ETV Bharat / briefs

ಮಿಷನ್​ 22 ಸಾಧಿಸೋದು ಪಕ್ಕಾ... ರಾಜ್ಯ ಚುನಾವಣಾ ವರದಿಯಲ್ಲಿದೆ ಇನ್ನಷ್ಟು ಅಚ್ಚರಿಯ ಅಂಶ!? - ರಾಜ್ಯ ಚುನಾವಣಾ ಸಮಿತಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಚುನಾವಣಾ ಸಮಿತಿಗಳಿಂದ ಚುನಾವಣಾ ನಿರ್ವಹಣೆಯ ಸಂಪೂರ್ಣ ವರದಿ ಪಡೆದುಕೊಂಡರು. ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಪ್ರತಿ ಜಿಲ್ಲೆಯ ಚುನಾವಣಾ ಸಮಿತಿ ಸಂಚಾಲಕರು,ಅಭ್ಯರ್ಥಿಗಳಿಂದ ವರದಿ ಪಡೆದುಕೊಂಡರು.ವರದಿ ಸಂಬಂಧ ಖುದ್ದಾಗಿ ಪ್ರಶ್ನೆ ಕೇಳಿ ಸಂದೇಹಗಳನ್ನು ಪರಿಹರಿಸಿಕೊಂಡರು.

ಬಿಜೆಪಿ
author img

By

Published : Apr 27, 2019, 1:37 AM IST

ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ, ಶಿವಮೊಗ್ಗದಲ್ಲಿ ಗೆಲುವು ಖಚಿತ,ತುಮಕೂರು,ಕಲಬುರಗಿಯಲ್ಲಿ ಅಚ್ಚರಿ ಫಲಿತಾಂಶ ಬರಲಿದೆ ಎಂದು ಜಿಲ್ಲಾ ಚುನಾವಣಾ ಸಮಿತಿಗಳು ರಾಜ್ಯ ಚುನಾವಣಾ ಸಮಿತಿಗೆ ವರದಿ ಸಲ್ಲಿಕೆ ಮಾಡಿವೆ.

ಟಾಸ್ಕ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ,ಕೊನೆ ಕ್ಷಣದವರೆಗೂ ಕೆಲ ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸದೇ ಗೊಂದಲ ಸೃಷ್ಠಿಯಾಗಿದ್ದು ಬಿಟ್ಟರೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ವರದಿ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಜಿಲ್ಲಾ ಚುನಾವಣಾ ಸಮಿತಿಗಳಿಂದ ಚುನಾವಣಾ ನಿರ್ವಹಣೆಯ ಸಂಪೂರ್ಣ ವರದಿ ಪಡೆದುಕೊಂಡರು. ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಪ್ರತಿ ಜಿಲ್ಲೆಯ ಚುನಾವಣಾ ಸಮಿತಿ ಸಂಚಾಲಕರು,ಅಭ್ಯರ್ಥಿಗಳಿಂದ ವರದಿ ಪಡೆದುಕೊಂಡರು.ವರದಿ ಸಂಬಂಧ ಖುದ್ದಾಗಿ ಪ್ರಶ್ನೆ ಕೇಳಿ ಸಂದೇಹಗಳನ್ನು ಪರಿಹರಿಸಿಕೊಂಡರು.

ರಾಜ್ಯ ಚುನಾವಣಾ ವರದಿ

ಸಭೆಯಲ್ಲಿ ಏನೇನಾಯ್ತು..?

