ETV Bharat / briefs

ಪ್ಲೇ ಆಫ್​ನತ್ತ ಸಿಎಸ್​ಕೆ ಚಿತ್ತ... ಎಸ್​ಆರ್​​ಹೆಚ್​​​​ಗೆ ಮಾಡು ಇಲ್ಲವೇ ಮಡಿ ಪಂದ್ಯ - ಧೋನಿ

ಸತತ ಮೂರು ಗೆಲುವಿನ ನಂತರ ಸತತ ಮೂರು ಸೋಲು ಕಂಡಿರುವ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿಎಸ್​ಕೆ ಇಂದು ಹೈದರಾಬಾದ್​ನಲ್ಲಿ ಮುಖಾಮುಖಿಯಾಗುತ್ತಿವೆ.

csk
author img

By

Published : Apr 17, 2019, 12:23 AM IST

Updated : Apr 17, 2019, 1:36 AM IST

ಹೈದರಾಬಾದ್​: ಧೋನಿ ನಾಯಕತ್ವದ ಸಿಎಸ್​ಕೆ ತಂಡ ಬುಧವಾರ ಹೈದರಾಬಾದ್​ನಲ್ಲಿ ಸನ್​ರೈಸರ್ಸ್​ ತಂಡವನ್ನು ಎದುರಿಸಲಿದೆ.

ಟಾಸ್​ ಗೆದ್ದರೂ ಎರಡು ಪಂದ್ಯ ಕಳೆದುಕೊಂಡಿರುವ ಹೈದರಾಬಾದ್​ ತಂಡ ಕಡಿಮೆ ಮೊತ್ತವನ್ನು ಚೇಸ್​ ಮಾಡಲಾಗದೆ ಸೋಲನ್ನೊಪ್ಪಿಕೊಂಡಿದೆ. ಹೈದರಾಬಾದ್​ ವಾರ್ನರ್ ಹಾಗೂ ಬ್ಯಾರ್ಸ್ಟೋವ್​ ಅವರ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಅವರಿಬ್ಬರು ವಿಫಲರಾದರೆ ಪಂದ್ಯ ಸೋಲುಕಾಣುತ್ತಿದೆ.

ಮನೀಷ್​ ಪಾಂಡೆ, ದೀಪಕ್​ ಹೂಡಾ, ಯೂಸುಫ್​ ಪಠಾಣ್​, ವಿಜಯ್​ ಶಂಕರ್​, ಮೊಹಮದ್​ ನಬಿ ಸೇರಿದಂತೆ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗುತ್ತಿದೆ. ಏನೇ ಪ್ರಯೋಗ ಮಾಡಿದರೂ ಹೈದರಾಬಾದ್​ಗೆ ಗೆಲುವು ಮರೀಚಿಕೆಯಾಗಿದೆ.

ಮುಂಬೈ ವಿರುದ್ಧ 137 ರನ್​ ಚೇಸ್​ ಮಾಡಲಾಗದೆ 96ಕ್ಕೆ, ಡೆಲ್ಲಿ ವಿರುದ್ಧ 156 ರನ್​ ಚೇಸ್​ ಮಾಡಲಾಗದೆ 116ಕ್ಕೆ ಆಲೌಟ್​ ಆಗುವ ಮೂಲಕ​ ಹೀನಾಯ ಸೋಲುಕಂಡಿದೆ. ಇಂದಿನ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್​ ಪಡೆ ಹೊಂದಿರುವ ಸಿಎಸ್​ಕೆ ವಿರುದ್ದ ಕಣಕ್ಕಿಳಿಯುತ್ತಿದ್ದು, ಮಧ್ಯಮ ಕ್ರಮಾಂಕದ ಆಟಗಾರರು ತಪ್ಪನ್ನು ತಿದ್ದಿಕೊಳ್ಳದಿದ್ದರೆ ಇಂದಿನ ಪಂದ್ಯದಲ್ಲೂ ಸೋಲು ಕಾಣಬೇಕಾಗುತ್ತದೆ.

ಇನ್ನು ಚೆನ್ನೈ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಇನ್ನು 4-5 ಪಂದ್ಯಗಳಿರುವ ಮುನ್ನವೇ ಪ್ಲೇ ಆಫ್​ ಖಚಿತಪಡಿಸಿಕೊಳ್ಳಲಿದೆ. ಸಿಎಸ್​ಕೆ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿರುವ ತಂಡವನ್ನೇ ಕಣಕ್ಕಿಸಿಸುವ ಸಾಧ್ಯತೆಯಿದೆ.

