ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಸಿಬ್ಬಂದಿ ಬಳಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರೂ, ಸಿಎಂ ಕಚೇರಿ ಹಾಗೂ ಅಧಿಕೃತ ನಿವಾಸದಲ್ಲಿ ಇದಕ್ಕೆ ವಿನಾಯಿತಿ ನೀಡಲಾಗಿದೆ.
ರಾಜ್ಯದಲ್ಲಿ ಕಠಿಣ ಕರ್ಫ್ಯೂ ಜಾರಿ ನಂತರ ಸ್ಥಿತಿಗತಿ ಪರಾಮರ್ಶೆ,ಅಗತ್ಯ ಬಿದ್ದರೆ ವಿಡಿಯೋದ ಮೂಲಕ ಸಭೆ ನಡೆಸುವುದು ಸೇರಿ ಇತ್ಯಾದಿಗಳಿಗೆ ಸದಾ ಗೃಹ ಕಚೇರಿ ಮತ್ತು ಸರ್ಕಾರಿ ನಿವಾಸ ಕಾವೇರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಧಿಕಾರಿ ವರ್ಗ ಸದಾ ಸಿಎಂ ಸೂಚನೆ ಪಾಲನೆಗೆ ಸಿದ್ದವಿದೆ. ಹಾಗಾಗಿ, ಎಂದಿನಂತೆ ಸಿಎಂ ಆಪ್ತ ಸಹಾಯಕರು, ವಿಶೇಷಾಧಿಕಾರಿಗಳು,ಅಧಿಕಾರಿ ವರ್ಗದವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅದೇ ರೀತಿಯಲ್ಲಿ ಭದ್ರತಾ ಸಿಬ್ಬಂದಿ ಕೂಡ ಎಂದಿನಂತೆ ಇದೆ.
ಸಿಎಂ ಕಚೇರಿ ಮತ್ತು ನಿವಾಸದ ಬಳಿ ಮುಂಜಾಗ್ರತಾ ಕ್ರಮವಾಗಿ ಪ್ರೋಟೋಕಾಲ್ ಪ್ರಕಾರ ಒದಗಿಸಿರುವ ಭದ್ರತೆಯ ಕರ್ತವ್ಯ ನಿರ್ವಹಿಸುತ್ತಿದೆ. ಸಿಎಂ ಕಾನ್ವಾಯ್ ಸಿಬ್ಬಂದಿ, ಅಧಿಕಾರಿಗಳು ಕೂಡ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಿಎಂ ಕಚೇರಿ ಹಾಗೂ ನಿವಾಸದ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಿದ್ದು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ: 'ಆತ್ಮವಂಚಕ ಸಿದ್ದರಾಮಯ್ಯ' .. ಬಿಜೆಪಿ ಗೇಲಿ