ಮೈಸೂರು: ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆ ರುಕ್ಮಿಣಿ ಮಾದೇಗೌಡ ಅವರ ನಗರ ಪಾಲಿಕೆ ಸದಸ್ಯತ್ವ ರದ್ದಾಗಿದೆ.
ಪಾಲಿಕೆಯ 36 ನೇ ವಾರ್ಡ್ ಸದಸ್ಯೆಯಾಗಿರುವ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪಾಲಿಕೆ ಸದಸ್ಯತ್ವ ರದ್ದಾಗಿರುವುದರಿಂದ ಮೇಯರ್ ಸ್ಥಾನಕ್ಕೂ ಕಂಟಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಲು ರುಕ್ಮಿಣಿ ಅವರ ಪತಿ,ಜಿಪಂ ಸದಸ್ಯಮಾದೇಗೌಡ ನಿರ್ಧರಿಸಿದ್ದಾರೆ.
ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕುವವರೆಗೂ ಮೇಯರ್ ಗೆ ಅಧಿಕಾರ ಇರುವುದಿಲ್ಲ ಎನ್ನಲಾಗಿದೆ.