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ವಿಳಂಬ ಮಾಡಿದ ಕುರಿತು ಪ್ರಸ್ತಾಪವಾಯಿತು.ಬೆಂಗಳೂರು ದಕ್ಷಿಣಕ್ಕೆ ಕೊನೆವರೆಗೂ ಅಭ್ಯರ್ಥಿ ಘೋಷಣೆ ಮಾಡಲಿಲ್ಲ.ಕೊನೆ ಕ್ಷಣದಲ್ಲಿ ಅಚ್ಚರಿ ರೀತಿ ಅಭ್ಯರ್ಥಿ ಘೋಷಣೆ ಮಾಡಲಾಯಿತು.ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಕ್ಷೇತ್ರದಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಯ್ತು.ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಅಂತ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಸಭೆಯಲ್ಲಿದ್ದ ದಿವಂಗತ ಅನಂತ್​​ ಕುಮಾರ್​​​ ಪತ್ನಿ ತೇಜಸ್ವಿನಿ ಅನಂತಕುಮಾರ್​​​​​​ ಏನೂ ಮಾತನಾಡದೆ ಮೌನವಾಗಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕೊನೆವರೆಗೂ ಅಭ್ಯರ್ಥಿ ಯಾರು ಎಂಬ ಕುತೂಹಲವಿತ್ತು.ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ಚುನಾವಣೆ ಕೆಲಸ ಮಾಡಲು ಅವಕಾಶ ಸಿಗುತ್ತಿತ್ತು.ಅಭ್ಯರ್ಥಿ ಹೆಸರನ್ನು ಅಂತಿಮ ಕ್ಷಣದಲ್ಲಿ ಘೋಷಣೆ ಮಾಡಿದ್ದರಿಂದ ಚುನಾವಣೆ ಪ್ರಚಾರದ ಅಖಾಡದಲ್ಲಿ ಕಾಂಗ್ರೆಸ್​​​​​​ಗಿಂತ ಬಿಜೆಪಿ ಹಿನ್ನಡೆ ಅನುಭವಿಸಿತು ಅಂತ ಬೆಂಗಳೂರು ಗ್ರಾಮಾಂತರ ಲೋಕಸಭೆ ಬಿಜೆಪಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಬೆಂಗಳೂರು ದಕ್ಷಿಣ,ಕೇಂದ್ರ,ಉತ್ತರ ಕ್ಷೇತ್ರಗಳು ಭದ್ರವಾಗಲಿವೆ ಎನ್ನುವ ವರದಿ ಸಲ್ಲಿಕೆ ಮಾಡಲಾಯಿತು. ಮಂಡ್ಯ ರಾಜಕಾರಣ ಬಗ್ಗೆಯೂ ಬಿಸಿಬಿಸಿ ಚರ್ಚೆ ನಡೆಯಿತು,ಪಕ್ಷದ ಅಭ್ಯರ್ಥಿ ಇರದೇ ಇದ್ದರೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಪಕ್ಷ ಬೆಂಬಲ ಘೋಷಣೆ ಮಾಡಿ ಅವರ ಪರ ಕೆಲಸ ಮಾಡಿದ್ದರಿಂದ ಚರ್ಚೆ ಕೈಗೆತ್ತಿಕೊಳ್ಳಲಾಯಿತು.

ಮಂಡ್ಯದ ಲೋಕಸಭೆ ಚುನಾವಣೆ ವರದಿಯನ್ನು ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗನಗೌಡ‌ ಸಲ್ಲಿಕೆ ಮಾಡಿದರು. 45 ಸಾವಿರ ಅಂತರದಲ್ಲಿ ಸುಮಲತಾ ಗೆಲ್ಲುತ್ತಾರೆ ಅಂತ ವರದಿ ಸಲ್ಲಿಕೆ ಮಾಡಿದ್ದು, ಪಾಂಡವಪುರ ಮತ್ತು ಮೇಲುಕೋಟೆಯಲ್ಲಿ ಕೊಂಚ ಮುನ್ನಡೆಯನ್ನು ಜೆಡಿಎಸ್ ಪಡೆಯಲಿದೆ ಉಳಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಬಲದ ಮತಗಳಿಕೆಯಾಗಲಿದೆ.ಹಣಬಲದ ಮುಂದೆ ಸ್ವಾಭಿಮಾನಕ್ಕೆ ಗೆಲುವು ಸಿಗುತ್ತದೆ ಅಂತ ವರದಿ ಸಲ್ಲಿಕೆ ಮಾಡಲಾಯಿತು.

