ETV Bharat / briefs

ಪ್ರಯಾಣಿಕರ ಸಂಖ್ಯೆ ಇಳಿಮುಖ: ಆಟೋ ಚಾಲಕರ ಪ್ರತಿಭಟನೆ

ಶಿವಮೊಗ್ಗದಲ್ಲಿ ನಿಗದಿತ ಸಮಯಕ್ಕೆ ಸಿಟಿ ಬಸ್​ಗಳು ಸಂಚರಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಶನಿವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

author img

By

Published : May 18, 2019, 8:57 PM IST

ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ಆಟೋ ಚಾಲಕರು

ಶಿವಮೊಗ್ಗ: ನಗರದ ಸಿಟಿ ಬಸ್​ಗಳು ನಿಗದಿತ ಸಮಯಕ್ಕಿಂತ ಮೊದಲೇ ಹೋಗುತ್ತಿರುವುದರಿಂದ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿದಿದೆ. ಆದ್ದರಿಂದ ನಿಗದಿತ ವೇಳೆಗೆ ಬಸ್​ಗಳು ಸಂಚರಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ರಸ್ತೆಗಳಲ್ಲಿ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸಿ ಶನಿವಾರ ಪ್ರತಿಭಟನೆ ನಡೆಸಿದರು.

shg
ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ಆಟೋ ಚಾಲಕರು

ನಿಗದಿತ ಸಮಯಕ್ಕೆ ಬಸ್​ಗಳು ಸಂಚರಿಸುವುದರಿಂದ ಕೆಲವು ಪ್ರಯಾಣಿಕರು ಆಟೋದಲ್ಲಿ ತೆರಳುತ್ತಾರೆ. ನಾವೆಲ್ಲ ಇದೇ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಮನಸೋ ಇಚ್ಛೆ ಬಸ್​ಗಳು ಸಂಚರಿಸುವುದರಿಂದ ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಚಾಲಕರ ಅಳಲಾಗಿದೆ.

ನಮ್ಮ ಆದಾಯಕ್ಕೆ ಕುತ್ತು ಬಂದಿದೆ. ಕೂಡಲೇ ನಗರದ ಸಿಟಿ ಬಸ್​ಗಳ ಸಂಚಾರಕ್ಕೆ ನಿಗದಿತ ವೇಳಾಪಟ್ಟಿ ಹಾಕಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಶಿವಮೊಗ್ಗ,
ಆಟೋ ಚಾಲಕರಿಂದ ಸಿಟಿ ಬಸ್ ತಡೆದು ಪ್ರತಿಭಟನೆ

ನಿಗದಿತ ಸಮಯಕ್ಕಿಂತ ಮೊದಲೇ ಸಿಟಿ ಬಸ್ ಗಳು ಸಂಚಾರ ಆರಂಭಿಸಿದಕ್ಕೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದು ರಸ್ತೆಯಲ್ಲೇ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ.

Body:ಆಟೋ ಚಾಲಕರು ರಸ್ತೆಯಲ್ಲಿ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿತ್ತು.
ಶಿವಮೊಗ್ಗದ ವಿವಿಧ ಬಡಾವಣೆಗಳಿಗೆ ತೆರಳುವರು ಹೆಚ್ಚಾಗಿ ಸಿಟಿ ಬಸ್ ಗಳನ್ನು ಅವಲಂಬಿಸಿದ್ದಾರೆ .
ಶಿವಮೊಗ್ಗ ಬಸ್ ನಿಲ್ದಾಣದ ಬಳಿ ನಿಗದಿತ ಸಮಯಕ್ಕಿಂತ ಮೊದಲೇ ಸಿಟಿ ಬಸ್ ಗಳ ಸಂಚಾರ ಆರಂಭಿಸಿರುವುದರಿಂದ ಆಟೋದಲ್ಲಿ ಪ್ರಾಯಾಣಿಸುವರ ಸಂಖ್ಯೆ ಇಳಿಮುಖವಾಗಿದೆ ಎನ್ನಲಾಗಿದೆ. ಇದರಿಂದ ಆಟೋ ಚಾಲಕರು ಸಿಟಿ ಬಸ್ ಗಳಲ್ಲಿ ನಿಗದಿತ ವೇಳೆಗಿಂತ ಮುಂಚಿತವಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದರು . ಆದರೆ ಸಿಟಿ ಬಸ್ ನಿಗದಿತ ವೆಳೆಗಿಂತ ಮುಂಚೆಯೆ ರಸ್ತೆ ಗಿಳಿದಿರುವುದರಿಂದ ಆಟೋ ಚಾಲಕರಿಗೆ ಆದಾಯ ಕಡಿಮೆಯಾಗಿದೆ ಎನ್ನುವುದು ಆಟೋ ಚಾಲಕರ ಅಳಲಾಗಿದೆ.

Conclusion:ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಸಿಟಿ ಬಸ್ಸಿಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಆಕ್ರೋಶ ಹೊರಹಾಕಿದ್ದಾರೆ.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.