ಟೌಂಟನ್: ಸತತ ಎರಡು ಪಂದ್ಯಗಳ ಮಳೆಗೆ ಆಹುತಿಯಾದ ನಂತರ ವಿಶ್ವಕಪ್ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದ್ದು, ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಆಸೀಸ್ ಉತ್ತಮ ಆರಂಭ ಕಂಡಿದೆ.
ಟಾಸ್ ಗೆದ್ದ ಪಾಕಿಸ್ತಾನ ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯ ತಂಡ 16 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 117 ರನ್ಗಳಿಸಿದೆ. ಫಿಂಚ್ 66 ಹಾಗೂ ವಾರ್ನರ್ 43 ರನ್ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಮುಖಾಮುಖಿ:
ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿಶ್ವಕಪ್ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು 5 ಬಾರಿ ಆಸ್ಟ್ರೇಲಿಯಾ 4 ಬಾರಿ ಪಾಕಿಸ್ತಾನ ಗೆಲುವು ಸಾಧಿಸಿದೆ.
ತಂಡಗಳು:
ಪಾಕಿಸ್ತಾನ:
ಸರ್ಫರಾಜ್ ಅಹ್ಮದ್(ನಾಯಕ), ಫಾಖರ್ ಝಮಾನ್, ಆಸಿಫ್ ಅಲಿ, ಹಸನ್ ಅಲಿ, ಇಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಬಾಬರ್ ಅಜಂ, ಮೊಹ್ಮದ್ ಆಮಿರ್, ವಹಾಬ್ ರಿಯಾಜ್, ಶಾಹೀನ್ ಆಫ್ರಿದಿ
ಆಸ್ಟ್ರೇಲಿಯಾ ತಂಡ:
ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮೀತ್, ಗ್ಲೆನ್ ಮ್ಯಾಕ್ಸ್ವೆಲ್, ಶಾನ್ ಮಾರ್ಶ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಥನ್ ಕೌಲ್ಟರ್ ನೈಲ್, ಕೇನ್ ರಿಚರ್ಡ್ಸ್ನ್, ಮಿಚೆಲ್ ಸ್ಟಾರ್ಕ್