ವರದಿ ಸಲ್ಲಿಸುವ ವೇಳೆ ವಿಶೇಷ ಘಟನೆಗಳನ್ನು ಪ್ರಸ್ತಾಪಿಸುವಂತೆ ಯಡಿಯೂರಪ್ಪ ಸೂಚಿಸಿದರು.ಈ ವೇಳೆ ಮಂಡ್ಯದ ಚುನಾವಣೆ ವೇಳೆ ಪ್ರಸ್ತಾಪವಾಗಿದ್ದ ಮಾಯಾಂಗಿಣಿ, ಗಂಡ ಸತ್ತ ಹೆಂಡತಿ ಅಂತ ನೀಡಿದ ಹೇಳಿಕೆ, ಕಳ್ಳೆತ್ತು ಮತ್ತು ಜೋಡೆತ್ತು ಹೇಳಿಕೆ ಪ್ರಸ್ತಾಪ ಮಾಡಿ ವಿಶೇಷ ಘಟನೆಗಳನ್ನು ಮಂಡ್ಯ ಜಿಲ್ಲಾಧ್ಯಕ್ಷ ನಾಗನಗೌಡ ಪ್ರಸ್ತಾಪಿಸಿದರು.

ಬಿಎಸ್​​ವೈ ತವರಿನಲ್ಲಿ ಗೆಲುವಿನ ಉಡುಗೊರೆಯ ವರದಿ:

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಗ್ಗೆ ಸಭೆಯಲ್ಲಿ ಭರ್ಜರಿ ಚರ್ಚೆ‌‌ ನಡೆಯಿತು.ಸಭೆಗೆ ಚುನಾವಣೆ ಮತ ಲೆಕ್ಕಾಚಾರದ ವರದಿಯನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ನೀಡಿತು. ಸಾಗರ ಮತ್ತು ಸೊರಬದಲ್ಲಿ ಅಲ್ಪ ಹಿನ್ನಡೆಯಾಗಬಹುದೆಂಬ ಆದರೂ ಉಪ ಚುನಾವಣೆಗೂ ಹೆಚ್ಚಿನ ಅಂತರದಲ್ಲಿ ಬಿಜೆಪಿ‌ ಗೆಲ್ಲುತ್ತದೆ ಎಂದು ವರದಿ ಸಲ್ಲಿಕೆ ಮಾಡಲಾಯಿತು.

ಈ ವೇಳೆ ಆ ಕ್ಷೇತ್ರಗಳಲ್ಲಿ ಅಲ್ಪ ಮುನ್ನಡೆ ಅಥವಾ ಸಮಬಲದ ಲೀಡ್ ನೀಡುವುದಾಗಿ ಶಾಸಕರಾದ ಹರತಾಳ್ ಹಾಲಪ್ಪ ಮತ್ತು ಕುಮಾರ ಬಂಗಾರಪ್ಪರಿಂದ ಸ್ಪಷ್ಟೀಕರಣ ನೀಡಿದರು.

ಅಂತಿಮವಾಗಿ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ, ಬೈಂದೂರು, ತೀರ್ಥಹಳ್ಳಿ, ಶಿಕಾರಿಪುರ ಕ್ಷೇತ್ರಗಳಿಂದ ಅಧಿಕ ಲೀಡ್ ಸಿಗಲಿದೆ ಉಪ ಚುನಾವಣೆಗಿಂತಲೂ ಈ ಬಾರಿ 1.50 ಲಕ್ಷ ಮತಗಳ ಮುನ್ನಡೆಯ ವರದಿ ಸಲ್ಲಿಕೆ ಮಾಡಲಾಯಿತು.

