ಕ್ಸಿಯಾನ್(ಚೀನಾ): ಭಾರತದ ಭರವಸೆಯ ಕುಸ್ತಿಪಟುಗಳಾದ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಪೋಗಟ್ ಚೀನಾದ ಕ್ಷಿಯಾನ್ನಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ 4ನೇ ಪದಕ ತಂದುಕೊಟ್ಟಿದ್ದಾರೆ.
50 ಕೆಜಿ ವಿಭಾಗದಲ್ಲಿ 2018ರ ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದ ವಿನೇಶ್ ಪೋಗಟ್ ಶುಕ್ರವಾರ ನಡೆದ ಕ್ವಾರ್ಟರ್ ಪೈನಲ್ನಲ್ಲಿ ಜಪಾನಿನ ಮಾಯು ಮುಕಿಡಾ ವಿರುದ್ಧ 0-10 ರಲ್ಲಿ ಸೋಲನುಭವಿಸಿದರು.
-
Unhappy and unsatisfied with my performance today at the #AsianWrestlingChampionship. Lots of aspects to improve and perfect. Only positive was that I managed to finish off the tournament with a win. Thank you everyone for your good wishes and support 🙏 pic.twitter.com/X1opi7q7WG
— Vinesh Phogat (@Phogat_Vinesh) April 26, 2019 " class="align-text-top noRightClick twitterSection" data="
">Unhappy and unsatisfied with my performance today at the #AsianWrestlingChampionship. Lots of aspects to improve and perfect. Only positive was that I managed to finish off the tournament with a win. Thank you everyone for your good wishes and support 🙏 pic.twitter.com/X1opi7q7WG
— Vinesh Phogat (@Phogat_Vinesh) April 26, 2019Unhappy and unsatisfied with my performance today at the #AsianWrestlingChampionship. Lots of aspects to improve and perfect. Only positive was that I managed to finish off the tournament with a win. Thank you everyone for your good wishes and support 🙏 pic.twitter.com/X1opi7q7WG
— Vinesh Phogat (@Phogat_Vinesh) April 26, 2019
62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ರೆಪೆಚೇಜ್ ಸುತ್ತಿನ ಮೂಲಕವೇ 9-6 ಅಂಕಗಳ ಅಂತರದಿಂದ ಉತ್ತರ ಕೊರಿಯಾದ ಹೈಯಾನ್ ಜಿಯಾಂಗ್ ಮುನ್ ಅವರನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿ ಭಾರತಕ್ಕೆ 4 ನೇ ಪದಕ ಒದಗಿಸಿದರು.
ಇವರಿಬ್ಬರಿಗೂ ಮುನ್ನ ಮಂಜು ಕುಮಾರಿ (59 ಕೆಜಿ) ಮತ್ತು ದಿವ್ಯಾ ಕಾಕ್ರನ್ (68 ಕೆಜಿ) ಕಂಚಿನ ಪದಕ ಜಯಿಸಿದ್ದರು.
- " class="align-text-top noRightClick twitterSection" data="">