ETV Bharat / briefs

ಬ್ಲಾಕ್​ ಫಂಗಸ್​ ಬಗ್ಗೆ ರಾಜ್ಯಗಳು ಎಚ್ಚರದಿಂದಿರಿ: ಕೇಂದ್ರ ಸರ್ಕಾರ ಸೂಚನೆ - ಕೇಂದ್ರ ಸರ್ಕಾರ ಸೂಚನೆ

ಕೋವಿಡ್​ನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡ ರೋಗಿಗಳಲ್ಲಿ ಈ ರೋಗ ಪತ್ತೆಯಾಗುತ್ತಿದೆ. ಮಧುಮೇಹ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ರೋಗ ಬಹುಬೇಗ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

mucormycosis
mucormycosis
author img

By

Published : May 15, 2021, 8:08 PM IST

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ತರಂಗದಿಂದ ಉಂಟಾದ ಹಾನಿಯನ್ನು ದೇಶವು ಇನ್ನೂ ಎದುರಿಸುತ್ತಿದೆ. ಈ ನಡುವೆ ಮ್ಯೂಕಾರ್ಮೈಕೋಸಿಸ್(ಬ್ಲಾಕ್ ಫಂಗಸ್​) ಎಂಬ ಮತ್ತೊಂದು ಕಾಯಿಲೆ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಎಚ್ಚರಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮ್ಯೂಕೋಮೈಕೋಸಿಸ್ ವಿಷಯದ ಬಗ್ಗೆ ಎಚ್ಚರದಿಂದಿದ್ದು, ಜಾಗರೂಕರಾಗಿರುವಂತೆ ಕೇಳಿಕೊಂಡಿದೆ.

ಪ್ರಸ್ತುತ ಮ್ಯೂಕೋರ್ಮೈಕೋಸಿಸ್ ಸೋಂಕಿನ ಸಂಖ್ಯೆ ತೀರಾ ಕಡಿಮೆ ಇದ್ದರೂ, ಈ ಗಂಭೀರ ಶಿಲೀಂಧ್ರಗಳ ಸೋಂಕು ಮತ್ತು ಲೀಶ್ಮೇನಿಯಾಸಿಸ್​ಗೆ ಬಳಸುವ ಆಂಟಿಫಂಗಲ್​ಗೆ ಔಷಧಿಯಾದ ಆಂಫೊಟೆರಿಸಿನ್ ಬಿ ಉತ್ಪಾದನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ.ಪಾಲ್ ಹೇಳಿದರು.

ಏನಿದು ಬ್ಲಾಕ್​ ಫಂಗಸ್​:

ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು, ಶಿಲೀಂಧ್ರಗಳ ಸೋಂಕಿನಿಂದ ಉಂಟಾಗುವ ಒಂದು ಕಾಯಿಲೆ. ಪರಿಸರದಲ್ಲಿನ ಶಿಲೀಂಧ್ರ ಬೀಜಗಳೊಂದಿಗೆ ಸಂಪರ್ಕಕ್ಕೆ ಬರುವ ಜನರು ಮ್ಯೂಕೋರ್ಮೈಕೋಸಿಸ್​ಗೆ ಅಂಟಿಕೊಳ್ಳುತ್ತಾರೆ. ಇನ್ನು ಗಾಯಗೊಂಡಿರುವ ಚರ್ಮ, ಸುಟ್ಟಗಾಯ, ಅಥವಾ ಇತರ ಕಾರಣಗಳಿಂದ ಚರ್ಮದ ಮೇಲ್ಪದರ ಹೋಗಿದ್ದಲ್ಲಿ ಆ ಮೂಲಕ ಸುಲಭವಾಗಿ ಶಿಲೀಂಧ್ರವು ಚರ್ಮವನ್ನು ಪ್ರವೇಶಿಸಿದ ನಂತರ ಇದು ಚರ್ಮದ ಮೇಲೆ ಬೆಳೆಯುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.