ತುಮಕೂರು,ಕೋಲಾರ,ಕಲಬುರಗಿಯಲ್ಲಿ ಸಮಬಲದ ಹೋರಾಟ ನಡೆಸಿರುವ ವರದಿ ಸಲ್ಲಿಕೆ ಮಾಡಿದ್ದು ಅಚ್ಚರಿ ಫಲಿತಾಂಶದ ವಿಶ್ವಾಸ ವ್ಯಕ್ತಪಡಿಸಲಾಗಿದೆ. ದಾವಣಗೆರೆ, ಉಡುಪಿ-ಚಿಕ್ಕಮಗಳೂರು,ಉತ್ತರ ಕನ್ನಡ,ಮಂಗಳೂರು,ಬೆಳಗಾವಿ,ದಾವಣಗೆರೆ ಸಮಿತಿಗಳು ಗೆಲುವಿನ ವಿಶ್ವಾಸದ ವರದಿ ಸಲ್ಲಿಕೆ ಮಾಡಿವೆ. ಬಳ್ಳಾರಿ,ಚಿತ್ರದುರ್ಗ,ರಾಯಚೂರಿನಲ್ಲಿ ತೀವ್ರ ಸ್ಪರ್ಧೆ ನೀಡಿರುವ ವರದಿಯನ್ನು ಸಲ್ಲಿಸಲಾಗಿದೆ. ಬಹುತೇಕ ಹಾಲಿ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ವಿಶ್ವಾಸ ಇಂದು ಜಿಲ್ಲಾ ಸಮಿತಿಗಳು ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ‌ ತಿಳಿದುಬಂದಿದೆ.

ಜಿಲ್ಲಾ ಸಮಿತಿಗಳ ವರದಿ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, ನಾಲ್ಕೂವರೆ ಗಂಟೆಗಳಿಂದ ಲೋಕಸಭೆ ಉಸ್ತುವಾರಿಗಳು ಮತ್ತು ಅಭ್ಯರ್ಥಿಗಳ ಜೊತೆ ಸಭೆ ಮಾಡಿದ್ದೇವೆ. ಕನಿಷ್ಠ 22 ಕ್ಷೇತ್ರ ಗೆಲ್ಲುತ್ತೇವೆ.ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ವೀರಪ್ಪ ಮೊಯ್ಲಿಗೆ ಸಮರ್ಪಕವಾಗಿ ಬಿಜೆಪಿ ಸವಾಲು ಒಡ್ಡಿದೆ.ನೂರಕ್ಕೆ ನೂರು 22 ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ, ಶಿವಮೊಗ್ಗದಲ್ಲಿ ಗೆಲುವು ಖಚಿತ,ತುಮಕೂರು,ಕಲಬುರಗಿಯಲ್ಲಿ ಅಚ್ಚರಿ ಫಲಿತಾಂಶ ಬರಲಿದೆ ಎಂದು ಜಿಲ್ಲಾ ಚುನಾವಣಾ ಸಮಿತಿಗಳು ರಾಜ್ಯ ಚುನಾವಣಾ ಸಮಿತಿಗೆ ವರದಿ ಸಲ್ಲಿಕೆ ಮಾಡಿವೆ. ಟಾಸ್ಕ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ,ಕೊನೆ ಕ್ಷಣದವರೆಗೂ ಕೆಲ ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸದೇ ಗೊಂದಲ ಸೃಷ್ಠಿಯಾಗಿದ್ದು ಬಿಟ್ಟರೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ವರದಿ ನೀಡಿದ್ದಾರೆ.Body:ಹೌದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಜಿಲ್ಲಾ ಚುನಾವಣಾ ಸಮಿತಿಗಳಿಂದ ಚುನಾವಣಾ ನಿರ್ವಹಣೆಯ ಸಂಪೂರ್ಣ ವರದಿ ಪಡೆದುಕೊಂಡರು. ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಪ್ರತಿ ಜಿಲ್ಲೆಯ ಚುನಾವಣಾ ಸಮಿತಿ ಸಂಚಾಲಕರು,ಅಭ್ಯರ್ಥಿಗಳಿಂದ ವರದಿ ಪಡೆದುಕೊಂಡರು.ವರದಿ ಸಂಬಂಧ ಖುದ್ದಾಗಿ ಪ್ರಶ್ನೆ ಕೇಳಿ ಸಂದೇಹಗಳನ್ನು ಪರಿಹರಿಸಿಕೊಂಡರು.