ಮುಖಾಮುಖಿ:

ಎರಡು ತಂಡಗಳು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ 9ರಲ್ಲಿ ಹೈದರಾಬಾದ್​ 2ರಲ್ಲಿ ಜಯ ಸಾಧಿಸಿದೆ. ಹೈದರಾಬಾದ್​​ನಲ್ಲಿ ನಡೆದಿರುವ 3 ಪಂದ್ಯಗಳಲ್ಲಿ ಸಿಎಸ್​ಕೆ 2, ಎಸ್​ಆರ್​ಹೆಚ್​ 1ರಲ್ಲಿ ಜಯ ಸಾಧಿಸಿದೆ.

ಎರಡೂ ತಂಡಗಳ ಸಂಭಾವ್ಯ 11ರ ಬಳಗ ಇಂತಿದೆ:

ಸನ್​ರೈಸರ್ಸ್​ ಹೈದರಾಬಾದ್:

ಜಾನಿ ಬ್ಯಾರ್ಸ್ಟೋವ್​, ಡೇವಿಡ್​ ವಾರ್ನರ್​, ಕೇನ್​ ವಿಲಿಯಮ್ಸನ್/​ಮಾರ್ಟಿನ್​ ಗಫ್ಟಿಲ್​​​, ವಿಜಯ್​ ಶಂಕರ್​, ಮನೀಷ್​ ಪಾಂಡೆ, ಯೂಸುಫ್​ ಪಠಾಣ್​, ಶಕಿಬ್​​ ಅಲ್​ ಹಸನ್​/ಮಹಮ್ಮದ್​ ನಬಿ, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಸಿದ್ದಾರ್ಥ್​​ ಕೌಲ್, ಸಂದೀಪ್​ ಶರ್ಮಾ

ಚೆನ್ನೈ ಸೂಪರ್​ ಕಿಂಗ್ಸ್​:

ಶೇನ್​ ವಾಟ್ಸನ್​, ಅಂಬಾಟಿ ರಾಯುಡು, ಸುರೇಶ್​ ರೈನಾ, ಎಂ.ಎಸ್.ಧೋನಿ, ಕೇದಾರ್​ ಜಾಧವ್​, ಇಮ್ರಾನ್​ ತಾಹಿರ್​, ಹರಭಜನ್​ ಸಿಂಗ್​, ಡ್ವೇನ್​ ಬ್ರಾವೋ, ರವೀಂದ್ರ ಜಡೇಜಾ, ದೀಪಕ್​ ಚಹಾರ್, ಶಾರ್ದುಲ್​ ಠಾಕೂರ್​

Intro:Body:

ಹೈದರಾಬಾದ್​: ಧೋನಿ ನಾಯಕತ್ವದ ಸಿಎಸ್​ಕೆ ತಂಡ ಬುಧವಾರ ಹೈದರಾಬಾದ್​ನಲ್ಲಿ ಸನ್​ರೈಸರ್ಸ್​ ತಂಡವನ್ನು ಎದುರಿಸಲಿದೆ.

ಟಾಸ್​ ಗೆದ್ದರೂ ಎರಡು ಪಂದ್ಯ ಕಳೆದುಕೊಂಡಿರುವ ಹೈದರಾಬಾದ್​ ತಂಡ ಕಡಿಮೆ ಮೊತ್ತವನ್ನು ಚೇಸ್​ ಮಾಡಲಾಗದೆ ಸೋಲನ್ನೊಪ್ಪಿಕೊಂಡಿದೆ. ಹೈದರಾಬಾದ್​ ವಾರ್ನರ್ ಹಾಗೂ ಬ್ಯಾರ್ಸ್ಟೋವ್​ ಅವರ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಅವರಿಬ್ಬರು ಆಡದಿದ್ದರೇ ಪಂದ್ಯ ಸೋಲುಕಾಣುತ್ತಿದೆ.

ಮನೀಷ್​ ಪಾಂಡೆ, ದೀಪಕ್​ ಹೂಡ, ಯೂಸೆಫ್​ ಪಠಾಣ್​, ವಿಜಯ್​ ಶಂಕರ್​,ನಬಿ ಸೇರಿದಂತೆ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗುತ್ತಿದೆ. ಏನೇ ಪ್ರಯೋಗ ಮಾಡಿದರು ಹೈದರಾಬಾದ್​ಗೆ ಗೆಲುವು ಮರೀಚಿಕೆಯಾಗಿದೆ.

