ETV Bharat / briefs

ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌‌‌... 5 ಬಾರಿ ಆರೆಂಜ್‌ ಕ್ಯಾಪ್‌ ಪಡೆದಿದ್ದಾರೆ ಒಂದೇ ದೇಶದ ಆ ಆಟಗಾರರು!

ಮುಂಬೈ: ವಿಶ್ವ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಐಪಿಎಲ್‌ ಹೊಡಿಬಡಿ ಆಟಕ್ಕೆ ಪ್ರಮುಖ ಆಕರ್ಷಣೆಯಾಗಿದೆ.

ಕೃಪೆ: Twitter
author img

By

Published : Mar 11, 2019, 9:20 PM IST

ಐಪಿಎಲ್‌ನಲ್ಲಿ ಪ್ರತಿ ಪಂದ್ಯವೂ ರೋಚಕ ಕ್ಷಣದಿಂದ ಕೂಡಿರುತ್ತದೆ. ಇದುವರೆಗೂ ನಡೆದಿರುವ 11ಸೀಸನ್‌ಗಳಲ್ಲಿ ಹಲವಾರು ಆಟಗಾರರು ಬ್ಯಾಟಿಂಗ್‌ನಲ್ಲಿ ತಮ್ಮ ಪರಾಕ್ರಮ ತೋರಿ ಅತಿ ಹೆಚ್ಚು ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಪಡೆದಿದ್ದಾರೆ. ಆರೆಂಜ್‌ ಕ್ಯಾಪ್‌ ಪಡೆದ ಆಟಗಾರರ ವಿವರ ಇಲ್ಲಿದೆ ನೋಡಿ.

2008 ರಲ್ಲಿ ಶುರುವಾದ ಐಪಿಎಲ್‌ ಮೊದಲ ಸೀಸನ್‌ನಲ್ಲೇ ರನ್‌ಗಳ ಸುರಿಮಳೆಯೇ ಹರಿದು ಬಂದಿತ್ತು. ಈ ಸೀಸನ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆರಂಭಿಕರಾಗಿ ಆಡಿದ್ದ ಆಸ್ಟ್ರೇಲಿಯಾದ ಶಾನ್‌ ಮಾರ್ಷ್ 11 ಪಂದ್ಯಗಳಲ್ಲಿ ಒಂದು ಶತಕ, 5 ಅರ್ಧ ಶತಕ ಸಹಿತ 616 ರನ್‌ ಗಳಿಸಿ ಚೊಚ್ಚಲ ಆರೆಂಜ್‌ ಕ್ಯಾಪ್‌ ಪಡೆದಿದ್ದರು.

2009ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಮ್ಯಾಥ್ಯೂ ಹೇಡನ್‌ 5 ಅರ್ಧ ಶತಕ ಸಹಿತ 572 ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಪಡೆದಿದ್ದರು. 2010 ರಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ 5 ಅರ್ಧ ಶತಕ ಸಿಡಿಸಿದ್ದರಲ್ಲದೇ 618ರನ್‌ ಗಳಿಸಿ ತಾವು ಎಲ್ಲ ಮಾದರಿಯ ಕ್ರಿಕೆಟ್‌ಗೆ ಸೈ ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟಿದ್ದರು. ಜೊತೆಗೆ ಯುವ ಆಟಗಾರರನ್ನು ಮೀರಿಸಿ ಆರೆಂಜ್‌ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲೇ ತಂಡವನ್ನು ಫೈನಲ್‌ವರೆಗೂ ತಂದಿದ್ದರು.

2011ರಲ್ಲಿ ಅನಿರೀಕ್ಷಿತವಾಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ವಿಂಡೀಸ್‌ ದೈತ್ಯ ಕ್ರಿಸ್‌ ಗೇಲ್‌ ಕೇವಲ 12 ಪಂದ್ಯಗಳಲ್ಲಿ 2 ಶತಕ, 3 ಅರ್ಧ ಶತಕ ಸಹಿತ 608ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು. ಗೇಲ್‌ ಸ್ಫೋಟಕ ಆಟದಿಂದ ಆರ್‌‌ಸಿಬಿ ತಂಡ ರನ್ನರ್‌ ಆಪ್‌ ಆಗಿತ್ತು. 2012 ರಲ್ಲೂ ಬ್ಯಾಟಿಂಗ್‌ ಅಬ್ಬರ ಮುಂದುವರೆಸಿದ್ದ ಗೇಲ್‌ ಒಂದು ಶತಕ, 7 ಅರ್ಧ ಶತಕ ಸಹಿತ ದಾಖಲೆಯ 733 ರನ್‌ ಗಳಿಸಿ ಸತತ ಎರಡನೇ ಬಾರಿಗೆ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು.