ಸಭೆಯಲ್ಲಿ ಏನೇನು‌ ಚರ್ಚೆಗೆ ಬಂತು:

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ವಿಳಂಬ ಮಾಡಿದ ಕುರಿತು ಪ್ರಸ್ತಾಪವಾಯಿತು.ಬೆಂಗಳೂರು ದಕ್ಷಿಣಕ್ಕೆ ಕೊನೆವರೆಗೂ ಅಭ್ಯರ್ಥಿ ಘೋಷಣೆ ಮಾಡಲಿಲ್ಲ.ಕೊನೆ ಕ್ಷಣದಲ್ಲಿ ಅಚ್ಚರಿ ರೀತಿ ಅಭ್ಯರ್ಥಿ ಘೋಷಣೆ ಮಾಡಲಾಯಿತು.ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಕ್ಷೇತ್ರದಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಯ್ತು.ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಅಂತ ಅಭಿಪ್ರಾಯ ವ್ಯಖ್ತವಾಯಿತು.ಈ ವೇಳೆ ಸಭೆಯಲ್ಲಿದ್ದ ದಿವಂಗತ ಅನಂತ ಕುಮಾರ ಪತ್ನಿ ತೇಜಸ್ವಿನಿ ಅನಂತಕುಮಾರ ಉಪಸ್ಥಿತರಿದ್ದರೂ ಯಾವುದೇ ಮಾತನಾಡದೇ ಮೌನವಾಗಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕೊನೆವರೆಗೂ ಅಭ್ಯರ್ಥಿ ಯಾರು ಎಂಬ ಕುತೂಹಲವಿತ್ತು.ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ಚುನಾವಣೆ ಕೆಲಸ ಮಾಡಲು ಅವಕಾಶ ಸಿಗುತ್ತಿತ್ತು.ಅಭ್ಯರ್ಥಿ ಹೆಸರನ್ನು ಅಂತಿಮ ಕ್ಷಣದಲ್ಲಿ ಘೋಷಣೆ ಮಾಡಿದ್ದರಿಂದ ಚುನಾವಣೆ ಪ್ರಚಾರದ ಅಖಾಡದಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಹಿನ್ನಡೆ ಅನುಭವಿಸಿತು ಅಂತ ಬೆಂಗಳೂರು ಗ್ರಾಮಾಂತರ ಲೋಕಸಭೆ ಬಿಜೆಪಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆದರೆ ಬೆಂಗಳೂರು ದಕ್ಷಿಣ,ಕೇಂದ್ರ,ಉತ್ತರ ಕ್ಷೇತ್ರಗಳು ಭದ್ರವಾಗಲಿವೆ ಎನ್ನುವ ವರದಿ ಸಲ್ಲಿಕೆ ಮಾಡಲಾಯಿತು.

