ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಬೀಜಿಂಗ್ ಭಾರತದೊಂದಿಗೆ ನಿಂತಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಪ್ರತಿಪಾದಿಸಿದ್ದಾರೆ. ಚೀನಾ ಸೇರಿದಂತೆ ಎಲ್ಲಾ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವಾಗ ಭಾರತಕ್ಕೆ ಬೆಂಬಲ ಮತ್ತು ನೆರವು ನೀಡಲಿದೆ ಎಂದು ಹೇಳಿದ್ದಾರೆ.
"ಸಾಂಕ್ರಾಮಿಕದ ಹೊಸ ಅಲೆಯ ಮಧ್ಯೆ ನಾನು ಮತ್ತೊಮ್ಮೆ ಭಾರತಕ್ಕೆ ನನ್ನ ಸಹಾನುಭೂತಿ ವ್ಯಕ್ತಪಡಿಸುತ್ತೇನೆ ಈ ಸಮಯದಲ್ಲಿ, ಚೀನಾ ಭಾರತ ಮತ್ತು ಎಲ್ಲ ಬ್ರಿಕ್ಸ್ ದೇಶಗಳೊಂದಿಗೆ ನಿಂತಿದೆ. ಇದು ಭಾರತಕ್ಕೆ ಅಗತ್ಯ ಇರುವವರೆಗೂ, ಚೀನಾ ಸೇರಿದಂತೆ ಎಲ್ಲಾ ಬ್ರಿಕ್ಸ್ ಪಾಲುದಾರರು ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ. ಭಾರತವು ಸಾಂಕ್ರಾಮಿಕ ರೋಗವನ್ನು ನಿವಾರಿಸುತ್ತದೆ ಎಂದು ನಮಗೆ ವಿಶ್ವಾಸವಿದೆ "ಎಂದು ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ವಾಂಗ್ ಯಿ ಹೇಳಿದರು.
ವಿಶ್ವದ ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಪ್ರಬಲ ಗುಂಪು ಬ್ರಿಕ್ಸ್ ಆಗಿದೆ. ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಬ್ರಿಕ್ಸ್ ಕಾರ್ಯವಿಧಾನ ಹೊಂದಿದೆ.
ಸಭೆಯ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಹಿಸಿದ್ದರು.