ETV Bharat / briefs

ವಾರ್ನರ್​,ಸ್ಮಿತ್​ ಬ್ಯಾಟಿಂಗ್​ ಮಿಂಚು,ಆಂಗ್ಲರ ಅಟ್ಟಹಾಸ ಮಟ್ಟ ಹಾಕಿದ ಆಸೀಸ್!​ - ಆಸ್ಟ್ರೇಲಿಯಾ

ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ,ಇಂಗ್ಲೆಂಡ್​ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ 12 ರನ್​ಗಳಿಂದ ಗೆದ್ದು ಬೀಗಿದೆ.

wc
author img

By

Published : May 25, 2019, 11:38 PM IST

ಸೌತಂಪ್ಟನ್​: ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ಗೆ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ 12 ರನ್​ಗಳಿಂದ ಸೋಲುಣಿಸಿದೆ.

ಆಸೀಸ್​ ನೀಡಿದ 298 ರನ್​ಗಳ ಗುರಿ ಬೆನ್ನೆಟ್ಟಿದ ಇಂಗ್ಲೆಂಡ್​ 49.3 ಓವರ್​ಗಳಲ್ಲಿ 285 ರನ್​ಗಳಿಸಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು. ಬೈರ್ಸ್ಟೋವ್​ ಕೇವಲ12 ರನ್ ​ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಜೇಮ್ಸ್​ ವಿನ್ಸ್​ 64, ಜಾಸನ್​ ರಾಯ್​ 32, ಜೋಸ್​ ಬಟ್ಲರ್​ 52 ಹಾಗೂ ಕ್ರಿಸ್​ ವೋಕ್ಸ್​ 40 ರನ್​ಗಳಿಸಿ ಗೆಲುವಿಗಾಗಿ ನಡೆಸಿದ ಪ್ರಯತ್ನ ವಿಫಲವಾಯಿತು.

ಆಸೀಸ್​ ಪರ ಬೆಹ್ರನ್​ ಡ್ರಾಫ್​ 2, ಕೇನ್​ ರಿಚರ್ಡ್ಸನ್​ 2, ಕೌಲ್ಟರ್​ ಲೈನ್​, ಜಂಪಾ, ಲಿಯಾನ್​,ಸ್ಟೋಯ್ನಿಸ್​ ತಲಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ತಂಡ ಸ್ಟಿವ್​ ಸ್ಮಿತ್​ ಅವರ ಭರ್ಜರಿ ಶತಕ(116) ಹಾಗೂ ಡೇವಿಡ್​ ವಾರ್ನರ್​ (43), ಕ್ಯಾರಿ(30) ಶಾನ್​ ಮಾರ್ಷ್ ಹಾಗೂ ಖವಾಜ ತಲಾ​ 30 ನರ್​ಗಳಿಸಿ 297 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.