ತೈಪೆ(ತೈವಾನ್): ತೈವಾನ್ ಗಡಿ ವಿವಾದದ ಮಧ್ಯೆ ಇದೀಗ ಮತ್ತೊಂದು ಆಕ್ರಮಣಕ್ಕೆ ಸಿಲುಕಿಕೊಂಡಿದೆ. ಚೀನಾದ ಮಿಲಿಟರಿ ವಿಮಾನವು ಮಂಗಳವಾರ ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದೊಳಗೆ (ADIZ)ಪ್ರವೇಶಿಸಿದೆ.
ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ ಶಾನ್ಕ್ಸಿ ವೈ -8 ಎಲೆಕ್ಟ್ರಾನಿಕ್ ವಾರ್‌ಫೇರ್ ವಿಮಾನವು ತೈವಾನ್‌ನ ರಕ್ಷಣಾ ಗುರುತಿನ ಒಳ ಪ್ರದೇಶದ ನೈರುತ್ಯ ಮೂಲೆಯಲ್ಲಿ ಹಾರಿದೆ ಎಂದು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ (ಎಂಎನ್‌ಡಿ) ತಿಳಿಸಿದೆ.
ಇದಕ್ಕೆ ಪ್ರತಿಯಾಗಿ, ತೈವಾನ್ ಫೈಟರ್ ಜೆಟ್‌ಗಳನ್ನು ರವಾನಿಸಿ, ರೇಡಿಯೋ ಎಚ್ಚರಿಕೆಗಳನ್ನು ನೀಡಿದೆ. ಹಾರಿಬಂದ ಪಿಎಲ್‌ಎಎಎಫ್ ವಿಮಾನವನ್ನು ಪತ್ತೆಹಚ್ಚಲು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ತೈವಾನ್ ಸೇನೆ ನಿಯೋಜಿಸಿದೆ.
ಮೇ ನಲ್ಲಿ, ಬೀಜಿಂಗ್ ಸತತ 6 ಬಾರಿ ತೈವಾನ್‌ನ ಗುರುತಿನ ವಲಯಕ್ಕೆ ವಿಮಾನಗಳನ್ನು ಕಳುಹಿಸಿದೆ. ಆದರೆ ಅವೆಲ್ಲವೂ ನಿಧಾನವಾಗಿ ಹಾರುವ ಟರ್ಬೊಪ್ರೂಪ್‌ಗಳನ್ನು ಒಳಗೊಂಡಿವೆ ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ.
ವಾಯು ರಕ್ಷಣಾ ಗುರುತಿನ ವಲಯ ಅಂದ್ರೆ ಏನು?
ವಾಯು ರಕ್ಷಣಾ ಗುರುತಿನ ವಲಯಗಳು ಆಂತರಿಕ ಎಚ್ಚರಿಕೆ ವ್ಯವಸ್ಥೆಗಳಾಗಿದ್ದು, ದೇಶಗಳು ತಮ್ಮ ವಾಯುಪ್ರದೇಶಕ್ಕೆ ಆಕ್ರಮಣವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಅಂತಹ ಪ್ರದೇಶವನ್ನು ಪ್ರವೇಶಿಸುವ ಯಾವುದೇ ವಿಮಾನವು ಅದರ ಮಾರ್ಗ ಮತ್ತು ಉದ್ದೇಶವನ್ನು ಆಯಾ ರಾಷ್ಟ್ರಕ್ಕೆ ವರದಿ ಮಾಡಬೇಕಾಗುತ್ತದೆ. ಆ ವಲಯಗಳನ್ನು ಅಂತಾರಾಷ್ಟ್ರೀಯ ವಾಯುಪ್ರದೇಶ ಎಂದು ವರ್ಗೀಕರಿಸಲಾಗಿರುತ್ತದೆ.
ಇತ್ತೀಚೆಗೆ ಚೀನಾ ಸೈನಿಕರು ಭಾರತದ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ನಿಂತು ಉದ್ಧಟತನ ಮೆರೆದಿದ್ದರು. ಈ ವೇಳೆ ಉಭಯ ದೇಶಗಳ ಸೈನಿಕರ ಮಧ್ಯೆ ಘರ್ಷಣೆ ಉಂಟಾದ ಪರಿಣಾಮ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ್ದ ನಮ್ಮ ದೇಶದ ಸೈನಿಕರು ಸಹ ದಿಟ್ಟತನ ತೋರಿ ಚೀನಾದ ಕೆಲ ಸೈನಿಕರನ್ನು ಸದೆಬಡಿದಿದ್ದರು. ಈ ಘಟನೆ ಬಳಿಕ ಹಲವು ಬಾರಿ ಎರಡೂ ದೇಶಗಳ ಮಧ್ಯೆ ಸೇನಾ ಮುಖ್ಯಸ್ಥರ ನಡುವೆ ಮಾತುಕತೆಗಳು ನಡೆದವು. ಆದರೆ, ಅದ್ಯಾವುದು ಅಂತಿಮ ಘಟ್ಟ ತಲುಪಿಲ್ಲ.