ಯಾದಗಿರಿ : ಇಂದಿನಿಂದ ಸಿಎಂ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು, ಯಾದಗಿರಿಯ ಗುರುಮಿಠಕಲ್ಗೆ ಸಿಎಂ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಬೆಳಗಿನ ಜಾವ 4.45 ಕ್ಕೆ ರೈಲಿನ ಮುಖಾಂತರ ಯಾದಗಿರಿಗೆ ಸಿಎಂ ಕುಮಾರಸ್ವಾಮಿ ಆಗಮಿಸಿದರು. ರೈಲು ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ ಭಗವಾನ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡರು. ರೈಲು ನಿಲ್ದಾಣದ ಮುಖಾಂತರ ಪ್ರವಾಸಿ ಮಂದಿರಕ್ಕೆ ತೆರಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸಿಎಂಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೋನರೆಡ್ಡಿ ಸಾಥ್ ನೀಡಿದರು.
ಜೆಡಿಎಸ್ ಶಾಸಕ ನಾಗಣ್ಣಗೌಡ ಕಂದಕೂರ ಮನೆಗೆ ಮುಖ್ಯಮಂತ್ರಿಗಳು ಆಗಮಿಸಿದ್ದಾರೆ. ಕಂದಕೂರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿ, ಆಹಾರ ಸುರಕ್ಷತಾ ಗುಣ್ಣಮಟ್ಟದ ಅಧಿಕಾರಿಗಳು ಪರಿಶೀಲಿಸಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ದೇವೇಗೌಡರು ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗುತ್ತೆ ರೆಡಿಯಾಗಿ ಎಂದಿದ್ದಾರೆ ಅಷ್ಟೇ ಹೊರತು ಮಧ್ಯಂತರ ಚುನಾವಣೆಯಲ್ಲ. ಮಧ್ಯಂತರ ಚುನಾವಣೆ ಆಗುವ ಪ್ರಶ್ನೆಯೇ ಇಲ್ಲ. ಮುಂದಿನ 4 ವರ್ಷ ಸರ್ಕಾರ ಸುಭದ್ರವಾಗಿ ನಡೆಯುತ್ತೆ. ತುಮಕೂರು ಕ್ಷೇತ್ರದಿಂದ ದೇವೇಗೌಡರ ಸೋಲಿಗೆ ಸಂಬಂಧಿಸದಂತೆ ಮಾತನಾಡಿದ ಅವರು, ಅದೆಲ್ಲಾ ಮುಗಿದು ಹೋಗಿರುವ ಕಥೆ. ಅದನ್ನು ಈಗ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಈಗ ಏನು ತಪ್ಪಾಗಿದೆ ಅದನ್ನು ಸರಿಪಡಿಸಿಕೊಂಡು ಹೋಗಬೇಕು ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಗ್ರಾಮ ವಾಸ್ತವ್ಯಕ್ಕೂ ಮೊದಲೆ ಪ್ರತಿಭಟನೆ ಬಿಸಿ :
ಸಿಎಂ ಗ್ರಾಮ ವಾಸ್ತವ್ಯಕ್ಕೂ ಮೊದಲೆ ಪ್ರತಿಭಟನೆಯ ಬಿಸಿ ತಟ್ಟಿದೆ. ಛತ್ರಪತಿ ಶಿವಾಜಿ ಮಹಾರಾಜರ ಯುವ ಸೇನಾ ವತಿಯಿಂದ ಗೋ ರಕ್ಷಕ ಶಿವು ಉಪ್ಪಾರ ಹತ್ಯೆ ಖಂಡಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಿಎಂ ತಂಗಿರುವ ಸರ್ಕ್ಯೂಟ್ ಹೌಸ್ ಮುಂದೆಯೇ ಬ್ಯಾನರ್ ಹಿಡಿದು ಪತ್ರಿಭಟನೆ ಮಾಡಲಾಗ್ತಿದೆ. ಮೃತ ಶಿವು ಉಪ್ಪಾರ ಹತ್ಯೆಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.