ETV Bharat / briefs

ನಿಲ್ಲಿಸಿದ್ದ ಬೈಕ್​ ಕಳ್ಳತನ: ಖದೀಮನ ಬಂಧಿಸಿದ ಪೊಲೀಸರು - Bike theft News

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬ್ಯಾಡರಹಳ್ಳಿ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಬೈಕ್​ ಕಳ್ಳತನ
ಬೈಕ್​ ಕಳ್ಳತನ
author img

By

Published : May 27, 2021, 10:34 AM IST

ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ನಿಲ್ಲಿಸಿದ್ದ ಬೈಕ್​ಗಳನ್ನು ಕದಿಯುತ್ತಿದ್ದ ಖದೀಮನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್(21) ಬಂಧಿತ ಖದೀಮ. ಈತ ಬ್ಯಾಡರಹಳ್ಳಿ ಸಮೀಪ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳ್ಳತನ ಮಾಡಿದ್ದ. ಬಳಿಕ ಮಾಲೀಕರು ನೀಡಿದ ದೂರನ್ನು ದಾಖಲಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಇತರ ಬೈಕ್​ ಕಳ್ಳತನ ಎಸಗಿದ್ದ ಪ್ರಕರಣ ಕೂಡ ಬೆಳಕಿಗೆ ಬಂದಿದೆ.

ಬಂಧಿತ ನಿಖಿಲ್​ನಿಂದ 2.65 ಲಕ್ಷ ರೂ. ಮೌಲ್ಯದ 6 ಬೈಕ್ ಜಪ್ತಿ ಮಾಡಲಾಗಿದೆ. ಈ ಹಿಂದೆ ಬ್ಯಾಡರಹಳ್ಳಿ ಮತ್ತು ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.