ಲಂಡನ್ : ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದ ಆಸ್ಟ್ರೇಲಿಯಾ ತಾನು ಆಡಿರುವ 2ನೇ ಅಭ್ಯಾಸ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ಸುಲಭ ಗೆಲುವು ದಾಖಲು ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸದ ಶ್ರೀಲಂಕಾ ಲಾಹೀರು ತಿರುಮನ್ನೆ(56) ಹಾಗೂ ಧಂಜನಯ ಸಿಲ್ವಾ(43)ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8ವಿಕೆಟ್ ಕಳೆದುಕೊಂಡು 239ರನ್ ಗಳಿಕೆ ಮಾಡಿತು.
ಇದರ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಫಿಂಚ್(11)ವಿಕೆಟ್ ಕಳೆದುಕೊಂಡರೂ ಉಸ್ಮಾನ್ ಖವಾಜಾ(89), ಶಾನ್ ಮಾರ್ಷ್(34), ಮ್ಯಾಕ್ಸ್ವೆಲ್(36) ಹಾಗೂ ಸ್ಟೋನಿಸ್(32) ರನ್ಗಳ ನೆರವಿನಿಂದ 44.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 241ರನ್ಗಳಿಗೆ ಮಾಡುವ ಮೂಲಕ ಸುಲಭವಾಗಿ ಗೆಲುವಿನ ನಗೆ ಬೀರಿದೆ.
ಅಭ್ಯಾಸ ಪಂದ್ಯದಲ್ಲಿ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ವಿಶ್ವಕಪ್ ಮಹಾಯುದ್ಧಕ್ಕೆ ಸನ್ನದ್ಧವಾಗಿದೆ. ಜೂನ್ 1ರಂದು ಆಫ್ಘಾನಿಸ್ತಾನ ವಿರುದ್ಧ ಆಸೀಸ್ ಮೊದಲ ಪಂದ್ಯದಲ್ಲಿ ಸೆಣೆಸಲಿದೆ.