ನವದೆಹಲಿ: ಪುಲ್ವಾಮಾ ಭೀಕರ ಉಗ್ರದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಸುಮಾರು 170 ಜೈಶ್ ಎ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವಿದೇಶಿ ಪತ್ರಕರ್ತೆಯೊಬ್ಬರು ಖಚಿತಪಡಿಸಿದ್ದಾರೆ.
ವಾಯುದಾಳಿಯಲ್ಲಿ ಯಾರೂ ಸತ್ತಿಲ್ಲ ಎನ್ನುವ ಪಾಕಿಸ್ತಾನದ ಹೇಳಿಕೆ ಶುದ್ಧ ಸುಳ್ಳು. ವಾಯುದಾಳಿ ನಡೆದ ಎರಡು ಗಂಟೆಗಳಲ್ಲಿ ಪಾಕ್ ಸೇನೆ ಸ್ಥಳಕ್ಕೆ ಆಗಮಿಸಿ ಎಲ್ಲ ಶವಗಳನ್ನು ಸ್ಥಳಾಂತರ ಮಾಡಿತ್ತು. ಗಾಯಾಳುಗಳನ್ನು ಪಕ್ಕದ ಶಿಂಕಿಯಾರಿ ಅರ್ಮಿ ಕ್ಯಾಂಪ್ ಕರೆದೊಯ್ದು ಚಿಕಿತ್ಸೆ ನೀಡಿತ್ತು ಎಂದು ಇಟಲಿ ಮೂಲದ ಪತ್ರಕರ್ತೆ ಫ್ರಾನ್ಸೆಸ್ಕಾ ಮರಿನೋ ಹೇಳಿದ್ದಾರೆ.
ಹೆಚ್ಚಿನ ಓದಿಗಾಗಿ:
ಬಾಲಾಕೋಟ್ ದಾಳಿ ವೇಳೆ ಕಲಿತ ಪಾಠ: ಸೇನೆ ಸೇರಲಿದೆ 'ಬಂಕರ್ ಬಸ್ಟರ್'
ವಾಯುದಾಳಿಯಲ್ಲಿ 45 ಮಂದಿ ಗಾಯಗೊಂಡಿದ್ದರು. ಅದರಲ್ಲಿ 20 ಮಂದಿ ಸಾವನ್ನಪ್ಪಿದ್ದು ಉಳಿದವರಿಗೆ ಇನ್ನೂ ಚಿಕಿತ್ಸೆ ಮುಂದುವರೆದಿದೆ ಎಂದು ಪತ್ರಕರ್ತೆ ಹೇಳಿದ್ದಾಳೆ. ಕಳೆದೊಂದು ವಾರದಲ್ಲಿ ಪಡೆದ ಖಚಿತ ಮಾಹಿತಿಯ ಆಧಾರದಲ್ಲಿ ವಾಯುದಾಳಿಯಲ್ಲಿ ಸುಮಾರು 170 ಮಂದಿ ಸತ್ತಿದ್ದಾರೆ ಎಂದು ಮರಿನೋ ಹೇಳಿದ್ದಾಳೆ.
ನಲ್ವತ್ತಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಬಾಲಕೋಟ್ನಲ್ಲಿನ ಉಗ್ರರ ಅಡಗುತಾಣಕ್ಕೆ ಫೆಬ್ರವರಿ 26ರ ಮುಂಜಾನೆ ಏರ್ಸ್ಟ್ರೈಕ್ ನಡೆಸಿತ್ತು.
ಈ ದಾಳಿಯಲ್ಲಿ ಸುಮಾರು 300 ಉಗ್ರರು ಬಲಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಸೇನೆ ಸಾವಿನ ಸಂಖ್ಯೆ ಬಗ್ಗೆ ಖಚಿತವಾಗಿ ಹೇಳುವುದು ಅಸಾಧ್ಯ, ಆದರೆ ಹಲವಾರು ಉಗ್ರರು ಸತ್ತಿರುವುದು ನಿಜ ಎಂದಿತ್ತು.