2013ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಮೈಕ್‌ ಹಸ್ಸಿ (733 ರನ್‌, 6 ಅರ್ಧ ಶತಕ), 2014ರಲ್ಲಿ ಕೆಕೆಆರ್‌ ಪರ ಆಡಿದ್ದ ಕನ್ನಡಿಗ ರಾಬಿನ್‌ ಉತ್ತಪ್ಪ (660 ರನ್‌ 5 ಅರ್ಧಶತಕ), 2015ರಲ್ಲಿ ಸನ್‌ ರೈಸರ್ಸ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ (562 ರನ್‌ 7 ಅರ್ದ ಶತಕ) ಆರೆಂಜ್‌ ಕ್ಯಾಪ್‌ಗೆ ಭಾಜನರಾಗಿದ್ದರು.

2016ರಲ್ಲಿ ಆವೃತ್ತಿಯಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿದ್ದರು. ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ 4 ಶತಕ ಹಾಗೂ 7 ಅರ್ಧ ಶತಕ ಸಹಿತ ಬರೋಬ್ಬರಿ 973 ರನ್‌ ಗಳಿಸಿ ದಾಖಲೆ ನಿರ್ಮಿಸಿದ್ದರು. 2017ರಲ್ಲಿ ಸನ್‌ ರೈಸರ್ಸ್‌ ಹೈದರಬಾದ್‌ನ ನಾಯಕ ಡೇವಿಡ್‌ ವಾರ್ನರ್‌ ಒಂದು ಶತಕ, 4 ಅರ್ಧಶತಕ ಸಹಿತ 641 ಕ್ರಿಸ್‌ ಗೇಲ್‌ ಬಳಿಕ ಎರಡನೇ ಬಾರಿಗೆ ಆರೆಂಜ್‌ ಕ್ಯಾಪ್‌ ಪಡೆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

ಇನ್ನು ಕಳೆದ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ 17 ಪಂದ್ಯಗಳಲ್ಲಿ 8 ಅರ್ಧಶತಕಗಳ ಸಹಿತ 735 ರನ್​ಗಳಿಸುವ ಮೂಲಕ ಕೊಹ್ಲಿ ನಂತರ ಐಪಿಎಲ್​ ಇತಿಹಾಸದಲ್ಲಿ ಒಂದು ಆವೃತ್ತಿಯಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರ ಎಂದೆನಿಸಿದರು.

Intro:Body:

ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌‌‌...  5 ಬಾರಿ ಆರೆಂಜ್‌ ಕ್ಯಾಪ್‌ ಪಡೆದಿದ್ದಾರೆ ಒಂದೇ ದೇಶದ ಆ ಆಟಗಾರರು! 

kannada newspaper, kannada news, etv bharat, Australia players, got, five times, orange cap, IPL, ಐಪಿಎಲ್‌, ಅತಿಹೆಚ್ಚು ರನ್‌,  5 ಬಾರಿ, ಆರೆಂಜ್‌ ಕ್ಯಾಪ್‌, ಪಡೆದಿದ್ದಾರೆ, ಒಂದೇ ದೇಶ, ಆಟಗಾರರು, 

Australia players got five times orange cap in IPL

ಮುಂಬೈ: ವಿಶ್ವ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಐಪಿಎಲ್‌ ಹೊಡಿಬಡಿ ಆಟಕ್ಕೆ ಪ್ರಮುಖ ಆಕರ್ಷಣೆಯಾಗಿದೆ.

ಐಪಿಎಲ್‌ನಲ್ಲಿ ಪ್ರತಿ ಪಂದ್ಯವೂ ರೋಚಕ ಕ್ಷಣದಿಂದ ಕೂಡಿರುತ್ತದೆ. ಇದುವರೆಗೂ ನಡೆದಿರುವ 11ಸೀಸನ್‌ಗಳಲ್ಲಿ ಹಲವಾರು ಆಟಗಾರರು ಬ್ಯಾಟಿಂಗ್‌ನಲ್ಲಿ ತಮ್ಮ ಪರಾಕ್ರಮ ತೋರಿ ಅತಿ ಹೆಚ್ಚು ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಪಡೆದಿದ್ದಾರೆ. ಆರೆಂಜ್‌ ಕ್ಯಾಪ್‌ ಪಡೆದ ಆಟಗಾರರ ವಿವರ ಇಲ್ಲಿದೆ ನೋಡಿ.

2008 ರಲ್ಲಿ ಶುರುವಾದ ಐಪಿಎಲ್‌ ಮೊದಲ ಸೀಸನ್‌ನಲ್ಲೇ ರನ್‌ಗಳ ಸುರಿಮಳೆಯೇ ಹರಿದು ಬಂದಿತ್ತು. ಈ ಸೀಸನ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆರಂಭಿಕರಾಗಿ ಆಡಿದ್ದ ಆಸ್ಟ್ರೇಲಿಯಾದ ಶಾನ್‌ ಮಾರ್ಷ್ 11 ಪಂದ್ಯಗಳಲ್ಲಿ ಒಂದು ಶತಕ, 5 ಅರ್ಧ ಶತಕ ಸಹಿತ 616 ರನ್‌ ಗಳಿಸಿ ಚೊಚ್ಚಲ ಆರೆಂಜ್‌ ಕ್ಯಾಪ್‌ ಪಡೆದಿದ್ದರು.

