಇದನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.
ಎರಡನೇ ಅಲೆ ಜೊತೆ ಹೋರಾಡುತ್ತಿರುವಾಗ ಭಾರತವು ಅಮೆರಿಕ, ರಷ್ಯಾ ಮತ್ತು ಇಂಗ್ಲೆಂಡ್ ಸೇರಿದಂತೆ ಹಲವಾರು ದೇಶಗಳಿಂದ ಬೆಂಬಲವನ್ನು ಪಡೆದಿದೆ. ಗುರುವಾರದ ವೇಳೆಗೆ, ಭಾರತವು 3,62,727 ಹೊಸ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದ್ದು, ಇದರಲ್ಲಿ 3,52,181 ಜನರು ಬಿಡುಗಡೆಯಾಗಿದ್ದಾರೆ ಹಾಗೆ 4,120 ಸಾವು ಸಂಭವಿಸಿವೆ.