ಮಂಡ್ಯ ರಾಜಕಾರಣ ಬಗ್ಗೆಯೂ ಬಿಸಿಬಿಸಿ ಚರ್ಚೆ ನಡೆಯಿತು,ಪಕ್ಷದ ಅಭ್ಯರ್ಥಿ ಇರದೇ ಇದ್ದರೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಪಕ್ಷ ಬೆಂಬಲ ಘೋಷಣೆ ಮಾಡಿ ಅವರ ಪರ ಕೆಲಸ ಮಾಡಿದ್ದರಿಂದ ಚರ್ಚೆ ಕೈಗೆತ್ತಿಕೊಳ್ಳಲಾಯಿತು.ಮಂಡ್ಯದ ಲೋಕಸಭೆ ಚುನಾವಣೆ ವರದಿಯನ್ನು ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗನಗೌಡ‌ ಸಲ್ಲಿಕೆ ಮಾಡಿದರು.45 ಸಾವಿರ ಲೀಡ್ ನಲ್ಲಿ ಸುಮಲತಾ ಗೆಲ್ಲುತ್ತಾರೆ ಅಂತ ವರದಿ ಸಲ್ಲಿಕೆ ಮಾಡಿದ್ದು,ಪಾಂಡವಪುರ ಮತ್ತು ಮೇಲುಕೋಟೆಯಲ್ಲಿ ಕೊಂಚ ಮುನ್ನಡೆಯನ್ನು ಜೆಡಿಎಸ್ ಪಡೆಯಲಿದೆ ಉಳಿದ್ದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಬಲದ ಮತಗಳಿಕೆಯಾಗಲಿದೆ.ಹಣಬಲದ ಮುಂದೆ ಸ್ವಾಭಿಮಾನಕ್ಕೆ ಗೆಲುವು ಸಿಗುತ್ತದೆ ಅಂತ ವರದಿ ಸಲ್ಲಿಕೆ ಮಾಡಲಾಯಿತು.

ವರದಿ ಸಲ್ಲಿಸುವ ವೇಳೆ ವಿಶೇಷ ಘಟನೆಗಳನ್ನು ಪ್ರಸ್ತಾಪಿಸುವಂತೆ ಯಡಿಯೂರಪ್ಪ ಸೂಚಿಸಿದರು.ಈ ವೇಳೆ ಮಂಡ್ಯದ ಚುನಾವಣೆ ವೇಳೆ ಪ್ರಸ್ತಾಪವಾಗಿದ್ದ ಮಾಯಾಂಗಿಣಿ, ಗಂಡ ಸತ್ತ ಹೆಂಡತಿ ಅಂತ ನೀಡಿದ ಹೇಳಿಕೆ, ಕಳ್ಳೆತ್ತು ಮತ್ತು ಜೋಡೆತ್ತು ಹೇಳಿಕೆ ಪ್ರಸ್ತಾಪ ಮಾಡಿ ವಿಶೇಷ ಘಟನೆಗಳನ್ನು ಮಂಡ್ಯ ಜಿಲ್ಲಾಧ್ಯಕ್ಷ ನಾಗನಗೌಡ ಪ್ರಸ್ತಾಪಿಸಿದರು.ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ಬಗ್ಗೆ ಒಂದೊಂದಾಗಿ ಹೇಳುತ್ತಿದ್ದಂತೆ ಸಾಕು ಬೀಡಿ ಇಡೀ ರಾಜ್ಯವೇ ನೋಡಿದೆ ಅಂತ ಊವಾಚಿಸಿದ ಬಿಎಸ್ ಯಡಿಯೂರಪ್ಪ ಮೂಲ ಮುಂದಿನ ಜಿಲ್ಲೆಯ ವರದಿಯತ್ತ ಕಣ್ಣಾಯಿಸಿದರು.

ಬಿಎಸ್ವೈ ತವರಿನಲ್ಲಿ ಗೆಲುವಿನ ಉಡುಗೊರೆಯ ವರದಿ:

