ನವದೆಹಲಿ: ಭಾರತದಲ್ಲಿ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆ ಅಪಾಯದ ಮುನ್ಸೂಚನೆ ತೋರಿಸುತ್ತಿದೆ ಎನ್ನುವುದು ಅಧ್ಯಯನದಲ್ಲಿ ಬಹಿರಂಗವಾಗಿದೆ.
ದೇಶದಲ್ಲಿ ಪ್ರತಿವರ್ಷ ಐದು ವರ್ಷ ಕೆಳಗಿನ ಪ್ರಾಯದ ಸುಮಾರು 1 ಲಕ್ಷ ಮಕ್ಕಳು ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.
ಭಾರತದಲ್ಲಿ ಪ್ರತೀ ವರ್ಷ ಶೇ.12.5ರಷ್ಟು ಮಂದಿ ವಾಯುಮಾಲಿನ್ಯದಿಂದಲೇ ಜೀವನ ಕೊನೆಗೊಳಿಸುತ್ತಿದ್ದಾರೆ ಎಂದು ಆತಂಕಕಾರಿ ವಿಷಯವನ್ನು ಹೊರಹಾಕಿದೆ.
ರಾಷ್ಟ್ರ ರಾಜಧಾನಿ ನವದೆಹಲಿ ದೇಶದಲ್ಲೇ ಅತ್ಯಂತ ಹೆಚ್ಚು ವಾಯುಮಾಲಿನ್ಯ ಭರಿತ ನಗರ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.