ಮುಂಬೈ ವಿರುದ್ಧ 137 ರನ್​ ಚೇಸ್​ ಮಾಡಲಾಗದೆ 96ಕ್ಕೆ , ಡೆಲ್ಲಿ ವಿರುದ್ಧ 156 ರನ್​ ಚೇಸ್​ ಮಾಡಲಾಗದೆ 116 ಕ್ಕೆ ಆಲೌಟ್​ ಆಗುವ ಮೂಲಕ ಚೇಸ್​ ಮಾಡಲಾಗದೆ ಹೀನಾಯ ಸೋಲುಕಂಡಿದೆ. ನಾಳಿನ ಪಂದ್ಯದಲ್ಲಿ ಚೆನ್ನೈ ಬಲಿಷ್ಠ ಬೌಲಿಂಗ್​ ಪಡೆಯೊಂದಿರುವ ಸಿಎಸ್​ಕೆ ವಿರುದ್ದ ಕಣಕ್ಕಿಳಿಯುತ್ತಿದ್ದು ಮಧ್ಯಮ ಕ್ರಮಾಂಕದ ಆಟಗಾರರು ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ನಾಲಿನ ಪಂದ್ಯದಲ್ಲೂ ಸೋಲುಕಾಣಬೇಕಾಗುತ್ತದೆ.

ಇನ್ನು ಚೆನ್ನೈ ಆಡಿರುವ 8 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದೆ, ನಾಳಿನ ಪಂದ್ಯದಲ್ಲಿ ಗೆದ್ದರೆ ಇನ್ನು 4-5 ಪಂದ್ಯಗಳಿರುವ ಅಗೆಯೇ ಪ್ಲೆ ಆಫ್​ ಖಚಿತಪಡಿಸಿಕೊಳ್ಳಲಿದೆ. ಸಿಎಸ್​ಕೆ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿರುವ ತಂಡವನ್ನೇ ಆಡಿಸಲಿದೆ.

ಮುಖಾಮುಖಿ

ಎರಡು ತಂಡಗಳು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ 9 ರಲ್ಲಿ ಹೈದರಾಬಾದ್​ 2 ರಲ್ಲಿ ಜಯ ಸಾಧಿಸಿದೆ. ಹೈದರಾಬಾದಿನಲ್ಲಿ ನಡೆದಿರುವ 3 ಪಂದ್ಯಗಳಲ್ಲಿ ಸಿಎಸ್​ಕೆ 2, ಎಸ್​ಆರ್​ಹೆಚ್​ 1ರಲ್ಲಿ ಜಯ ಸಾಧಿಸಿದೆ.

ಸನ್​ರೈಸರ್ಸ್​ ಹೈದರಾಬಾದ್

ಜಾನಿ ಬ್ಯಾರ್ಸ್ಟೋವ್​, ಡೇವಿಡ್​ ವಾರ್ನರ್​,ಕೇನ್​ ವಿಲಿಯಮ್ಸನ್/​ ಮಾರ್ಟಿನ್​ ಗಫ್ಲಿಲ್​, ವಿಜಯ್​ ಶಂಕರ್​, ಮನೀಷ್​ ಪಾಂಡೆ, ಯೂಸಫ್​ ಪಠಾಣ್​, ಶಕಿಭ್​ ಹಲ್​ ಹಸನ್​/ಮಹಮ್ಮದ್​ ನಭಿ, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಸಿದ್ದಾರ್ಥ್​​ ಕೌಲ್, ಸಂದೀಪ್​ ಶರ್ಮಾ

ಚೆನ್ನೈ ಸೂಪರ್​ ಕಿಂಗ್ಸ್​:

 ಶೇನ್​ ವಾಟ್ಸನ್​, ಅಂಬಾಟಿ ರಾಯುಡು, ಸುರೇಶ್​ ರೈನಾ, ಎಂ.ಎಸ್.ಧೋನಿ, ಕೇದಾರ್​ ಜಾಧವ್​, ಇಮ್ರಾನ್​ ತಾಹಿರ್​, ಹರಭಜನ್​ ಸಿಂಗ್​, ಡ್ವೇನ್​ ಬ್ರಾವೋ, ರವೀಂದ್ರ ಜಡೇಜಾ, ದೀಪಕ್​ ಚಹಾರ್, ಶಾರ್ದುಲ್​ ಠಾಕೂರ್​ 

Conclusion:
Last Updated : Apr 17, 2019, 1:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.