2009ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಮ್ಯಾಥ್ಯೂ ಹೇಡನ್‌ 5 ಅರ್ಧ ಶತಕ ಸಹಿತ 572 ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಪಡೆದಿದ್ದರು. 2010 ರಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ 5 ಅರ್ಧ ಶತಕ ಸಿಡಿಸಿದ್ದರಲ್ಲದೇ 618ರನ್‌ ಗಳಿಸಿ ತಾವು ಎಲ್ಲ ಮಾದರಿಯ ಕ್ರಿಕೆಟ್‌ಗೆ ಸೈ ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟಿದ್ದರು. ಜೊತೆಗೆ ಯುವ ಆಟಗಾರರನ್ನು ಮೀರಿಸಿ ಆರೆಂಜ್‌ ಕ್ಯಾಪ್  ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲೇ ತಂಡವನ್ನು ಫೈನಲ್‌ವರೆಗೂ ತಂದಿದ್ದರು.

2011ರಲ್ಲಿ ಅನಿರೀಕ್ಷಿತವಾಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ವಿಂಡೀಸ್‌ ದೈತ್ಯ ಕ್ರಿಸ್‌ ಗೇಲ್‌ ಕೇವಲ 12 ಪಂದ್ಯಗಳಲ್ಲಿ 2 ಶತಕ, 3 ಅರ್ಧ ಶತಕ ಸಹಿತ 608ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು. ಗೇಲ್‌ ಸ್ಫೋಟಕ ಆಟದಿಂದ ಆರ್‌‌ಸಿಬಿ ತಂಡ ರನ್ನರ್‌ ಆಪ್‌ ಆಗಿತ್ತು. 2012 ರಲ್ಲೂ ಬ್ಯಾಟಿಂಗ್‌ ಅಬ್ಬರ ಮುಂದುವರೆಸಿದ್ದ ಗೇಲ್‌ ಒಂದು ಶತಕ, 7 ಅರ್ಧ ಶತಕ ಸಹಿತ ದಾಖಲೆಯ 733 ರನ್‌ ಗಳಿಸಿ ಸತತ ಎರಡನೇ ಬಾರಿಗೆ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು.

2013ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಮೈಕ್‌ ಹಸ್ಸಿ (733 ರನ್‌, 6 ಅರ್ಧ ಶತಕ), 2014ರಲ್ಲಿ ಕೆಕೆಆರ್‌ ಪರ ಆಡಿದ್ದ ಕನ್ನಡಿಗ ರಾಬಿನ್‌ ಉತ್ತಪ್ಪ (660 ರನ್‌ 5 ಅರ್ಧಶತಕ), 2015ರಲ್ಲಿ ಸನ್‌ ರೈಸರ್ಸ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ (562 ರನ್‌ 7 ಅರ್ದ ಶತಕ) ಆರೆಂಜ್‌ ಕ್ಯಾಪ್‌ಗೆ ಭಾಜನರಾಗಿದ್ದರು.

2016ರಲ್ಲಿ ಆವೃತ್ತಿಯಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿದ್ದರು. ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ 4 ಶತಕ ಹಾಗೂ 7 ಅರ್ಧ ಶತಕ ಸಹಿತ ಬರೋಬ್ಬರಿ 973 ರನ್‌ ಗಳಿಸಿ ದಾಖಲೆ ನಿರ್ಮಿಸಿದ್ದರು. 2017ರಲ್ಲಿ  ಸನ್‌ ರೈಸರ್ಸ್‌ ಹೈದರಬಾದ್‌ನ ನಾಯಕ ಡೇವಿಡ್‌ ವಾರ್ನರ್‌ ಒಂದು ಶತಕ, 4 ಅರ್ಧಶತಕ ಸಹಿತ 641 ಕ್ರಿಸ್‌ ಗೇಲ್‌ ಬಳಿಕ ಎರಡನೇ ಬಾರಿಗೆ ಆರೆಂಜ್‌ ಕ್ಯಾಪ್‌ ಪಡೆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

ಇನ್ನು ಕಳೆದ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ 17 ಪಂದ್ಯಗಳಲ್ಲಿ 8 ಅರ್ಧಶತಕಗಳ ಸಹಿತ 735 ರನ್​ಗಳಿಸುವ ಮೂಲಕ ಕೊಹ್ಲಿ ನಂತರ ಐಪಿಎಲ್​ ಇತಿಹಾಸದಲ್ಲಿ ಒಂದು ಆವೃತ್ತಿಯಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರ ಎಂದೆನಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.