ETV Bharat / briefs

ಗಾಯಗೊಂಡ ಆಲ್​ರೌಂಡರ್​​​​... ವಿಶ್ವಕಪ್​​​ ಆರಂಭದಲ್ಲೇ ಆಸ್ಟ್ರೇಲಿಯಾಗೆ ಆಘಾತ!

author img

By

Published : Jun 11, 2019, 6:25 PM IST

ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡದ ಆಲ್​​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಸೈಡ್​ಸ್ಟ್ರೈನ್​ ನೋವಿಗೆ ತುತ್ತಾಗಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯದಕ್ಕೆ ಅಲಭ್ಯರಾಗಿದ್ದಾರೆ.

asis

ಲಂಡನ್​: ಭಾರತದೆದುರು ಸೋಲನುಭವಿಸಿ ಸಂಕಷ್ಟದಲ್ಲಿರುವ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಬಲಪಕ್ಕೆಯ ಸ್ನಾಯು ಸೆಳೆತಕ್ಕೊಳಗಾಗಿದ್ದು, ನಾಳೆ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಸ್ಟೋಯ್ನೀಸ್​ ಗಾಯವೇನಾದರು ಗಂಭೀರ ಎನಿಸಿದರೆ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಹಾಗೂ ಮಧ್ಯಮ ವೇಗಿಯಾಗಿದ್ದ ಸ್ಟೋಯ್ನಿಸ್​ ಗಾಯದಿಂದ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಇವರ ಬದಲಿಗೆ ಟೆಸ್ಟ್​ ತಂಡದ ಉಪ ನಾಯಕ ಮಿಚೆಲ್​ ಮಾರ್ಶ್​​ರನ್ನು ಇಂಗ್ಲೆಂಡ್​ಗೆ​ ಕರೆಸಿಕೊಳ್ಳಲು ಆಸೀಸ್​ ಆಯ್ಕೆ ಸಮಿತಿ ನಿರ್ಧರಿಸಿದೆ.

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಏಕದಿನ ತಂಡದಿಂದ ಅವಕಾಶ ವಂಚಿತರಾಗಿದ್ದ ಮಾರ್ಶ್​ ಇದೀಗ ಮತ್ತೆ ಏಕದಿನ ತಂಡದಲ್ಲಿ ಆಡುವ ಅದ್ಭುತ ಅವಕಾಶ ಸಿಕ್ಕಿದೆ. ಒಂದು ವೇಳೆ ಸ್ಟೋಯ್ನಿಸ್​ ವಿಶ್ವಕಪ್​ನಿಂದಲೇ ಹೊರಗುಳಿಯಬೇಕಾದ ಸಂದರ್ಭ ಬಂದರೆ ಮಾರ್ಶ್​ಗೆ ವಿಶ್ವಕಪ್​ ತಂಡದ 11ರ ಬಳಗದಲ್ಲೂ ಆಡುವ ಭಾಗ್ಯ ಸಿಗಬಹುದು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದ್ದ ಹಾಲಿ ಚಾಂಪಿಯನ್ನರಿಗೆ ಮುಂದಿನ ಪಂದ್ಯಕ್ಕೂ ಮೊದಲೇ ಪ್ರಮುಖ ಆಟಗಾರನ ಗಾಯ ದೊಡ್ಡ ತಲೆನೋವು ತಂದಿದೆ. ಇಂಗ್ಲೆಂಡ್​ನಂತಹ ಬಲಿಷ್ಠ ತಂಡವನ್ನು ಮಣಿಸಿರುವ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯುವ ಮುನ್ನ ಸ್ಟೋಯ್ನಿಸ್​ ಅನುಪಸ್ಥಿತಿ ಖಂಡಿತಾ ಕಾಡಲಿದೆ. ಸದ್ಯ ಮಿಚೆಲ್​ ಮಾರ್ಶ್​ ಇನ್ನು ಇಂಗ್ಲೆಂಡ್​ ತಲುಪಿಲ್ಲ. ನಾಳಿನ ಪಂದ್ಯದಲ್ಲಿ ಸ್ಟೋಯ್ನಿಸ್​ ಬದಲಿಗೆ ಶಾನ್​ ಮಾರ್ಶ್​, ನಥನ್​ ಲಿಯಾನ್​ ಅಥವಾ ಕೇನ್​ ರಿಚರ್ಡ್ಸ್​ನ್​ ತಂಡ ಸೇರಿಕೊಳ್ಳಲಿದ್ದಾರೆ.

ನಾಳೆ ಟೌಂಟನ್​ನಲ್ಲಿ ಆಸೀಸ್​ ಪಾಕಿಸ್ತಾನವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡದ 2 ಗೆಲುವು ಹಾಗೂ ಒಂದು ಸೋಲು ಕಂಡಿದ್ದರೆ, ಪಾಕಿಸ್ತಾನ ತಲಾ ಒಂದು ಗೆಲುವು, ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.