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಗ್ಗೆ ಸಭೆಯಲ್ಲಿ ಭರ್ಜರಿ ಚರ್ಚೆ‌‌ ನಡೆಯಿತು.ಸಭೆಗೆ ಚುನಾವಣೆ ಮತ ಲೆಕ್ಕಾಚಾರದ ವರದಿಯನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ನೀಡಿತು. ಸಾಗರ ಮತ್ತು ಸೊರಬದಲ್ಲಿ ಅಲ್ಪ ಹಿನ್ನಡೆಯಾಗಬಹುದೆಂಬ ಆದರೂ ಉಪ ಚುನಾವಣೆಗೂ ಹೆಚ್ಚಿನ ಅಂತರದಲ್ಲಿ ಬಿಜೆಪಿ‌ ಗೆಲ್ಲುತ್ತದೆ ಎಂದು ವರದಿ ಸಲ್ಲಿಕೆ ಮಾಡಲಾಯಿತು.ಈ ವೇಳೆ ಆ ಕ್ಷೇತ್ರಗಳಲ್ಲಿ ಅಲ್ಪ ಮುನ್ನಡೆ ಅಥವಾ ಸಮಬಲದ ಲೀಡ್ ನೀಡುವುದಾಗಿ ಶಾಸಕರಾದ ಹರತಾಳ್ ಹಾಲಪ್ಪ ಮತ್ತು ಕುಮಾರ ಬಂಗಾರಪ್ಪರಿಂದ ಸ್ಪಷ್ಟೀಕರಣ ನೀಡಿದರು. ಅಂತಿಮವಾಗಿ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ, ಬೈಂದೂರು, ತೀರ್ಥಹಳ್ಳಿ, ಶಿಕಾರಿಪುರ ಕ್ಷೇತ್ರಗಳಿಂದ ಅಧಿಕ ಲೀಡ್ ಸಿಗಲಿದೆ ಉಪ ಚುನಾವಣೆಗಿಂತಲೂ ಈ ಭಾರಿ 1.50 ಲಕ್ಷ ಮತಗಳ ಮುನ್ನಡೆಯ ವರದಿ ಸಲ್ಲಿಕೆ ಮಾಡಲಾಯಿತು.

ತುಮಕೂರು,ಕೋಲಾರ,ಕಲಬುರಗಿಯಲ್ಲಿ ಸಮಬಲದ ಹೋರಾಟ ನಡೆಸಿರುವ ವರದಿ ಸಲ್ಲಿಕೆ ಮಾಡಿದ್ದು ಅಚ್ಚರಿ ಫಲಿತಾಂಶದ ವಿಶ್ವಾಸ ವ್ಯಕ್ತಪಡಿಸಲಾಗಿದೆ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು,ಉತ್ತರ ಕನ್ನಡ,ಮಂಗಳೂರು,ಬೆಳಗಾವಿ,ದಾವಣಗೆರೆ ಸಮಿತಿಗಳು ಗೆಲುವಿನ ವಿಶ್ವಾಸದ ವರದಿ ಸಲ್ಲಿಕೆ ಮಾಡಿದ್ದು,ಬಳ್ಳಾರಿ,ಚಿತ್ರದುರ್ಗ,ರಾಯಚೂರಿನಲ್ಲಿ ತೀವ್ರ ಸ್ಪರ್ಧೆ ನೀಡಿರುವ ವರದಿಯನ್ನು ಸಲ್ಲಿಕೆ ಮಾಡಲಾಯಿತು.

ಬಹುತೇಕ ಹಾಲಿ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ವಿಶ್ವಾಸ ಇಂದು ಜಿಲ್ಲಾ ಸಮಿತಿಗಳು ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ‌ ತಿಳಿದುಬಂದಿದೆ.

ಜಿಲ್ಲಾ ಸಮಿತಿಗಳ ವರದಿ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ,
ನಾಲ್ಕೂವರೆ ಗಂಟೆಗಳಿಂದ ಲೋಕಸಭೆ ಉಸ್ತುವಾರಿ ಗಳು ಮತ್ತು ಅಭ್ಯರ್ಥಿ ಗಳ ಜೊತೆ ಸಭೆ ಮಾಡಿದ್ದೇವೆ.ಕನಿಷ್ಠ 22 ಕ್ಷೇತ್ರ ಗೆಲ್ಲುತ್ತೇವೆ.ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ವೀರಪ್ಪ ಮೊಯ್ಲಿಗೆ ಸಮರ್ಪಕವಾಗಿ ಬಿಜೆಪಿ ಸವಾಲು ಒಡ್ಡಿದೆ.ನೂರಕ್ಕೆ ನೂರು 22 ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.