ರಾಯಚೂರು: ರಾಜ್ಯಸಭಾ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಅಶೋಕ ಗಸ್ತಿಯವರಿಗೆ ಬಿಜೆಪಿ ಯುವ ಮುಖಂಡ ನೋಟ್ ಬುಕ್ ಗಳನ್ನು ನೀಡುವ ಮೂಲಕ ವಿಭಿನ್ನವಾಗಿ ಅಭಿನಂದಿಸಿದರು.
ನಗರದ ಐಡಿಎಂಸಿ ಲೇ ಔಟ್ನಲ್ಲಿರುವ ಅವರ ನಿವಾಸಕ್ಕೆ ತೆರಳಿದ ಬಿಜೆಪಿ ಯುವ ಮುಖಂಡ ಪಿ.ಕಿರಣ್ ಹಾರ, ತುರಾಯಿ ಹಾಕದೆ ನೋಟ್ ಬುಕ್ ನೀಡಿ ಅಭಿನಂದಿಸಿದರು.
ಕಳೆದ ಮೂವತ್ತು ವರ್ಷಗಳಿಂದ ಪಕ್ಷದಲ್ಲಿದ್ದಕೊಂಡು ಪಕ್ಷ ಸಂಘಟಿಸುವಲ್ಲಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಇವರೀಗ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.